ಶಿವಮೊಗ್ಗ: ರೈಲ್ವೇ ಇಲಾಖೆಯ ನೈರುತ್ಯ ರೈಲ್ವೆ ವಲಯದ 116 ಪ್ಯಾಸೆಂಜರ್ ಟ್ರೈನ್ ಗೆ ಮರುಸಂಖ್ಯೆ ( ಹೊಸ ನಂಬರ್) ನೀಡಲು ನಿರ್ಧರಿಸಿದ್ದು, ಅದರಂತೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ 6 ಟ್ರೈನ್ ನಂಬರ್ ವರ್ಷಾಂತ್ಯಕ್ಕೆ ಬದಲಾಗಲಿದೆ.
ನೈರುತ್ಯ ರೈಲ್ವೆ ವಿಭಾಗದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ‘0’ ಸಂಖ್ಯೆ ವ್ಯವಸ್ಥೆಯ ಬದಲಾಗಿ ‘5’, ‘6’ ಅಥವಾ ‘7’ ರಿಂದ ಪ್ರಾರಂಭವಾಗುವ ಸಂಖ್ಯೆಗಳೊಂದಿಗೆ ಬದಲಾಯಿಸಲು ನಿರ್ಧರಿಸಲಾಗಿದೆ.
ಅದರಂತೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ 6 ರೈಲುಗಳ ಸಂಖ್ಯೆ ಬದಲಾಗಲಿದ್ದು, 2025 ರ ಜನವರಿ 1 ರಿಂದಲೇ ಜಾರಿಗೆ ಬರಲಿದೆ.
ಶಿವಮೊಗ್ಗ ಟ್ರೈನ್ ಗಳ ಹೊಸ ನಂಬರ್:
‘07349’ ಇದ್ದ ತಾಳಗುಪ್ಪ- ಶಿವಮೊಗ್ಗ ಟೌನ್ ಟ್ರೈನ್ ನಂಬರ್ ‘56217’ ಆಗಿ ಬದಲಾಗಿದೆ. ಅದೇ ರೀತಿ ‘07350’ ಇದ್ದ ಶಿವಮೊಗ್ಗ ಟೌನ್ – ತಾಳಗುಪ್ಪ ಟ್ರೈನ್ ನ ನಂಬರ್ ‘56218’ ಆಗಿ ಬದಲಾಗಿದೆ.
ಇನ್ನು ‘07365’ ಇದ್ದ ಶಿವಮೊಗ್ಗ ಟೌನ್ – ಚಿಕ್ಕಮಗಳೂರು ಟ್ರೈನ್ ನಂಬರ್ ‘56271’ ಬದಲಾಗಿದೆ. ಅದೇ ರೀತಿ ‘07366’ ಇದ್ದ ಚಿಕ್ಕಮಗಳೂರು- ಶಿವಮೊಗ್ಗ ಟೌನ್ ಟ್ರೈನ್ ನ ನಂಬರ್ ‘56272’ ಆಗಿ ಬದಲಾಗಿದೆ.
ಇವುಗಳ ಜೊತೆಗೆ ‘06513’ ಇದ್ದ ತುಮಕೂರು- ಶಿವಮೊಗ್ಗ ಟೌನ್ ಮೆಮು ಟ್ರೈನ್ ನಂಬರ್ ‘66577’ ಆಗಿ ಬದಲಾಗಿದ್ದು, ಅದೇ ರೀತಿ ‘06514’ ಇದ್ದ ಶಿವಮೊಗ್ಗ ಟೌನ್- ತುಮಕೂರು ಮೆಮು ಟ್ರೈನ್ ನ ನಂಬರ್ ‘66578’ ಆಗಿ ಬದಲಾಯಿಸಲಾಗಿದೆ.
ಈ ರೈಲುಗಳ ಮರುಸಂಖ್ಯೆ ವ್ಯವಸ್ಥೆಯು ಹೊಸ ವರ್ಷದಿಂದಲೇ ಜಾರಿಗೆ ಬರಲಿದ್ದು, ಅನಾನುಕೂಲತೆ ತಪ್ಪಿಸಲು ಪ್ರಯಾಣಿಕರು ರೈಲುಗಳ ಪರಿಷ್ಕೃತ ನಂಬರ್ ಗಳನ್ನು ಗಮನಿಸುವಂತೆ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಮನವಿ ಮಾಡಿದ್ದಾರೆ.