ಶಿವಮೊಗ್ಗ : ಶಿಕಾರಿಪುರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದು, ಮೂರುವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ.
ತಾಲೂಕಿನ ಮತ್ತಿಕೋಟೆ ನಿವಾಸಿ ಇಮ್ರಾನ್ ಅವರ ಪುತ್ರ ಆಯಾನ್(3) ಮೃತಪಟ್ಟ ಬಾಲಕ.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಯೊಬ್ಬರ ಯೋಗಕ್ಷೇಮ ವಿಚಾರಿಸಲು ಮತ್ತಿಕೋಟೆಯ ಇಮ್ರಾನ್, ಪತ್ನಿ ಹಾಗೂ ಮಗ ಅಯಾನ್ ನೊಂದಿಗೆ ಬಂದಿದ್ದರು. ಈ ವೇಳೆ ಹಿಂಭಾಗದಲ್ಲಿರುವ ತೊಟ್ಟಿಯ ಕಡೆ ಹೋಗಿ, ಬಾಲಕ ಅದರಲ್ಲಿ ಬಿದ್ದಿದ್ದಾನೆ. ಅಕ್ಕಪಕ್ಕ ಹುಡುಕಾಡಿದ ನಂತರ, ತೊಟ್ಟಿ ಪರಿಶೀಲಿಸಿದಾಗ ಬಾಲಕನ ಶವ ಅದರಲ್ಲಿ ಕಂಡುಬಂದಿದೆ.
ಈ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.