Malenadu Mitra
ಜಿಲ್ಲೆ ಶಿವಮೊಗ್ಗ

ತೀರ್ಥಹಳ್ಳಿ ರಸ್ತೆಯಲ್ಲಿ ಭೀಕರ ಅಪಘಾತ : ಇಬ್ಬರು ಯುವಕರು ಧಾರುಣ ಸಾವು

ಶಿವಮೊಗ್ಗ : ಹೊರವಲಯದ ಹರಕೆರೆ ಸಮೀಪ ಬೈಕ್ ನಿಯಂತ್ರಣ ತಪ್ಪಿ ಭೀಕರ ಅಫಘಾತ ನಡೆದಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌.

ಆರ್ ಎಂಎಲ್ ನಗರದ ನಿಸಾರ್ ಹಾಗೂ ಮಂಜುನಾಥ ಬಡಾವಣೆಯ ಯಶವಂತ್ ಮೃತ ದುರ್ದೈವಿಗಳು.
ಶಿವಮೊಗ್ಗ- ತೀರ್ಥಹಳ್ಳಿ ರಸ್ತೆಯ ಹರಕೆರೆ ಸಮೀಪದ ಕಾನೇಹಳ್ಳ ಬಳಿ ಇಂದು ಬೆಳಿಗ್ಗೆ ಅಪಘಾತ ನಡೆದಿದ್ದು, ಕೆಟಿಎಂ ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರು ಮೃತಪಟ್ಟಿದ್ದಾರೆ.
ಶಿವಮೊಗ್ಗ ನಗರದಿಂದ ಗಾಜನೂರಿನ ಐಟಿಐ ಕಾಲೇಜಿಗೆ ಯುವಕರಿಬ್ಬರು ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಮರ ಹಾಗೂ ಜಾಹೀರಾತು ಫಲಕದ ಕಂಬಕ್ಕೆ ಢಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದ್ದು, ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Related posts

ಅರಣ್ಯಇಲಾಖೆಯ ಪಾತ್ರ ತುಂಬಾ ಮುಖ್ಯ : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ

Malenadu Mirror Desk

ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ ಪರಿಹಾರ ಭಾನುವಾರ ಚೆಕ್ ಹಸ್ತಾಂತರಿಸಲಿರುವ ಯಡಿಯೂರಪ್ಪ, ಸಚಿವ ಕೆ.ಎಸ್ ಈಶ್ವರಪ್ಪ

Malenadu Mirror Desk

ಕೃಷಿಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.