ಶಿವಮೊಗ್ಗ : ಜಿಲ್ಲೆಯ ಶಿರಾಳಕೊಪ್ಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಭೇಟಿ ನೀಡಿದ್ದು, ಸದರಿ ಶಾಲೆಯನ್ನು ಕೆಪಿಎಸ್ ಆಗಿ ಉನ್ನತೀಕರಿಸುವುದಾಗಿ ಘೋಷಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿರುವ ಶಾಲೆಗೆ ಇಂದು ದಿಢೀರ್ ಭೇಟಿದ ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನ ಶಾಲಾ ಮಕ್ಕಳು ಹೂ ನೀಡಿ ಸ್ವಾಗತಿಸಿದ್ರು.,
“ನಮ್ಮ ಸರ್ಕಾರ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಾಜಿ ಸಿಎಂ ಬಂಗಾರಪ್ಪ ಓದಿರುವ ಈ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಉನ್ನತ ದರ್ಜೆಗೇರಿಸಲಾಗುವುದು. ಇದರಿಂದ ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ.
– ಮಧು ಬಂಗಾರಪ್ಪ.
ಮಾಜಿ ಸಿಎಂ ಹಾಗೂ ತಂದೆ ಎಸ್.ಬಂಗಾರಪ್ಪ ಓದಿದ ಸದರಿ ಶಾಲೆಯ ಆವರಣದಲ್ಲಿ ಓಡಾಡಿದ ಸಚಿವರು, ತಮ್ಮ ತಂದೆಯ ನೆನಪು ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರು, ಕಾಂಗ್ರೆಸ್ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು, ಶಿಕ್ಷಕರು ಉಪಸ್ಥಿತರಿದ್ದರು.