Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಬೆಳಗಾವಿ ಅಧಿವೇಶನ ವೀಕ್ಷಿಸಿದ ಸೊರಬದ ಕಾಲೇಜು ವಿದ್ಯಾರ್ಥಿಗಳು

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಸುಮಾರು 350ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳು ಬೆಳಗಾವಿಯ ಸುವರ್ಣಸೌಧಕ್ಕೆ ಭೇಟಿ ನೀಡಿ, ವಿಧಾನ ಮಂಡಲ ಚಳಿಗಾಲದ ಅಧಿವೇಶನವನ್ನ ವೀಕ್ಷಿಸಿದ್ದಾರೆ.
ಸೊರಬ ಶಾಸಕ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಆಹ್ವಾನದ ಮೇರೆಗೆ ಸೊರಬ ತಾಲೂಕಿನ ಸಿರಿವಂತೆ, ಸೊರಬ, ಉಳವಿ ಹಾಗೂ ಆನವಟ್ಟಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 350ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ವಿಶೇಷ ಬಸ್ಸಿನಲ್ಲಿ ಬೆಳಗಾವಿಗೆ ತೆರೆಳಿ, ಕಲಾಪವನ್ನ ವೀಕ್ಷಿಸಿದರು.

ಸುವರ್ಣಸೌಧದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಧಾನಸಭೆ ಕಲಾಪವನ್ನು ವೀಕ್ಷಿಸಿದರು. ಬಳಿಕ ವಿಧಾನ ಪರಿಷತ್ ಕಲಾಪವನ್ನು ಸಹ ವೀಕ್ಷಿಸಿದರು. ಸೊರಬದ ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವುದಕ್ಕೆ ಉಭಯ ಸದನಗಳ ಸಭಾಪತಿಗಳಿಂದ ಸಚಿವ ಮಧು ಬಂಗಾರಪ್ಪ ಮೊದಲೇ ಅನುಮತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಎರಡು ಸದನಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕಲಾಪ ವೀಕ್ಷಿಸಿ, ಪುಳಕಿತರಾದರು.

ಬಳಿಕ ಸುವರ್ಣಸೌಧದ ವಿಶೇಷ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಳಿಕ ಸಚಿವರು ಹಾಗೂ ಶಾಸಕರೊಂದಿಗಿನ ಸಂವಾದದ ವೇಳೆ ಮಾತನಾಡಿದ ಆನವಟ್ಟಿ ಜೂನಿಯರ್ ಕಾಲೇಜು ವಿದ್ಯಾರ್ಥಿ ನಾಗಯ್ಯ ಸ್ವಾಮಿ “ಸಿಇಟಿ ಗೆ ಸೂಕ್ತ ಪಠ್ಯ ಪರಿಕರಗಳು ಇಲ್ಲ ಮತ್ತು ಕೆಲವು ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇದನ್ನು ಬಗೆಹರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

“ಸೈನ್ಸ್ ಮತ್ತು ಕಾಮರ್ಸ್ ಪ್ರವೇಶಕ್ಕೆ ಸರ್ಕಾರದಿಂದ ಉಚಿತ ತರಬೇತಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಸಹ ಸರ್ಕಾರದ ವತಿಯಿಂದ ತರಬೇತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ.”

-ನಾಗವೇಣಿ,
ಸೊರಬ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ.

ಬಳಿಕ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಗಳಿಗೂ ರಾಜಕೀಯ ಜ್ಞಾನಬೇಕೆಂಬ ಕಾರಣಕ್ಕೆ ಸೊರಬದ ವಿದ್ಯಾರ್ಥಿಗಳಿಗೆ ಅಲ್ಲಿನ ಉಪನ್ಯಾಸಕ ಸಿಬ್ಬಂದಿ, ಆಡಳಿತ ಮಂಡಳಿ ಒತ್ತಾಸೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಅತೀವ ಉತ್ಸಾಹದಿಂದಲೇ ಕಲಾಪವನ್ನು ವೀಕ್ಷಿಸಿ, ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದು ನಿಜಕ್ಕೂ ವಿಶೇಷ ಎನಿಸಿತು. ಯುವಜನತೆಗೆ ರಾಜಕೀಯ ಜ್ಞಾನ ಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ಗೊತ್ತಾಗಬೇಕಿದೆ ಎಂದರು.

ಸುವರ್ಣಸೌಧದ ಸಭಾಂಗಣದಲ್ಲಿ ಸಚಿವರಾದ ಕೆ.ಎನ್ ರಾಜಣ್ಣ, ಶರಣಬಸಪ್ಪಗೌಡ ದರ್ಶನಾಪುರ ಅವರು ಶೈಕ್ಷಣಿಕವಾಗಿ ಮಕ್ಕಳಿಗೆ ಶಿಕ್ಷಣದ ಅರಿವು ಹಾಗೂ ಅದರ ಮಹತ್ವದ ಕುರಿತು ತಿಳಿಸಿದರು.
ಬಳಿಕ ನೆರೆದಿದ್ದ ವಿದ್ಯಾರ್ಥಿಗಳೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿ ಗೌಡ, ಎಂ.ಆರ್ ಸೀತಾರಾಂ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ ಪಿ.ಸಿ ಜಾಫರ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಭೀಮಣ್ಣ ಟಿ ನಾಯ್ಕ್, ರಾಜು ಚಿಮ್ಮನಕಟ್ಟಿ ಸೇರಿದಂತೆ ಶಾಲಾ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Ad Widget

Related posts

ಅಮೆರಿಕಾದ ಅಥೆನ್ಸ್ ವಿವಿಯೊಂದಿಗೆ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕಿದ ಕುವೆಂಪು ವಿವಿ

Malenadu Mirror Desk

ಅರಣ್ಯ ಹಕ್ಕು ಕಾಯ್ದೆ ಸರಳೀಕರಣಗೊಳಿಸಬೇಕು, ತಿದ್ದುಪಡಿ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಅನಿವಾರ್ಯತೆ ಇದೆ : ಕೆ.ಎಸ್.ಗುರುಮೂರ್ತಿ

Malenadu Mirror Desk

ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.