ಪ್ರತಿವರ್ಷವೂ ಏಪ್ರಿಲ್ 21 ರಂದು ನಾಗರೀಕ ಸೇವಾದಿನವನ್ನು ರಾಜ್ಯಸರಕಾರಿ ನೌಕರರ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದ್ದು, ಅಂದು ಉತ್ತಮ ಸೇವೆ ಸಲ್ಲಿಸುತ್ತಿರುವ ಸರಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಏ.21 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ನೌಕರರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ರಾಜ್ಯಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭವೇ ನೌಕರರಿಗಾಗಿ ಒಂದು ದಿನಾಚರಣೆ ಆಚರಿಸುವ ಬಗ್ಗೆ ಘೋಷಣೆಮಾಡಲಾಗಿತ್ತು. ಈಗ ಬೊಮ್ಮಾಯಿ ಅವರ ಸರಕಾರ ಇದನ್ನು ಜಾರಿಗೊಳಿಸುತ್ತಿದೆ. ಕಾರ್ಯಕ್ರಮ ಆಯೋಜನೆ ಪ್ರಶಸ್ತಿ ಪ್ರಾಯೋಜನೆ ಎಲ್ಲವೂ ಸರಕಾರದ್ದೇ ಆಗಿದ್ದು, ನೌಕರರ ಸಂಘ ಸಹಭಾಗಿತ್ವ ವಹಿಸಲಿದೆ.ಈ ವರ್ಷ ಮೊದಲ ಬಾರಿಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಣಯಿಸಲಾಗಿದೆ. ಜಿಲ್ಲಾಮಟ್ಟದ ಕಾರ್ಯಕ್ರಮದ ಮುಗಿದ ಬಳಿಕ ಏ.24 ರಂದು ರಾಜ್ಯಮಟ್ಟದ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿ ಎಂದು ಅವರು ಹೇಳಿದರು.
ಸವೋತ್ತಮ ಪ್ರಶಸ್ತಿ:
ಜಿಲ್ಲಾ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿದ ನೌಕರರನ್ನು ಗುರುತಿಸಿ ಈ ಬಾರಿ 2021 ಮತ್ತು 22 ನೇ ಸಾಲಿನ ಎರಡು ವರ್ಷಗಳ ಪ್ರಶಸ್ತಿ ನೀಡಲಾಗುವುದು. ಕಳೆದ ವರ್ಷ ಕೋವಿಡ್ ಕಾರಣದಿಂದ ಕಾರ್ಯಕ್ರಮ ಮಾಡಿರದ ಕಾರಣ ಪ್ರತಿವರ್ಷ ಹತ್ತು ಪ್ರಶಸ್ತಿಯಂತೆ ಒಟ್ಟು ೨೦ ನೌಕರರಿಗೆ ಪ್ರಶಸ್ತಿ ಪ್ರದಾನ ಮಡಲಾಗುವುದು. ಜಿಲ್ಲಾ ಮಟ್ಟದ ಪ್ರಶಸ್ತಿಗೆ 10 ಸಾವಿರ ರೂ.ನಗದು ಹಾಗೂ ಸ್ಮರಣಿಕೆ ನೀಡಲಾಗುವುದು. ಪ್ರತಿ ಜಿಲ್ಲೆಗೊಂದು ರಾಜ್ಯಮಟ್ಟದ ಸರ್ವೋತ್ತಮ ಪ್ರಶಸ್ತಿ ನೀಡಲಿದ್ದು,25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಷಡಾಕ್ಷರಿ ಅವರು ಹೇಳಿದರು.
ಶಿವಮೊಗ್ಗದ ಕುವೆಂಪು ರಂಗಮಂದಿರಲ್ಲಿ ಏ.೨೧ ರಂದು ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೌರವ ಉಪಸ್ಥಿತಿಯಲ್ಲಿ ನಡೆವ ಕಾರ್ಯಕ್ರಮದಲ್ಲಿ
ಗೃಹ ಸಚಿವ ಆರಗಜ್ಞಾನೇಂದ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡುವರು. ಆಡಳಿತದಲ್ಲಿ ಸರಕಾರಿ ನೌಕರರ ಪಾತ್ರ ವಿಷಯ ಕುರಿತು ಸಾಹಿತಿ ಚಟ್ನಳ್ಳಿ ಮಹೇಶ್ ವಿಶೇಷ ಉಪನ್ಯಾಸ ನೀಡುವರು. ತಮ್ಮ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮಕ್ಕೆ ಬರುವವ ಸರಕಾರಿ
ನೌಕರರಿಗೆ ಒಒಡಿ ಸೌಲಭ್ಯ ಇದೆ ಎಂದು ಹೇಳಿದರು. ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಡಿ.ಟಿ.ಕೃಷ್ಣಮೂರ್ತಿ,
ಎಚ್.ಎನ್.ರಾಘು,ಪಾಪಣ್ಣ,ಅರುಣ್ ಕುಮಾರ್ ಮತ್ತಿತರರು ಹಾಜರಿದ್ದರು.
2020-21 ನೇ ಸಾಲಿನ ಪ್ರಶಸ್ತಿ ಪುರಸ್ಕೃತರು:
ಡಾ.ಚಂದ್ರಪ್ಪ ಎಂ.ಜಿ. ಟಿಹೆಚ್‌ಒ, ಶಿಕಾರಿಪುರ, ಡಾ.ಇರ್ಫಾನ್ ಅಹಮದ್, ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ,
ಮಧುಕುಮಾರ್ ಎಂ.ಜೆ. ಆರೋಗ್ಯ ನಿರೀಕ್ಷಣಾಧಿಕಾರಿ ಶಿವಮೊಗ್ಗ, ಶ್ರೀಮತಿ ಲತಾ ಇ, ಆರೋಗ್ಯ ಸಹಾಯಕಿ ಬಂದಗದ್ದೆ,
ಡಾ.ಅಶೋಕ್ ಎಂ.ವಿ, ಟಿಹೆಚ್‌ಒ ಭದ್ರಾವತಿ, ರಾಧಮ್ಮ, ಶುಶ್ರೂಷಕ ಅಧಿಕಾರಿ,ಸೊರಬ, ಕಾಂತಮ್ಮ ಪಿ.ವಿ,
ಡಿಸಿ ಆಫಿಸ್ ,ಶಿವಮೊಗ್ಗ,ಪುಷ್ಪಲತಾ ಇ, ಗ್ರಾಮಲೆಕ್ಕಿಗರು ಶಿವಮೊಗ್ಗ, ಶ್ರೀನಿವಾಸ್ ಪಿಡಿಒ, ಚೋರಡಿ,
ನೇತ್ರಮ್ಮ ಎಂ. ಭೂಮಾಪಕರು,ಶಿಕಾರಿಪುರ
2021-22ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
ಬಸವರಾಜ್ ಡಿ.ಎಂ, ಡಿಡಿ ಕೃಷಿ ಇಲಾಖೆ, ಶಿವಮೊಗ್ಗ, ನಾಗರಾಜ್ ಪಿ ಬಿ.ಇಒ,ಶಿವಮೊಗ್ಗ, ಸಾವಿತ್ರಮ್ಮ ಕೆ.ಎನ್.ಸಿಡಿಪಿಒ, ಭದ್ರಾವತಿ
ಹೆಚ್.ಜಿ.ಕೃಷ್ಣಪ್ರಸಾದ್,ತಾಂತ್ರಕ ಸಹಾಯಕ,ತುಂಗಾಮೇಲ್ದಂಡೆ, ಯಶವಂತ್ ಎನ್, ಎಸ್.ಡಿ.ಎ, ಶಿವಮೊಗ್ಗ,
ಶಿವಕುಮಾರ್ ಕೆ, ಎಸ್.ಡಿ.ಎ. ಜಿಲ್ಲಾ ಪಂಚಾಯಿತಿ ಶಿವಮೊಗ್ಗ,ಹರ್ಷ ಎಂ.ಕೆ. ಗ್ರಾಮಲೆಕ್ಕಿಗ, ಶಿಕಾರಿಪುರ,
ಜಯಂತಿ ಎಂ.ಟಿ, ಗ್ರಾಮಪಂಚಾಯಿತಿ ಕಾರ್ಯದರ್ಶಿ, ತೀರ್ಥಹಳ್ಳಿ, ಕೋಕಿಲ ಆರೋಗ್ಯ ಸಹಾಯಕರು ಶಿಕಾರಿಪುರ,
ಸತೀಶ್ ಎನ್. ಸಮಾಜ ಕಲ್ಯಾಣ ಇಲಾಖೆ ಶಿವಮೊಗ್ಗ