Malenadu Mitra
ರಾಜ್ಯ ಶಿವಮೊಗ್ಗ

ನಕ್ಸಲ್ ಮುಂಡಗಾರು ಲತಾ ಶಿವಮೊಗ್ಗ ಪೊಲೀಸರ ವಶಕ್ಕೆ: ಇಂದೇ ತೀರ್ಥಹಳ್ಳಿ ಕೋರ್ಟ್ ಗೆ

ಶಿವಮೊಗ್ಗ: ಕಳೆದ ತಿಂಗಳಷ್ಟೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿ ಮುಖ್ಯವಾಹಿನಿಗೆ ಬಂದ 6 ಜನ ನಕ್ಸಲರಲ್ಲಿ ಇಬ್ಬರನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ತೀರ್ಥಹಳ್ಳಿ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.
ಶರಣಾದ ನಕ್ಸಲರ ಪೈಕಿ ಮುಂಡಗಾರು ಲತಾ ಹಾಗೂ ವನಜಾಕ್ಷಿ ಬಾಳೆಹೊಳೆ ಅವರನ್ನು ಬಾಡಿ ವಾರಂಟ್ ಮೂಲಕ ಶಿವಮೊಗ್ಗದ ತೀರ್ಥಹಳ್ಳಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು, ಇಂದು ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
ಆಗುಂಬೆ ಪೊಲೀಸ್ ಠಾಣೆಯ 2 ಹಾಗೂ ಹೊಸನಗರ ಠಾಣೆಯ 1 ಕೇಸ್ ಸೇರಿದಂತೆ ಒಟ್ಟು ಮೂರು ಕೇಸ್ ಗಳಲ್ಲಿ ಇಬ್ಬರು ನಕ್ಸಲರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿರುವ ಶಿವಮೊಗ್ಗ ಪೊಲೀಸ್ ಟೀಂ, ಬಿಗಿ ಭದ್ರತೆಯಲ್ಲಿ ನಕ್ಸಲರನ್ನು ಕರೆತರುತ್ತಿದ್ದು, ಮಧ್ಯಾಹ್ನದ ವೇಳೆಗೆ ತೀರ್ಥಹಳ್ಳಿ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಮಂಗಳವಾರ ಇನ್ನೊಂದು ಪ್ರಕರಣದಲ್ಲಿ ತೀರ್ಥಹಳ್ಳಿಯ ಕೋರ್ಟ್ ಗೆ ಹಾಜರು ಪಡಿಸಲಿದ್ದು, ಬುಧವಾರ ಹೊಸನಗರದ ಕೋರ್ಟ್ ಗೂ ಹಾಜರು ಪಡಿಸಲಿದ್ದು, ಬಳಿಕ ನಕ್ಸಲರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಶಿವಮೊಗ್ಗ ಪೊಲೀಸರು ಪಡೆದು, ಕರೆತರುತ್ತಿರುವ ಮುಂಡಗಾರು ಲತಾ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದವರು. ಹಲವು ವರ್ಷಗಳಿಂದ ಇವರು ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು, ಇವರ ವಿರುದ್ಧ 85 ಪ್ರಕರಣಗಳಿವೆ. ಶಿವಮೊಗ್ಗ ಜಿಲ್ಲೆಯಲ್ಲೇ ಲತಾ ವಿರುದ್ಧ ಆಗುಂಬೆ ಠಾಣೆಯಲ್ಲಿ ಮೂರು(12/9, 51/09 ಹಾಗೂ 03/12) ಕೇಸ್ ದಾಖಲಾಗಿವೆ. ಅದೇ ರೀತಿ ವನಜಾಕ್ಷಿ ವಿರುದ್ಧ ಸಹ ಕೇಸ್ ದಾಖಲಾಗಿದ್ದು, ಅದೇ ಪ್ರಕರಣಗಳಲ್ಲಿ ಇಂದು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

Ad Widget

Related posts

ಆಗಸ್ಟ್ 27ರಂದು ಈಡಿಗ ಸಮುದಾಯ ಭವನದ ಗುದ್ದಲಿ ಪೂಜೆ

Malenadu Mirror Desk

ಶಿವಮೊಗ್ಗ ಪೊಲೀಸ್ ಕಮಿಷನರೇಟ್ ಆಗಲಿದೆಯೆ ?

Malenadu Mirror Desk

ಹದಿನೈದು ದಿನಗಳ ಕಾಲ ಇ-ತ್ಯಾಜ್ಯ ವಿಲೇವಾರಿ ಅಭಿಯಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.