Malenadu Mitra
ರಾಜ್ಯ

ಶಿವಮೊಗ್ಗ ಮಾರಿಕಾಂಬೆ ಜಾತ್ರೆಗೆ ಅದ್ದೂರಿ ಚಾಲನೆ, ದೇವಿ ದರ್ಶನಕ್ಕೆ ನೆರೆದ ಭಕ್ತ ಸಾಗರ

ಶಿವಮೊಗ್ಗದ ಐತಿಹಾಸಿಕ ಶ್ರೀ ಕೋಟೆ ಮಾರಿಕಾಂಬ ದೇವಿ ಜಾತ್ರೆ ಮಂಗಳವಾರ ಅದ್ದೂರಿಯಾಗಿ ಆರಂಭವಾಯಿತು. ಬ್ರಾಹ್ಮಣರ ನಾಡಿಗ ಕುಟುಂಬದಿಂದ ಪ್ರಥಮ ಪೂಜೆಯಾದ ಬಳಿಕ ಗಾಂಧಿಬಜಾರಿನ ತವರು ಮನೆಯಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಐದು ದಿನಗಳ ಕಾಲ ನಡೆಯುವ ಜಾತ್ರೆಯು ಕೊರೊನ ಅಬ್ಬರ ಕಡಿಮೆಯಾಗಿರುವ ಕಾರಣ ಕಳೆಗಟ್ಟಿದೆ
ಬೆಳಗಿನ ಜಾವದಿಂದಲೇ ಮಾರಿಕಾಂಬ ದರ್ಶನಕ್ಕೆ ಭಕ್ತರ ಸರತಿ ಸಾಲು ಮೈಲುದ್ದ ಬೆಳೆದಿತ್ತು. ಎಸ್‌ಪಿಎಂ ರಸ್ತೆ ಹಾಗೂ ಬಿಹೆಚ್ ರಸ್ತೆಯ ಮೀನಾಕ್ಷಿ ಭವನದ ತನಕ ಜನರು ಪೂಜೆಗಾಗಿ ಕಾದು ನಿಂತಿದ್ದ ದೃಶ್ಯ ಕಂಡುಬಂತು. ಜಾತ್ರೆಯ ಮೊದಲ ದಿನ ಸಿಹಿ ಅಡುಗೆ ಮಾಡುವುದು ಪದ್ದತಿ. ಮೊದಲ ದಿನ ಸಸ್ಯಹಾರಿ ಸಮುದಾಯವೇ ದೇವಿಗೆ ಹೆಚ್ಚಾಗಿ ಪೂಜೆಗೆ ಬರುತ್ತಾರೆ. ಎರಡನೇ ದಿನದಿಂದ ಕೋಟೆ ಮಾರಿಕಾಂಬ ದೇವಸ್ಥಾನದಲ್ಲಿ ಗದ್ದುಗೆ ಏರಲಿರುವ ಮಾರಿಕಾಂಬೆಯ ದರ್ಶನಕ್ಕೆ ಸರ್ವಜನರು ಬರುತ್ತಾರೆ.

ಜಾತ್ರೆ ಅಂಗವಾಗಿ ನಗರದಾದ್ಯಂತ ಅಲಂಕಾರ ಮಾಡಿದ್ದು, ಮನೆಗಳಲಿ ತಳಿರುತೋರಣ ಹಾಕಿದ್ದು, ಭಕ್ತರ ಮನೆ ಮುಂದಿನ ರಂಗೋಲಿ ಚಿತ್ತಾಕರ್ಷಕವಾಗಿವೆ.
ರಾತ್ರಿ ಒಂಬತ್ತು ಗಂಟೆ ಬಳಿಕ ಅಮ್ಮನವರನ್ನು ತವರು ಮನೆಯಿಂದ ಹೊರಡಿಸಲಾಗುತ್ತದೆ. ದೇವಿಯ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ತಳಿರು ತೋರಣ, ರಂಗೋಲಿ ಹಾಗೂ ವಿವಿಧ ಅಲಂಕಾರ ಮಾಡಲಾಗುತ್ತದೆ.ಬಳಿಕ ಗದ್ದುಗೆಗೆ ಕರೆತರಲಾಗುತ್ತದೆ.
ಶಿವಮೊಗ್ಗ ನಗರದಲ್ಲಿ ಇತ್ತಿಚೆಗೆ ನಡೆದ ಕೆಲವು ಅಹಿತಕರ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನೆರೆಯ ಜಿಲ್ಲೆಗಳಿಂದಲೂ ಪೊಲೀಸ್ ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗಿದೆ.

Ad Widget

Related posts

ತುಂಬಿದ ಭದ್ರೆ, ರೈತರಲ್ಲಿ ಮಂದಹಾಸ ಎಂದ ಸಚಿವರು, ಸಿದ್ದರಾಮಯ್ಯ ಕುಡುಕರ ರೀತಿ ಮಾತನಾಡುವುದು ಸರಿಯಲ್ಲ : ಕೆ.ಎಸ್.ಈಶ್ವರಪ್ಪ

Malenadu Mirror Desk

ಸಚಿವ ಈಶ್ವರಪ್ಪ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು: ಬೇಳೂರು ಗೋಪಾಲಕೃಷ್ಣ

Malenadu Mirror Desk

ಲಾಕ್‍ಡೌನ್ ಕಠಿಣ,ಎಣ್ಣೆಗೆ ಅವಕಾಶ !

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.