ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಸಂಬಂಧ ಶಿವಮೊಗ್ಗ ಪೋಲಿಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು ಈವರೆಗೆ ಒಟ್ಟು ಹತ್ತು ಮಂದಿಯನ್ನು ಬಂಧಿಸಿದಂತಾಗಿದೆ
ಭದ್ರಾವತಿಯ ಹೊಸಮನೆ ಬಡಾವಣೆಯ ಅಬ್ದುಲ್ ರೋಷನ್ (24) ಹಾಗೂ ಶಿವಮೊಗ್ಗ ವಾದಿ-ಎ-ಹುದಾದ ಜಾಫರ್ ಸಾದಿಕ್ (55) ಬಂಧಿತರಾಗಿದ್ದಾರೆ. ಇವರಿಂದ ಒಂದು ಬೈಕು ಹಾಗೂ ಎರಡು ಕಾರು ವಶಪಡಿಸಿಕೊಳ್ಳಲಾಗಿದೆ
ಈ ನಡುವೆ ಪ್ರಕ್ಷುಬ್ದವಾಗಿದ್ದ ಶಿವಮೊಗ್ಗ ನಗರ ಸಹಜತೆಯತ್ತ ಮರಳುತಿದ್ದು ಶನಿವಾರ ಶಾಲಾ ಕಾಲೇಜು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ.