Malenadu Mitra
ರಾಜ್ಯ ಶಿವಮೊಗ್ಗ

ಸಮಕಾಲೀನ‌ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರಗಳ‌ ತಳಹದಿ ಗಣಿತಶಾಸ್ತ್ರ: ಪ್ರೊ. ಉದಯ್ ಚಂದ್

ಕುವೆಂಪು ವಿವಿ ಗಣಿತ ಶಾಸ್ತ್ರ ವಿಭಾಗದಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನ

ಗಣಿತಶಾಸ್ತ್ರದ ಅನ್ವಯಿಕತೆ ಅಗಾಧವಾಗಿದ್ದು ಸಮಕಾಲೀನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆ ಮತ್ತು ಆವಿಷ್ಕಾರಗಳ ತಳಹದಿಯಾಗಿದೆ. ಅದರಲ್ಲಿಯೂ ಭೌಗೋಳಿಕ ಸ್ವರೂಪ, ಬಾಹ್ಯಾಕಾಶ ಸಂಶೋಧನೆ, ಸಾಪೇಕ್ಷತಾ ಸಿದ್ಧಾಂತದ ಅನ್ವಯಿಕ ಅಧ್ಯಯನಗಳಲ್ಲಿ ಡಿಫರೆನ್ಷಿಯಲ್ ಜ್ಯಾಮಿತಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಕಲ್ಕತ್ತಾ ವಿಶ್ವವಿದ್ಯಾಲಯದ ಎಮಿರೆಟಸ್ ಪ್ರಾಧ್ಯಾಪಕ ಪ್ರೊ. ಉದಯ್ ಚಂದ್ ಡೇ ಅಭಿಪ್ರಾಯಪಟ್ಟರು.

ಶಂಕರಘಟ್ಟದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರದಿಂದ‌ ಆರಂಭವಾದ “ಡಿಫರೆನ್ಷಿಯಲ್ ಜ್ಯಾಮಿತಿ” ಕುರಿತ ಎರಡು ದಿವಸಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಮುಷ್ಯನ ಜೀವನ ಶೈಲಿಯನ್ನು ಉತ್ತಮಪಡಿಸುತ್ತಿರುವುದರಲ್ಲಿ‌ ವಿಜ್ಞಾನ‌ ಮತ್ತು ತಂತ್ರಜ್ಞಾನ ಕ್ಷೇತ್ರದ ಅನ್ವಯಿಕ ಸಂಶೋಧನೆಗಳ ಪಾತ್ರ ಬಹಳ ದೊಡ್ಡದು. ಸಾಮಾನ್ಯ ಜನರಿಗೆ ಉಪಯುಕ್ತವಾಗುವ ಇಂತಹ‌ ಆವಿಷ್ಕಾರಗಳ‌ ತಳಹದಿ‌ ಗಣಿತಶಾಸ್ತ್ರ ಎಂದು ಅವರು ಪ್ರತಿಪಾದಿಸಿದರು.

ಕುಲಪತಿ ಪ್ರೊ.‌ ಬಿ. ಪಿ.‌ವೀರಭದ್ರಪ್ಪ ಮಾತನಾಡಿ, ಗಣಿತಶಾಸ್ತ್ರ ಎಲ್ಲ ವಿಜ್ಞಾನ ವಿಷಯಗಳ ಅಡಿಪಾಯ. ಆದ್ದರಿಂದಲೇ ಗಣಿತಶಾಸ್ತ್ರವನ್ನು ನಿಜವಾದ ವೈಜ್ಞಾನಿಕ ಜ್ಞಾನಶಾಖೆಯೆಂದು ಪರಿಗಣಿಸಲಾಗುತ್ತದೆ ಎಂದರು.

ಕುಲಸಚಿವೆ ಜಿ.‌‌ ಅನುರಾಧ ಮಾತನಾಡಿ, ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿವಿಧ ಸಂಶೋಧನಾ ಪ್ರಾಜೆಕ್ಟ್ ಗಳನ್ನು ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಸಮಾಜಕ್ಕೆ ಉಪಯುಕ್ತವಾಗುವ ಅನ್ವಯಿಕ ಸಂಶೋಧನೆಗೆ ವಿಶ್ವವಿದ್ಯಾಲಯ ಒತ್ತು ನೀಡುತ್ತದೆ ಎಂದರು.

ಸರ್ಬಿಯಾದ ನಿಸ್ ವಿಶ್ವವಿದ್ಯಾಲಯದ ಪ್ರೊ. ಜುಬಿಕ್ ವೆಲಿಮಿರೋವಿಕ್, ಟರ್ಕಿಯ ಗಾಜಿ಼ ವಿಶ್ವವಿದ್ಯಾಲಯದ ಪ್ರೊ. ವಾನ್ಲಿ, ಸೌದಿಯ ತೈಬಾ ವಿಶ್ವವಿದ್ಯಾಲಯದ ಪ್ರೊ. ಮಹಮದ್ ಬೆಲ್ ಖೆಲ್ಫಾ಼ ಸಮ್ಮೇಳನದಲ್ಲಿ‌‌ ಭಾಗವಹಿಸಿ ವಿಚಾರ ಮಂಡಿಸಿದರು.

ಪ್ರೊ.‌‌ ಸಿ. ಎಸ್. ಬಾಗೇವಾಡಿ, ವಿಭಾಗದ ಮುಖ್ಯಸ್ಥ ಪ್ರೊ. ವೆಂಕಟೇಶ, ಪ್ರೊ.‌ಎಸ್. ಕೆ. ನರಸಿಂಹಮೂರ್ತಿ, ಪ್ರೊ. ಬಿ. ಜೆ. ಗಿರೀಶ, ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ಅಧ್ಯಾಪಕರು ಪಾಲ್ಗೊಂಡಿದ್ದರು.

Ad Widget

Related posts

ಮಲೆನಾಡಿನಲ್ಲಿ ಸಂಭ್ರಮ ಸಡಗರದ ಗೌರಿ ಹಬ್ಬ, ತವರಿಗೆ ಬಂದು ತಾಯಿ ಗೌರಿಗೆ ಪೂಜೆ ಸಲ್ಲಿಸಿದ ಹೆಣ್ಣುಮಕ್ಕಳು

Malenadu Mirror Desk

ನೆಟ್ವರ್ಕ್ ಸಮಸ್ಯೆ ಸಿಎಂಗೆ ಬೇಳೂರು ಮನವಿ

Malenadu Mirror Desk

ಶಿವಮೊಗ್ಗದಲ್ಲಿ ಗಲಾಟೆ ಮಾಡ್ಸೋದೆ ಈಶ್ವರಪ್ಪ: ಸಿದ್ದರಾಮಯ್ಯ ಆರೋಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.