Malenadu Mitra
ರಾಜ್ಯ ಶಿವಮೊಗ್ಗ

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು: ಸರ್ಕಾರದ ಕ್ರಮವನ್ನ ಪ್ರಶ್ನಿಸಿದ ಡಾ.ಸರ್ಜಿ

ಬೆಳಗಾವಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ವಿಚಾರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈ ಸರಣಿ ಸಾವಿನ ಹಿನ್ನೆಲೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದ್ದೀರಾ ಹಾಗೂ ರಾಜ್ಯದ ಜನತೆಗೆ ಯಾವ ರೀತಿ ಆತ್ಮ ಸ್ಥೈರ್ಯ ತುಂಬಿದ್ದೀರಾ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಸರ್ಕಾರವನ್ನ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಮಂಗಳವಾರ ಬಾಣಂತಿಯರ ಸಾವಿನ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಬಳ್ಳಾರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಬಳಿಕ ಆಸ್ಪತ್ರೆಗೆ ಹೆರಿಗೆ ಮತ್ತು ಇತರೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಕ್ಷೀಣಿಸಿದೆ. ಬಳ್ಳಾರಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ 580 ಹೆರಿಗೆ, ಅಕ್ಟೋಬರ್ ನಲ್ಲಿ 577 ಹಾಗೂ ಬಾಣಂತಿಯರ ಸಾವಿನ ಪ್ರಕರಣ ನಡೆದ ನಂತರ 289 ಹೆರಿಯಾದರೆ, ಡಿಸೆಂಬರ್ 14 ರ ಅಂಕಿ ಅಂಶದಂತೆ 74 ಹೆರಿಗೆಯಾಗಿದೆ. ಗರ್ಭಿಣಿಯರು ಆತಂಕಗೊಂಡು ಬಳ್ಳಾರಿ ಆಸ್ಪತ್ರೆಗೆ ಬರುವುದು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ. ಆ ಭಾಗದ ಜನ ಮತ್ತೆ ಆಸ್ಪತ್ರೆಗೆ ಬರಲು ಯಾವ ರೀತಿಯ ಆತ್ಮಸ್ಥೈರ್ಯವನ್ನು ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಪ್ರೊಜನ್ ರಿಂಗರ್ ಲ್ಯಾಕ್ಟೆಡ್ ಎಂಬ ಮೆಡಿಸಿನ್ ನಿಂದ ಸಮಸ್ಯೆ ಎದುರಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ರಿಂಗರ್ ಲ್ಯಾಕ್ಟೆಡ್ ಮೆಡಿಸನ್ ಅನ್ನು ಫ್ರೀಜ್ ಮಾಡುವ ಹಾಗೆ ಇಲ್ಲ ಹಾಗೂ ಅಷ್ಟು ದೊಡ್ಡ ಜಿಲ್ಲಾಸ್ಪತ್ರೆಯಲ್ಲಿ ಆ ಮೆಡಿಸಿನ್ ಬಾಣಂತಿಯರಿಗೆ ಮಾತ್ರ ನೀಡಿರುವುದಿಲ್ಲ. ಬೇರೆ ರೋಗಿಗಳಿಗೂ ಬಳಸಿರುತ್ತಾರೆ. ಆದರೆ ಬೇರೆ ರೋಗಿಗಳಿಗೆ ಅಷ್ಟು ಸಮಸ್ಯೆ ಆಗದ ಈ ಮೆಡಿಸನ್ ಬಾಣಂತಿಯರಿಗೆ ಮಾತ್ರ ಯಾಕೆ ಇಷ್ಟೊಂದು ಸಮಸ್ಯೆಯಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಐವಿ ಪ್ಲ್ಯೂಡ್ ನ ರಿಯಾಕ್ಸ ನ್ ಆಗುವ ಸಾಧ್ಯತೆ ತೀರಾ ಕಡಿಮೆ. ಐವಿ ಪ್ಲ್ಯೂಡ್ ನ ಬಹು ಅಂಗಾಂಗಳಿಗೆ ತೊಂದರೆಯಾಗಿದೆ ಎಂಬ ವರದಿ ಇದೆ. ಸಮಸ್ಯೆ ಆಗುವುದಾದರೆ ಇತರರಿಗೂ ಆಗಬೇಕಿತ್ತು. ಆದರೆ, ಹಾಗಾಗಿಲ್ಲ, ಹಾಗಿದ್ದರೆ ಅದರ ಅವಧಿ ಮುಗಿದಿತ್ತಾ.. ? ಇಲ್ಲವೇ ಫಂಗಸ್ ಬೆಳೆದಿತ್ತಾ..? ಯಾಕಾಗಿ ಅದೇ ಕಂಪನಿಯಿಂದ ಖರೀದಿಸಲಾಗುತ್ತಿದೆ. ದರವೆಷ್ಟು? ಬೇರೆ ಕಂಪನಿಗಳಿಗೂ ಇದಕ್ಕೂ ಇರುವ ವ್ಯತ್ಯಾಸವೇನು..? ಆ ಕಂಪನಿಯನ್ನೇ ಆಯ್ಕೆ ಮಾಡಿರುವ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರವನ್ನು ಡಾ.ಧನಂಜಯ ಸರ್ಜಿ ಆಗ್ರಹಿಸಿದರು.

Ad Widget

Related posts

ಮಹಿಳೆ-ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣನೆ : ಕೆ.ಬಿ.ಶಿವಕುಮಾರ್

Malenadu Mirror Desk

ಹಾಲು ಉತ್ಪಾದಕರ ಬೆನ್ನಿಗೆ ಶಿಮುಲ್ : ಶ್ರೀಪಾದ ನಿಸರಾಣಿ

Malenadu Mirror Desk

ಶಿವರಾತ್ರಿಯಂದು ಹರಕರೆ ರಾಮೇಶ್ವರ ದೇವಸ್ಥಾನಕ್ಕೆ ಭಕ್ತರಿಗೆ ಪ್ರವೇಶವಿಲ್ಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.