Malenadu Mitra
ರಾಜ್ಯ ಶಿವಮೊಗ್ಗ

ಶ್ರೀಕಾಂತ್‌ಗೆ ಜನ್ಮದಿನ ಸಂಭ್ರಮ, ಆಟೋ ಕಾಂಪ್ಲೆಕ್ಸ್‌ನಲ್ಲಿ ಅಭಿಮಾನಿಗಳಿಂದ ಸನ್ಮಾನ

ಜನರ ಪ್ರೀತಿ ವಿಶ್ವಾಸ, ಅಭಿಮಾನಕ್ಕೆ ನಾನು ಎಂದೆಂದೂ ಚಿರರುಣಿ, ನಾನು ಒಬ್ಬ ಸಾಮಾನ್ಯ ಜನ ಸೇವಕ ಎಂದು ಜೆ.ಡಿ.ಎಸ್ ಮುಖಂಡ ಎಂ.ಶ್ರೀಕಾಂತ್ ತಿಳಿಸಿದರು.
ಅವರು ಆಟೊ ಕಾಂಪ್ಲೆಕ್ಸ್‌ನಲ್ಲಿ ಸ್ನೇಹಮಹಿ ಸಂಘ ಮತ್ತು ಆಟೊ ಕಾಂಪ್ಲೆಕ್ಸ್ ಅಸೋಸಿಯೇಷನ್ ಮತ್ತು ಶ್ರೀಕಾಂತ್ ಅಭಿಮಾನಿಗಳು ಆಯೋಜಿಸಿದ್ದ
ತಮ್ಮ ೫೦ನೇ ವರ್ಷದ ಹುಟ್ಟು ಹಬ್ಬವನ್ನು ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯ ಒಂದು ಭಾಗ ಆದರೆ ಪಕ್ಷ ,ಜಾತಿ ಮತ್ತು ಧರ್ಮ ಮೀರಿದ ಸ್ನೇಹ ಸಂಬಂಧ ನನಗಿದೆ. ಜನರ ಪ್ರೀತಿ ಮತ್ತು ದೇವರ ಆಶೀರ್ವಾದದಿಂದ ನನ್ನ ಕೈಲಾದದ್ದನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಸ್ನೇಹಮಹಿ ಸಂಘದ ಅಧ್ಯಕ್ಷ ಚಿನ್ನಪ್ಪ ಮಾತನಾಡಿ, ಶ್ರೀಕಾಂತ್‌ರವರು ಬಡವರ ಧ್ವನಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ ಜೊತೆಗೆ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಹತ್ತಿರವಿರುವ ವಿಶೇಷ ಸ್ನೇಹಿತ ಹಾಗೂ ರಾಜಕಾರಣಿಯಾಗಿದ್ದಾರೆ. ದೇವರು ಆಯುರಾರೋಗ್ಯ ನೀಡಿ ಮತ್ತಷ್ಟು ಸಮಾಜ ಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.
ಆಟೊಕಾಂಪ್ಲೆಕ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಿ.ಎನ್.ಮೂರ್ತಿಯವರು ಶ್ರೀಕಾಂತ್‌ರವರು ನಡೆದು ಬಂದ ದಾರಿ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಹಾಗೂ ಆಟೋಕಾಂಪ್ಲೆಕ್ಸ್ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಸಮಾರಂಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ಬಿ.ಪೂಸ್ವಾಮಿ, ಹರೀಶ್, ಆಂಡವರ್, ಚಿನ್ನಪ್ಪ, ಶಿವಾನಂದ್, ಶ್ಯಾಮ್, ವೆಂಕಟೇಶ್, ಸೋಮಣ್ಣ, ದೇವರಾಜ್, ರಘು, ಸಚಿನ್, ಅಬ್ದುಲ್ , ಗೋವಿಂದರಾಜು, ರವಿಕುಮಾರ್ ಹಾಗೂ ಕಾರ್ಮಿಕರು, ಸ್ನೇಹಮಹಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು

Ad Widget

Related posts

ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಘೋಷಿಸುವಂತೆ ಮನವಿ

Malenadu Mirror Desk

ಆಯುಷ್ ವೈದ್ಯರ ಪ್ರತಿಭಟನೆ

Malenadu Mirror Desk

ಶಿವಮೊಗ್ಗದ 6 ಟ್ರೈನ್ ಗೆ ಹೊಸ ನಂಬರ್ : ಜನವರಿ 1 ರಿಂದಲೇ ಹೊಸ ಸಂಖ್ಯೆ ಚಾಲ್ತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.