ಊರೊಳಗೆ ಬಂದು ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತಿದ್ದವನನ್ನು ಗ್ರಾಮದ ಯುವಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಗೌತಮಪುರದಲ್ಲಿ ಭಾನುವಾರ ಸಂಜೆ ನಡೆದಿದೆ/
ಶಿರಾಳಕೊಪ್ಪದ ಹಬೀಬ್(೩೫) ಎಂಬಾತ ಗೌತಮಪುರ ತಮಿಳು ಕಾಲೋನಿಗೆ ಬಂದು ದನದ ಮಾಂಸ ಮಾರಾಟ ಮಾಡುತಿದ್ದು. ಸುಮಾರು ಹತ್ತು ಕೆಜಿ ಮಾಂಸ ಚೀಲದಲ್ಲಿ ತಂದಿದ್ದ ಆರೋಪಿಯ ಚಲನವಲನ ಗಮನಿಸಿದ್ದ ಸ್ಥಳೀಯ ಯುವಕರು ಚೀಲ ಪರಿಶೀಲಿಸಿದಾಗ ಮಾಂಸ ಪತ್ತೆಯಾಗಿದೆ. ತಕ್ಷಣ ಹಬೀಬ್‌ನನ್ನ ಹಿಡಿದ ಯುವಕರು ಮಾಂಸ, ಬೈಕ್ ಸಮೇತ ಆತನನ್ನು ಸಾಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.