ಊರ ಹಬ್ಬ ಮಾರಿಜಾತ್ರೆ ವಿಚಾರದಲ್ಲಿ ಕೆಲವರು ಅಪಪ್ರಚಾರ ಮಾಡುತಿದ್ದು, ಇದಕ್ಕೆ ಸಾರ್ವಜನಿಕರು ಕಿವಿಗೊಡಬಾರದು. ಸರ್ವ ಜನಾಂಗ ನಡೆಸುವ ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಸೌಹಾರ್ದತೆಯ ಸಂಕೇತ.ಯಾವುದೇ ಗೊಂದಲಗಳಿಲ್ಲದೆ ಉತ್ಸವ ನಡೆಯಲಿದೆ ಎಂದು ಶ್ರೀ ಕೋಟೆ ಮಾರಿಕಾಂಬ ಸೇವಾಸಮಿತಿ ಹೇಳಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ,ಜಾತ್ರೆಯಲ್ಲಿ
ಅನ್ಯಕೋಮಿನ ವ್ಯಾಪಾರಿಗಳಿಗೆ ಮಳಿಗೆ ಕೊಡಬಾರದೆಂಬ ಹಿಂದುಪರ ಸಂಘಟನೆಗಳ ಮನವಿ ಹಿನ್ನಲೆ, ಮೊದಲು ಮಳಿಗೆ ಗುತ್ತಿಗೆ ಪಡೆದ ಗುತ್ತಿಗೆದಾರ ಚಿಕ್ಕಣ್ಣ ಹಿಂದೆ ಸರಿದಿದ್ದಾನೆ. ನಾಗರಾಜ್ ಈಗ ಜಾತ್ರೆಯ ಮಳಿಗೆ ಗುತ್ತಿಗೆ ಹಿಡಿದಿದ್ದಾರೆ. ಆದ್ರೆ ಟೆಂಡರ್ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಹರಡುತ್ತಿದೆ. ಟೆಂಡರ್ ನನ್ನು ಪಾರದರ್ಶಕವಾಗಿ ನೀಡಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ಜಾತಿ ಧರ್ಮದವರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ನಡೆಯುತ್ತೋ ಇಲ್ಲವೋ..ನಡೆದರೂ ಅತ್ಯಂತ ಸರಳವಾಗಿ ಜಾತ್ರೆ ನಡೆಸಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿತ್ತು. ಜಿಲ್ಲಾಡಳಿತ ಕೂಡ ಸರಳ ಜಾತ್ರೆಗೆ ಮನವಿ ಮಾಡಿತ್ತು. ಕೊರೊನಾ ಕಡಿಮೆಯಾದ ಹಿನ್ನಲೆ ಮತ್ತೆ ಅದ್ದೂರಿ ಮಾರಿಕಾಂಬ ಜಾತ್ರೆಗೆ ದೇವಸ್ಥಾನದ ಆಡಳಿತ ಮಂಡಳಿ ಸಜ್ಜಾಯಿತು. ಜಾತ್ರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಹಿಂದುಪರ ಸಂಘಟನೆಗಳು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ನೀಡಬಾರದು ಎಂದು ದೇವಸ್ಥಾನ ಆಡಳಿತ ಮಂಡಳಿ ಮುಖಂಡರಿಗೆ ಮನವಿ ಮಾಡಿತು. ಮಳಿಗೆ ಗುತ್ತಿಗೆ ಪಡೆದ ಗುತ್ತಿಗೆದಾರ ಹಿಂದೆ ಸರಿದ ಹಿನ್ನಲೆಯಲ್ಲಿ ನಾಗರಾಜ್ ಎಂಬುವವರು ಹಳೆ ಗುತ್ತಿಗೆಗೆ ಪೂರಕವಾಗಿಯೇ ಒಂಬತ್ತು ಲಕ್ಷದ ಒಂದು ಸಾವಿರದ ಒಂದು ರೂಪಾಯಿಗೆ ಗುತ್ತಿಗೆ ಪಡೆದಿದ್ದಾರೆ ಎಂದರು.
ಜಾತ್ರೆಯಲ್ಲಿ ಮಳಿಗೆ ಗುತ್ತಿಗೆಯನ್ನು ಮೊದಲು ಆರು ಲಕ್ಷಕ್ಕೆ ನೀಡಲಾಗಿತ್ತು. ತದನಂತರ ಒಂಬತ್ತು ಲಕ್ಷಕ್ಕೆ ನೀಡಲಾಗಿದೆ ಎಂದು ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಅಲ್ಲದೆ ಈ ಬಾರಿ ಅನ್ಯಕೋಮಿನವರಿಗೆ ಜಾತ್ರೆ ಹಾಗು ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನು ವೈರಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೇವಸ್ಥಾನವನ್ನು ಶುಚಿ ಗೊಳಿಸುತ್ತಿರುವವರು, ಬಣ್ಣ ಬಳಿಯುತ್ತಿರುವವವರು ಹಲವು ಕೆಲಸಗಳನ್ನು ಮಾಡುತ್ತಿರುವುದು ಅನ್ಯಕೋಮಿನವರೇ..ಜಾತ್ರೆಗೂ ಕೂಡ ಹಿಂದು ಮುಸ್ಲಿಂ ಕ್ರೈಸ್ತರೆಲ್ಲರೂ ಜಾತಿಭೇದ ಮರೆತು ಪಾಲ್ಗೊಳ್ಳುತಿದ್ದಾರೆ.. ಹೀಗಾಗಿ ಬೇರೆ ಧರ್ಮದವರಿಗೆ ಜಾತ್ರಗೆ ಪ್ರವೇಶವಿಲ್ಲ ಎಂಬಿತ್ಯಾದಿ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಮರಿಯಪ್ಪ ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎನ್ ಮಾತನಾಡಿ, ಮಾರಿಕಾಂಬ ದೇವಸ್ಥಾಕ್ಕೆ ಎಲ್ಲಾ ಜಾತಿ ಧರ್ಮಗಳ ಜನರು ನಡೆದುಕೊಳ್ಳುತ್ತಾರೆ. ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಇದು ಸರ್ವದರ್ಮದ ಕೇಂದ್ರ, ಸರ್ವ ಜನಾಂಗದವರು ಸೇರಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸುತ್ತಾರೆ. ನಾವು ಗುತ್ತಿಗೆದಾರನಿಗೆ ಮಳಿಗೆ ಟೆಂಡರ್ ಕೊಟ್ಟಿದ್ದೇವೆ. ಆದ್ರೆ ಇಂತವರಿಗೆ ಕೊಡಬೇಕೋ ಬೇಡ್ವೋ ಎಂಬುದರಲ್ಲಿ ನಮ್ಮ ಪಾತ್ರವಿಲ್ಲ. ಆದ್ರೆ ಜಾತ್ರೆಯಲ್ಲಿ ಎಲ್ಲಾ ಜಾತಿ ಧರ್ಮದವರೂ ಪಾಲ್ಗೊಳ್ಳಬೇಕೆಂದು ಮಂಜುನಾಥ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮತಿ ಪದಾಧಿಕಾರಿಗಳಾದ, ಎನ್ ಉಪಾಪತಿ, ಎನ್ ಕೆ ಸುರೇಶ್ ಕುಮಾರ್, ಹೆಚ್ ವಿ ತಿಮ್ಮಪ್ಪ, ಹನುಮಂತಪ್ಪ, ಎಸ್.ಎ ಲೋಕೇಶ್, ಚಂದ್ರೇಶೇಖರ್, ಸುನೀಲ್, ಶ್ರೀಧರ ಮೂರ್ತಿ ನವುಲೆ, ಡಿ.ಎಂ. ರಾಮಯ್ಯ, ಪ್ರಭಾಕರ್ ಗೌಡ. ಪ್ರಕಾಶ್, ಬಾಬು, ಸತ್ಯನಾರಾಯಣ, ಉಪಸ್ಥಿತರಿದ್ದರು