Malenadu Mitra
ರಾಜ್ಯ ಶಿವಮೊಗ್ಗ

ನಾಳೆಯಿಂದ ಶಿವಮೊಗ್ಗದಲ್ಲಿ ಶಾಲಾ ಕಾಲೇಜು ಆರಂಭ

ಕಳೆದ ಒಂದು ವಾರದಿಂದ ಬಂದ್ ಆಗಿದ್ದ ಶಿವಮೊಗ್ಗ ನಗರದ ಶಾಲಾ ಕಾಲೇಜು ಆರಂಭವಾಗಲಿವೆ.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಈ ಆದೇಶ ಹೊರಡಿಸಿದ್ದಾರೆ. ಹಿಜಾಬ್ -ಕೇಸರಿ ಶಾಲು ಗಲಾಟೆ ,ಅದಾದ ಬಳಿಕ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಿಂದಾಗಿ ನಗರದಲ್ಲಿ ಕರ್ಫ್ಯೂ ವಿದಿಸಲಾಗಿತ್ತು

. ನಗರದಲ್ಲಿ ಕಳೆದ ಹದಿನೈದು ದಿನಗಳಿಂದ ಸರಿಯಾಗಿ ಶಾಲಾ ಕಾಲೇಜುಗಳು ನಡೆದಿರಲಿಲ್ಲ. ಇದರಿಂದ ಪ್ರಾಯೋಗಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳಿಗೂ ತೊಂದರೆ ಯಾಗಿತ್ತು. ಎರಡು ವರ್ಷಗಳಿಂದ ಕೊರೊನ ಸಮಯದಲ್ಲಿ ಮಕ್ಕಳ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮವಾಗಿತ್ತು. ಈಗ ಈ ಗಲಭೆಗಳ ಕಾರಣಕ್ಕೆ ಶಾಲಾ ಕಾಲೇಜುಗಳು ಬಂದ್ ಆಗಿದ್ದವು.

ಸೋಮವಾರದಿಂದ ಕಾಲೇಜು ಆರಂಬಿಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದು, ನಾಗರೀಕರು ಶಾಂತಿ ಸುವ್ಯವಸ್ಥೆಗೆ ಆದ್ಯತೆ ನೀಡಬೇಕಿದೆ

Ad Widget

Related posts

ಫೆಬ್ರುವರಿ 16 ರಂದು ಅಂಬಾರಗುಡ್ಡ ಜೀವ ವೈವಿಧ್ಯಕ್ಕೆ ಕಂದಾಯ ಭೂಮಿ ಸೇರ್ಪಡೆ ವಿರೋಧಿಸಿ ಪಾದಯಾತ್ರೆ: ಕಾಗೋಡು ತಿಮ್ಮಪ್ಪ

Malenadu Mirror Desk

ಜನಸಾಮಾನ್ಯರಿಗೆ ನಿವೇಶನಗಳನ್ನು ನೀಡಲು ಲೇಔಟ್ ಸಿದ್ದಪಡಿಸಲು ಸಚಿವ ಬೈರತಿ ಸುರೇಶ್ ಸೂಚನೆ

Malenadu Mirror Desk

ಕಾರವಾರ ಬಿಷಪ್‌ ಆಗಿ ಜೋಗ ಮೂಲದ ಡುಮಿಸ್‌ ಡಾಯಸ್‌ ನೇಮಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.