ಶಿವಮೊಗ್ಗ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ಶಿವಮೊಗ್ಗದ ಸೋಗಾನೆ ಸೆಂಟ್ರಲ್ ಜೈಲಿನಲ್ಲಿದ್ದ ಎ-12 ಆರೋಪಿ ಲಕ್ಷಣ್ ಇಂದು ಬಿಡುಗಡೆಯಾಗಿದ್ದಾನೆ.
ಶಿವಮೊಗ್ಗದ ಸೋಗಾನೆ ಜೈಲಿನಲ್ಲಿದ್ದ ಇಬ್ಬರು ಆರೋಪಿಗಳಿಗೆ ಕಳೆದ ಶುಕ್ರವಾರ ಹೈಕೋರ್ಟ್ ನಲ್ಲಿ ಜಾಮೀನು ದೊರಕಿತ್ತು. ಎ-6 ಆರೋಪಿ ಜಗದೀಶ್ ಹಾಗೂ ಎ-12 ಆರೋಪಿ ಲಕ್ಷಣ್ ಗೆ ಜಾಮೀನು ಮಂಜೂರಾಗಿತ್ತು.
ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್ ಜೈಲಿಗೆ ಇಂದು ಆರೋಪಿ ಲಕ್ಷಣ್ ಜಾಮೀನು ಆದೇಶ ಪ್ರತಿ ತಲುಪಿದ ಹಿನ್ನೆಲೆ ಜೈಲಿನಿಂದ ಆತ ಬಿಡುಗಡೆಯಾಗಿದ್ದಾನೆ.
ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷಣ್:
ಶಿವಮೊಗ್ಗ ಜೈಲಿನ ಅಧಿಕಾರಿಗಳು ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ಹೊರಬಂದ ಲಕ್ಷಣ್ ಓಡೋಡಿ ಕಾರು ಹತ್ತಿದ್ದಾನೆ. ಲಕ್ಷಣ್ ಕರೆದೊಯ್ಯಲು ಮೊದಲೇ ಬಂದು ಕಾಯುತ್ತಿದ್ದ ಸಹೋದರಿ ಮತ್ತು ಖಳ ನಟ ರಾಜಕುಮಾರ್ ಜೊತೆ ಕಾರಿನಲ್ಲಿ ಬೆಂಗಳೂರಿನತ್ತ ಲಕ್ಷಣ್ ತೆರಳಿದ್ದಾನೆ.
ಜಾಮೀನು ದೊರೆತರೂ, ಜೈಲಿನಲ್ಲೇ ಉಳಿದ ಜಗದೀಶ್:
ಇನ್ನು ಕೊಲೆ ಪ್ರಕರಣದ ಎ-6 ಆರೋಪಿಗೂ ಕೂಡ ಶುಕ್ರವಾರವೇ ಜಾಮೀನು ಮಂಜೂರಾಗಿದೆ. ಆದರೇ, ಶ್ಯೂರಿಟಿ ಸಿಗದ ಹಿನ್ನೆಲೆ ಆರೋಪಿ ಜಗದೀಶ್ ಜೈಲಿನಲ್ಲೇ ಉಳಿಯುವಂತಾಗಿದೆ.