ಶಿವಮೊಗ್ಗ: ನಗರದಲ್ಲಿ ಬೆಳಿಗ್ಗೆಯೇ ನೆತ್ತರು ಹರಿದಿದ್ದು, ಗಂಡನೇ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿದ್ದಾನೆ.
ನಗರದ ವಾದಿ-ಎ-ಹುದಾದ 5 ಕ್ರಾಸ್ ನ ಮನೆಯೊಂದರಲ್ಲಿ ಘಟನೆ ನಡೆದಿದೆ.
ರುಕ್ಸಾನ(38) ಕೊಲೆಯಾದ ಮಹಿಳೆ.
ಎಸಿ ಮೆಕ್ಯಾನಿಕ್ ಆಗಿರುವ ಯೂಸಫ್ ಇಂದು ಬೆಳಿಗ್ಗೆ ಪತ್ನಿ ರುಕ್ಸಾನ ಜೊತೆ ಗಲಾಟೆ ಆರಂಭಿಸಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ.
ಕೌಟುಂಬಿಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದ್ದು, ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಕೊಲೆ ಆರೋಪಿ ಯೂಸಫ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
previous post