ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಮೂವರು ಯುವಕರು ರಾಜಸ್ಥಾನದ ಜೈಪುರದಲ್ಲಿ ಜನವರಿ 3 ರಿಂದ 7 ವರೆಗೆ ನಡೆಯಲಿರುವ ರಾಷ್ಟ್ರೀಯ ನೆಟ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಕರೂರು ಹೋಬಳಿಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಇಲ್ಲಿನ ಮಳೂರು ಗ್ರಾಮದ ಕೀರ್ತನ್. ಆರ್, ಕಿರೇತೋಡಿ ಗ್ರಾಮದ ಗಣೇಶ್.ಎಂ ಹಾಗೂ ಹೊನಗಲು ಗ್ರಾಮದ ಮಣಿಕಂಠ.ಎಂ.ಸಿ ಆಯ್ಕೆಯಾಗಿದ್ದಾರೆ.
ಇವರೆಲ್ಲರೂ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ದ್ವೀತಿಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಯುವಕರ ಸಾಧನೆಗೆ ಹಿನ್ನೀರ ಭಾಗದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
previous post