Malenadu Mitra
ಜಿಲ್ಲೆ

“ಲೀಕ್ ಔಟ್” ನಾಟಕ – ಡಿ.7 ರಂದು ಶಿವಮೊಗ್ಗದಲ್ಲಿ 100ನೇ ಪ್ರದರ್ಶನ

ಶಿವಮೊಗ್ಗ : ಕನ್ನಡ ರಂಗಭೂಮಿಯ ಖ್ಯಾತ ಕಲಾವಿದೆ ಅಕ್ಷತಾ ಪಾಂಡವಪುರ ಅಭಿನಯದ “ಲೀಕ್ ಔಟ್” ನಾಟಕದ 100ನೇ ಪ್ರದರ್ಶನ ಶಿವಮೊಗ್ಗದಲ್ಲಿ ನಡೆಯಲಿದೆ.
ರಾಜ್ಯಾದ್ಯಂತ ಈಗಾಗಲೇ 99 ಯಶಸ್ವಿ ಪ್ರದರ್ಶನ ಕಂಡ ಈ ನಾಟಕದ ನೂರನೇ ಪ್ರದರ್ಶನವನ್ನ ಕಲಾವಿದರ ಒಕ್ಕೂಟ ಡಿ.7ರ ಸಂಜೆ 6.30ಕ್ಕೆ ಶಿವಮೊಗ್ಗದಲ್ಲಿ ಆಯೋಜಿಸಿದೆ ಎಂದು ಹಿರಿಯ ರಂಗಕರ್ಮಿ ಕಾಂತೇಶ್ ಕದರಮಂಡಲಗಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಅಕ್ಷತಾ ಪಾಂಡವಪುರ ಅವರು ಪಲ್ಲಟ ಸಿನಿಮಾದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇವರ ಅಭಿನಯದ ಪಿಂಕಿ ಎಲ್ಲಿ..? ಹಾಗೂ ಕೋಳಿ ಎಸ್ರು ಸಿನಿಮಾ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿ ಸಹ ಪಡೆದಿವೆ ಎಂದರು.

ಡಿ.7ರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೀಕ್ ಔಟ್ ನಾಟಕದ ಈವರೆಗಿನ ಆಯೋಜಕರಿಗೆ ಅಭಿನಂದನೆ, 100 ಪ್ರದರ್ಶನ ಸಾಗಿಬಂದ ದಾರಿಯ ಅನುಭವ ಕಥನದ ಕೃತಿ ಬಿಡುಗಡೆ ಹಾಗೂ ಚಿತ್ರ ಬಿಡುಗಡೆ ಸಹ ನಡೆಯಲಿದೆ. ಕಾರ್ಯಕ್ರಮವನ್ನು ಸದ್ಭಾವನಾ ಟ್ರಸ್ಟ್ ಅಧ್ಯಕ್ಷ ಎಂ. ಶ್ರೀಕಾಂತ್ ಉದ್ಘಾಟಿಸಲಿದ್ದು, ಕಲೆ ಮತ್ತು ಲಿಂಗ ತಾರತಮ್ಯ ವಿಷಯ ಕುರಿತು ಸವಿತಾ ಬನ್ನಾಡಿ ಮಾತನಾಡಲಿದ್ದಾರೆ. ದಾದಾಪೀರ್ ನವಿಲೇಹಾಳ್ ಅವರು ಕೃತಿ ಕುರಿತು ಮಾತನಾಡಲಿದ್ದು, ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಡಾಕ್ಯುಮೆಂಟರಿ ಬಿಡುಗಡೆ ಮಾಡಲಿದ್ದಾರೆ ಎಂದರು.


ಇನ್ನು ಅದೇ ದಿನ ಸಂಜೆ 6.30ಕ್ಕೆ ಸರ್ಕಾರಿ ನೌಕರ ಭವನದಲ್ಲಿ ‘ಲೀಕ್ ಔಟ್ ನಾಟಕದ 100ನೇ ಪ್ರದರ್ಶನ’ ನಡೆಯಲಿದ್ದು, ಖ್ಯಾತ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ಚಾಲನೆ ನೀಡಲಿದ್ದಾರೆ. ಪಾಂಡವಪುರದ ದಿ ಚಾನೆಲ್ ಥಿಯೇಟರ್ ಅರ್ಪಿಸುವ ಈ ನಾಟಕವನ್ನ ಅಕ್ಷತಾ ಪಾಂಡವಪುರ ಮತ್ತು ತಂಡ ಪ್ರಸ್ತುತಪಡಿಸಲಿದ್ದು, ಪ್ರೇಕ್ಷಕರಿಗೆ ಉಚಿತ ಪ್ರವೇಶವಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಲಾವಿದರ ಒಕ್ಕೂಟದ ಪರವಾಗಿ ಕಾಂತೇಶ್ ಮನವಿ ಮಾಡಿದ್ದಾರೆ.

Ad Widget

Related posts

ರೈತರ ಹೋರಾಟ ಮತ್ತಷ್ಟು ಬಿರುಸು : ನಾಳೆ ಲಿಂಗನಮಕ್ಕಿ ಚಲೋ

Malenadu Mirror Desk

ಹೊಸನಗರ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ವಜಾಕ್ಕೆ ಮನವಿ

Malenadu Mirror Desk

ಅನ್ಯಾಯ ಖಂಡಿಸಲು ಪಕ್ಷ ಅಡ್ಡಿಯಾಗದು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.