Malenadu Mitra
ಜಿಲ್ಲೆಶಿವಮೊಗ್ಗ

ಇನ್ನೋವಾ ಕಾರಿನ ಡಿಕ್ಕಿಯಲ್ಲಿ ಗಾಂಜಾ ಪತ್ತೆ: 7 ಜನರ ಬಂಧನ

ಶಿವಮೊಗ್ಗ: ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ 7 ಜನರನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಆಜಾದ್ ನಗರದ ತನ್ವೀರ್ ಪಾಷಾ ಅಲಿಯಾಸ್ ಮಾರ್ಕೆಟ್ ಫೌಜಾನ್(26), ಮೊಹಮ್ಮದ್ ಇಬ್ರಾಹಿಂ @ ಮುನ್ನ(25), ಆರ್ ಎಂ ಎಲ್ ನಗರದ ಅಕೀಫ್ @ ಪುಕ್ಕಿ (28), ಮೊಹಮ್ಮದ್ ಫೈಜಲ್ @ ಬಚ್ಚಾ ಫೈಜಲ್ (21), ಇಲಿಯಾಜ್ ನಗರದ ಅರ್ಬಾಜ್ ಖಾನ್ @ ಮಜರ್ (26), ಟಿಪ್ಪು ನಗರದ ಜಾಫರ್ ಸಾದಿಕ್(25), ಸವಾಯಿಪಾಳ್ಯದ ಅಬ್ದುಲ್ ಅಜೀಜ್(25) ಬಂಧಿತರು.
ನಗರದ ಸಾಗರ ರಸ್ತೆಯ ಎಂಎಡಿಬಿ ಕಚೇರಿ ಎದುರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಇನ್ನೋವಾ ಕಾರು ಪರಿಶೀಲಿಸಿದಾಗ ಗಾಂಜಾ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ 1.15 ಲಕ್ಷ ರೂ. ಮೌಲ್ಯದ 1.217 ಕೆಜಿ ಒಣ ಗಾಂಜಾ ಮತ್ತು 5 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ರವಿ ಪಾಟೀಲ್ ಹಾಗೂ ಪಿಎಸ್ಐ ವಸಂತ್ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದಾಗ ವಿಚಾರ ಬೆಳಕಿಗೆ ಬಂದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Related posts

ರಿಪ್ಪನ್ ಪೇಟೆ: ಬಂಡಿ,ಕಲಗೋಡು, ತಿಮ್ಮಪ್ಪ ಪ್ರಬಲ ಆಕಾಂಕ್ಷಿಗಳು

Malenadu Mirror Desk

ರಾಜ್ಯದಲ್ಲಿ ಆಪರೇಷನ್ ಕಮಲ, ಎಂಪಿ ಚುನಾವಣೆ ಬಳಿಕ ಕಾಂಗ್ರೆಸ್ ಸರಕಾರ ಇರಲ್ಲ ಎಂದ ಈಶ್ವರಪ್ಪ

Malenadu Mirror Desk

ಭಗವದ್ಗೀತೆ ಎಲ್ಲರಿಗೂ ಮಾರ್ಗದರ್ಶಿ ; ಶ್ರೀ ಸ್ವಾಮಿ ಶಾರದೇಶಾನಂದಜೀ ಮಹಾರಾಜ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.