ಶಿವಮೊಗ್ಗದಲ್ಲಿನ ವಿಷಮ ಸ್ಥಿತಿಯಿಂದಾಗಿ ವರ್ತಕರು ತೀವ್ರ ನಷ್ಟ ಅನುಭವಿಸುತ್ತಿದ್ದು, ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.
ಸಂಘದ ಪದಾಧಿಕಾರಿಗಳು ಗುರುವಾರ ಬೆಳಗ್ಗೆ ಜಿಧಿಕಾರಿಗಳನ್ನು ಭೇಟಿ ಮಾಡಿ, ವ್ಯಾಪಾರಸ್ಥರತೊಂದರೆಗಳ ಬಗ್ಗೆ ಗಮನ ಸೆಳೆದರು. ಸಣ್ಣ ಪುಟ್ಟ ವ್ಯಾಪಾರಸ್ಥರು, ದೊಡ್ಡ ಉದ್ಯಮಿಗಳು, ಬೀದಿಬದಿ ವ್ಯಾಪಾರಸ್ಥರು ಶಿವಮೊಗ್ಗದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದಾಗಿ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಕೊರೊನಾದ ಸಂಕಷ್ಟಕ್ಕೆ ಒಳಗಾಗಿ ಇಡೀ ಎರಡು ವರ್ಷ ಆರ್ಥಿಕ ಸಂಕಷ್ಟ ಅನುಭವಿಸಿದರು, ನಂತರ ವೀಕೆಂಡ್ ಕರ್ಫ್ಯೂಗೆ ವ್ಯಾಪಾರವೇ ಆಗಲಿಲ್ಲ. ಬೀದಿಬದಿ ವ್ಯಾಪಾರಿಗಳಂತೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ದಿನಸಿ, ಬಟ್ಟೆ, ಚಿನ್ನ ಬೆಳ್ಳಿ ಅಂಗಡಿಗಳು ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕರ್ಫ್ಯೂವನ್ನು ತೆರವುಗೊಳಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ವರ್ಷದ365 ದಿನಗಳಲ್ಲಿ ಕೇವಲ 100 ರಿಂದ 150 ದಿನಗಳ ಕಾಲ ಮಾತ್ರ ವ್ಯಾಪಾರ ಮಾಡಲು ಸಾಧ್ಯವಾಗಿದೆ. ಜಿಲ್ಲಾಧಿಕಾರಿಗಳು ವ್ಯಾಪಾರಸ್ಥರ ಸಂಕಷ್ಟಗಳನ್ನು ಅರಿತು ವ್ಯಾಪಾರಸ್ಥರಿಗೆ ಅನು ಕೂಲವಾಗುವಂತಹ ತೀರ್ಮಾನ ಕೈಗೊಳ್ಳಬೇಕು. ಕರ್ಪ್ಯೂ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಶನಿವಾರದವರೆಗೆ ಕಾಯಿರಿ. ಇಂತಹ ಘಟನೆಗಳು ನಡೆದಾಗ ಸಹಕರಿಸಬೇಕು. ಶನಿವಾರ ಮಧ್ಯಾಹ್ನದ ನಂತರ ಕರ್ಫ್ಯೂ ತೆರವುಗೊಳಿಸುದರ ಬಗ್ಗೆ ಯೋಚಿಸಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಪದಾಧಿಕಾರಿಗಳಾದ ಅಶ್ವತ್ಥನಾರಾಯಣ ಶೆಟ್ಟಿ, ಜಗದೀಶ್ ಮಾತಣ್ಣನವರ್, ದಿನಕರ್, ಪ್ರದೀಪ್ ವಿಜಯಕುಮಾರ್, ವಿನೋದ್ ಕುಮಾರ್ ಜೈನ್ ಇದ್ದರು.
ವ್ಯಾಪಾರ ವಹಿವಾಟು ನಡೆದರೆ ಮಾತ್ರ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಕೊರೊನದಂತಹ ಸಂಕಷ್ಟ ಎದುರಿಸಿ ವರ್ತಕರು ನಷ್ಟ ಅನುಭವಿಸಿದ್ದಾರೆ. ಈ ಹಂತದಲ್ಲಿ ನಾಗರೀಕರು ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಜಿಲ್ಲಾಧಿಕಾರಿ ಮತ್ತು ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ನಗರದಲ್ಲಿ ಶಾಂತಿ ಸ್ಥಾಪನೆಗೆ ವರ್ತಕರು ಮತ್ತು ಸಾರ್ವಜನಿಕರು ಸಹಕರಿಸಬೇಕು
ಎನ್.ಗೋಪಿನಾಥ್, ಅಧ್ಯಕ್ಷರು, ಛೇಂಬರ್ ಆಫ್ ಕಾಮರ್ಸ್