Malenadu Mitra
ರಾಜ್ಯ ಶಿವಮೊಗ್ಗ

ಕೇಂದ್ರ ಸರಕಾರಿ ಮಾದರಿ ವೇತನ: ಸಿಎಂ, ಮಾಜಿ ಸಿಎಂ ಗೆ ಷಡಾಕ್ಷರಿ ಕೃತಜ್ಞತೆ

ರಾಜ್ಯ ಸರ್ಕಾರಿ ನೌಕರರ ಬಹು ವರ್ಷಗಳ ಬೇಡಿಕೆಯಾಗಿದ್ದ ಕೇಂದ್ರ ಮಾದರಿ ವೇತನ ಶ್ರೇಣಿ ಜಾರಿಗೊಳಿಸುವುದಾಗಿ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿರುವುದು ಸ್ವಾಗತಾರ್ಹವಾಗಿದ್ದು, ಮುಖ್ಯಮಂತ್ರಿ ಹಾಗೂ ಇದಕ್ಕಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸರ್ಕಾರಿ ನೌಕರರ ಸಂಘ ಕೃತಜ್ಞತೆ ಸಲ್ಲಿಸಿದೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕೇಂದ್ರದ ಮಾದರಿಯ ವೇತನಕ್ಕಾಗಿ ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ ಇದುವರೆಗೂ ಕೂಡಾ ಆ ಬೇಡಿಕೆ ಈಡೇರಿರಲಿಲ್ಲ. ಇದೀಗ ಮುಖ್ಯಮಂತ್ರಿಗಳ ಹೇಳಿಕೆಯಿಂದ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಸಂತೋಷವಾಗಿದ್ದು, ಕೇಂದ್ರದ ಮಾದರಿ ವೇತನ ಜಾರಿಯಾದರೆ ರಾಜ್ಯದ ಎಲ್ಲಾ ಕೇಡರ್‌ನ ನೌಕರರಿಗೆ ವೇತನ ಹೆಚ್ಚಳವಾಗಲಿದೆ ಎಂದರು.
ನೌಕರರ ಸಂಘದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಐದು ವರ್ಷದೊಳಗೆ ವೇತನ ಪರಿಷ್ಕರಣೆಯಾಗುತ್ತಿರುವುದು ಇದೇ ಮೊದಲು. ಇದರಿಂದ ಸರಕಾರಕ್ಕೆ ಕೇವಲ 10.8 ಸಾವಿರ ಕೋಟಿ ಮಾತ್ರ ಹೆಚ್ಚುವರಿ ಹೊರೆಯಾಗಲಿದೆ. ಇದು ಭಾರಿ ಹೊರೆಯಲ್ಲ ಎಂದ ಅವರು, ರಾಜ್ಯದಲ್ಲಿ ಸುಮಾರು 2.60 ಲಕ್ಷ ಹುದ್ದೆಗಳು ಖಾಲಿ ಇದ್ದು, ಇವುಗಳಿಂದ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಉಳಿತಾಯವಾಗುತ್ತದೆ. ಈ ನೌಕರರ ಕಾರ್ಯಭಾರದ ಒತ್ತಡ ಈಗಿರುವ ನೌಕರರ ಮೇಲೆಯೇ ಬೀಳುತ್ತಿದೆ ಎಂದರು.
ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಕೂಡಾ ಈ ನೌಕರರ ಕಾರ್ಯಭಾರವನ್ನು ಈಗಿರುವ ನೌಕರರೇ ನಿರ್ವಹಿಸುತ್ತಿದ್ದಾರೆ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಹಾಗೂ ಕಳೆದ 2 ವರ್ಷಗಳ ಹಿಂದೆ ಉಂಟಾದ ಅತಿವೃಷ್ಟಿಯಂತಹ ವಿಷಮ ಪರಿಸ್ಥಿತಿಯಲ್ಲೂ ನೌಕರ ವರ್ಗ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದೆ. ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕರ್ತವ್ಯ ನಿರ್ವಹಿಸಿದೆ. ಇದರಿಂದಾಗಿಯೇ ಕೊರೊನವನ್ನು ಕೂಡಾ ಹಿಮ್ಮೆಟ್ಟಿಸುವಂತಾಯಿತು ಎಂದರು.
ವೇತನ ಹೆಚ್ಚಳಕ್ಕೆ ತಕ್ಕಂತೆ ಸರಕಾರ ನೌಕರರ ಕೆಲಸದ ವೇಳೆ ಹೆಚ್ಚು ಮಾಡಲು, ಕಾರ್ಯದಕ್ಷತೆ ಹೆಚ್ಚಿಸಲು ಅಥವಾ ಇನ್ಯಾವುದೇ ಟಾಸ್ಕ್ ನೀಡಿದರೂ ಅದನ್ನುನಿಭಾಯಿಸಲು ನೌಕರ ಸಮುದಾಯ ಸಿದ್ಧವಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಆರ್. ಮೋಹನ್ ಕುಮಾರ್, ಮಂಜುನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಮಹಾರುದ್ರಪ್ಪ, ಅರುಣ್ ಕುಮಾರ್, ಸತೀಶ್ ಮೊದಲಾದವರು ಇದ್ದರು.

ಸರ್ಕಾರಿ ನೌಕರರ ಭ್ರಷ್ಟಾಚಾರಕ್ಕೆ ಸಂಘ ಎಂದೂ ಬೆಂಬಲಿಸುವುದಿಲ್ಲ. ಆದರೆ, ಸರ್ಕಾರಿ ನೌಕರನಿಗೆ ಕೈತುಂಬಾ ಸಂಬಳ ಬಂದರೆ ಲಂಚದ ಮಾತು ಬರುವುದಿಲ್ಲ. ಇದನ್ನೂ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ಮತ್ತು ಸಂಘವು ಲಂಚ ಮತ್ತು ಭ್ರಷ್ಟಾಚಾರವನ್ನು ತಡೆಯಲು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತದೆ. ಇದಕ್ಕಾಗಿ ಜಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ವರ್ಗಾವಣೆಯಲ್ಲಿ ಪಾರದರ್ಶಕತೆ ಕಂಡುಬಂದಿದ

ಸಿ.ಎಸ್ ಷಡಾಕ್ಷರಿ

Ad Widget

Related posts

ಶಿವಮೊಗ್ಗದಲ್ಲಿ 185 ಮಂದಿಯಲ್ಲಿ ಕೊರೊನ ಸೋಂಕು

Malenadu Mirror Desk

ಶಿವಮೊಗ್ಗದಲ್ಲಿ ಎರಡಂಕಿಗಿಳಿದ ಸೋಂಕು, 4 ಸಾವು

Malenadu Mirror Desk

ಅಮ್ಮ.. ನಮ್ಮನ್ನು ಕೊಂದು ಬಿಟ್ಟೆಯಾ ?..

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.