Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಅರಣ್ಯ ಹಕ್ಕು : ಬಾಕಿ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇ ಮಾಡುವಂತೆ ಡಿಸಿ ಸೂಚನೆ

ಶಿವಮೊಗ್ಗ ಜಿಲ್ಲೆಯ ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಉಳಿದಿರುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು ಹಾಗೂ ತಿರಸ್ಕೃತಗೊಂಡ ಅರ್ಜಿಗಳನ್ನು ಮರುಪರಿಶೀಲಸಿ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ.ಡಾ.ಆರ್.ಸೆಲ್ವಮಣಿ ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮಗಳಡಿ ಸ್ವೀಕೃತವಾದ ಅರ್ಜಿಗಳನ್ನು ಸಂಬಂಧಿಸಿದ ಡಿಎಫ್‌ಓ ಗಳು ಮತ್ತು ಉಪವಿಭಾಗಾಧಿಕಾರಿಗಳು ನಿಯಮಿತವಾಗಿ ವಿಲೇವಾರಿ ಮಾಡಬೇಕು. ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿ ಹಾಗೂ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ ಸಾಕಷ್ಟು ಅರ್ಜಿಗಳು ಬಾಕಿ ಇದ್ದು, ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದರು.
ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯ್ದೆಯ ಮೂಲ ಕಡತಗಳನ್ನು ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು. ಮುಂದಿನ ಸಭೆಯೊಳಗೆ ಕ್ರಮ ವಹಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು ಗ್ರಾಮ ಅರಣ್ಯ ಹಕ್ಕು ಸಮಿತಿಯಿಂದ ತ್ವರಿತವಾಗಿ ಕಡತಗಳನ್ನು ಉಪವಿಭಾಗ ಮಟ್ಟದ ಸಮಿತಿಗೆ ವಾಪಸ್ ಕಳುಹಿಸಲು ಕ್ರಮ ವಹಿಸುವ ಬಗ್ಗೆ ಪಿಡಿಓ ಮತ್ತು ಇಓಗಳಿಗೆ ಜಿ.ಪಂ ಸಿಇಓ ಇವರು ನಿರ್ದೇಶನ ನೀಡುವಂತೆ ಕೋರಿದರು.
ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊರಬ ತಾಲ್ಲೂಕು ತಾಳಗುಪ್ಪ ಗ್ರಾಮದ ಸರ್ವೆ ನಂ ೯೩ ರಲ್ಲಿ ೧೨ ಅರ್ಜಿದಾರರು ಹಾಗೂ ಕಾಟೂರು ಗ್ರಾಮದ ಸರ್ವೆ ನಂ ೧೯ ರಲ್ಲಿ ೭೦ ಅರ್ಜಿದಾರರ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿನ ವಿಳಂಬದ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು.
ಉಪವಿಭಾಗಾಧಿಕಾರಿಳು ತಮ್ಮ ಹಂತದಲ್ಲಿ ಸಭೆ ಕರೆದು ಅರಣ್ಯ ಭೂಮಿ ಗುರುತಿಸುವ ಬಗ್ಗೆ ಕ್ರಮ ಜರುಗಿಸಬೇಕು. ಅರಣ್ಯ ಭೂಮಿ ಗುರುತಿಸಿ, ಅಧಿಸೂಚನೆಯ ನಕಲು ಪ್ರತಿಗಳ ಪ್ರತಿ ಪುಟವನ್ನು ದೃಢೀಕರಿಸಿ ತಹಶೀಲ್ದಾರರಿಗೆ ಕಳುಹಿಸಬೇಕು. ಹಾಗೂ ಮುಟೇಷನ್ ದಾಖಲಿಸಬೇಕು ಈ ಕುರಿತು ಮುಂದಿನ ಸಭೆಯಲ್ಲಿ ಪರಿಶೀಲಿಸುತ್ತೇನೆ ಎಂದು ಹೇಳಿದರು.
ಅಕ್ರಮ ಅರಣ್ಯ ಭೂಮಿ ಸಕ್ರಮ (ಇಲ್ಲೀಗಲ್ ಗ್ರಾಂಟ್ ಆಫ್ ಫಾರೆಸ್ಟ್) ಬಗ್ಗೆ ಡಿಎಫ್‌ಓ ರವರು ಓರ್ವ ಆರ್‌ಎಫ್‌ಓ ಕೇಡರ್ ಅಧಿಕಾರಿಯನ್ನು ನಿಯೋಜಿಸಿ ವಿವರವಾದ ಟಿಪ್ಪಣಿಯೊಂದಿಗೆ ಪ್ರಕರಣ ಸಿದ್ದಪಡಿಸಿ ಪ್ರತಿ ಪುಟವನ್ನು ದೃಢೀಕರಿಸಿ ವ್ಯಾಪ್ತಿಯನುಸಾರ ಎಸಿ ಅಥವಾ ಡಿಸಿ ಯವರಿಗೆ ಮೇಲ್ಮನವಿ ಸಲ್ಲಿಸಬೇಕು. ಹೀಗೆ ತಾಲ್ಲೂಕುವಾರು ಮೇಲ್ಮನವಿ ಸಿದ್ದಪಡಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಅರಣ್ಯ ಹಕ್ಕು ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಅಜ್ಜಪ್ಪ ಸಭೆಗೆ ಸಮಿತಿಯ ಪ್ರಗತಿ ಮಾಹಿತಿ ನೀಡಿದರು. ಸಾಗರ ಉಪವಿಭಾಗಾಧಿಕಾರಿ ನಾಗರಾಜ್, ಡಿಎಫ್‌ಓ ಗಳು, ತಹಶೀಲ್ದಾರ್, ಇಓ, ತಾಲ್ಲೂಕುಗಳ ಸಮಾಜ ಕಲ್ಯಾಣ ಅಧಿಕಾರಿಗಳು ಹಾಜರಿದ್ದರು.

ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಿಸಿದ ಫಲಾನುಭವಿಗಳ ವಿವರಗಳನ್ನು ಆಯಾ ತಹಶೀಲ್ದಾರರು ಕಂದಾಯ ಇಲಾಖೆಯ ಪಹಣಿ ಕಾಲಂ.೧೧ರಲ್ಲಿ ದಾಖಲಿಸಬೇಕು ಹಾಗೂ ಹಕ್ಕುಪತ್ರ ವಿತರಿಸಿದ ಫಲಾನುಭವಿಗಳ ವಿವರವನ್ನು ತಾಲ್ಲೂಕುವಾರು ಇಲಾಖೆಯ ತಂತ್ರಾಂಶದಲ್ಲಿ ನೋಂದಣಿಮಾಡಬೇಕು.

ಡಾ.ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ.

Ad Widget

Related posts

ಗಂಡು ಸಿಂಹದೊಂದಿಗೆ ಕಾಳಗದಲ್ಲಿ ಸಿಂಹಿಣಿ ಸಾವು, ಕಾರಣ ಏನು ಗೊತ್ತೇ ?

Malenadu Mirror Desk

ಗುಣಮಟ್ಟದ ಶಿಕ್ಷಣದಿಂದ ಉತ್ತಮ ಭವಿಷ್ಯ:ಆಶಾ ಭಟ್

Malenadu Mirror Desk

ಆಸ್ಪತ್ರೆ ತೊಟ್ಟಿಯಲ್ಲಿ ಬಿದ್ದು ಬಾಲಕ ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.