Malenadu Mitra
ರಾಜ್ಯ ಶಿವಮೊಗ್ಗ

ಕಷ್ಟಕಾಲದಲ್ಲಿಯೇ ಬಿಎಸ್‌ವೈ ಪಕ್ಷ ಕಟ್ಟಿದ್ದಾರೆ ,ಯಡಿಯೂರಪ್ಪ ಗುಣಗಾನ ಮಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಶಿವಮೊಗ್ಗ,ಏ.೧೯: ರಾಜ್ಯದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದಾಗಲೇ ಯಡಿಯೂರಪ್ಪ ಅವರು ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಈಗಿರುವುದು ಟೊಳ್ಳು ಕಾಂಗ್ರೆಸ್ ಹಾಗಾಗಿ ಬಿಜೆಪಿಯ ಓಟವನ್ನು ತಡೆಯಲು ಅವರಿಂದ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಷ್ಟಕಾಲದಲ್ಲಿ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಕಟ್ಟಿದ್ದರು. ಯಾರಿಗೂ ರಾಜ್ಯದಲ್ಲಿ ಬಿಜೆಪಿ ಬರುತ್ತದೆ ಎಂದು ನಂಬಿಕೆ ಇರಲಿಲ್ಲ.  ಆದರೆ ಯಡಿಯೂರಪ್ಪ ಅವರಿಗೆ ತಮ್ಮ ಹೋರಾಟದ ಮೇಲೆ ನಂಬಿಕೆ ಇತ್ತು. ಅವರ ಹೋರಾಟ, ಬದ್ಧತೆಯ ಪರಿಣಾಮವಾಗಿ ನಾನಿಂದು ಸಿಎಂ ಆಗಿದ್ದೇನೆ ಎಂದು ಬೊಮ್ಮಾಯಿ ಯಡಿಯೂರಪ್ಪ ಅವರ ಗುಣಗಾನ ಮಾಡಿದರು.
ರಾಷ್ಟ್ರೀಯ ಪಕ್ಷಕ್ಕೆ ತತ್ವ ಸಿದ್ಧಾಂತ ಹಾಗೂ ಸಮರ್ಥ ನಾಯಕತ್ವ ಬೇಕು. ಇದೆಲ್ಲವೂ ಬಿಜೆಪಿಗಿದೆ. ಆದರೆ ಆ ಯಾವುದೂ ಇಲ್ಲದ ಕಾಂಗ್ರೆಸ್ ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ದಿಕ್ಕುದೆಸೆಯಿಲ್ಲದ ಆ ಪಕ್ಷ ದೇಶಮಟ್ಟದಲ್ಲಿ ಕಳೆದುಹೋಗಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತಿದೆ ಎಂದು ಬಸವರಾಜ್‌ಬೊಮ್ಮಾಯಿ ವ್ಯಂಗ್ಯವಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಯ ಪಟ್ಟಿಯನ್ನು ನಾವು ಕೊಡುತ್ತೇವೆ ದೇಶದಲ್ಲಿ ದಬಲ್ ಎಂಜಿನ್ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಸರ್ವಜನರಿಗೆ ಉತ್ತಮ ಬದುಕು ಸಿಗಬೇಕು. ಶಿವಮೊಗ್ಗ ಜಿಲ್ಲೆಯ ಈ ಕೊಡುಗೆ ಈ ರಾಜ್ಯಕ್ಕೆ ಹೆಚ್ಚಿದೆ. ಇಲ್ಲಿನ ಜನ ಪಕ್ಷಕ್ಕೆ ಯಾವತ್ತೂ ಬೆಂಬಲವಾಗಿ ನಿಂತು ಮುಖ್ಯಮಂತ್ರಿಯನ್ನೂ ನೀಡಿದ್ದಾರೆ ಇದಕ್ಕೆ ಪ್ರತಿಫಲವಾಗಿ ರೈಲ್ವೆ, ಕೈಗಾರಿಕೆ, ವಿಮಾನ ನಿಲ್ದಾಣ ಎಲ್ಲವೂ ಶಿವಮೊಗ್ಗದಲ್ಲಿ ಆಗಿದೆ ಎಂದು ಸಿಎಂ ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿರುವ ಬಗರ್‌ಹುಕುಂ, ಶರಾವತಿ ಮುಳುಗಡೆ ಸಂತ್ರತಸ್ತರು, ಚಕ್ರಾ ರೈತರು ಎದುರಿಸುತ್ತಿರು ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ಭ್ರಷ್ಟಾಚಾರದ ಕೂಪವಾಗಿರುವ ಕಾಂಗ್ರೆಸ್ ಮಾತಿಗೆ ಜನ ಮರುಳಾಗಲ್ಲ ಎಂದು ಹೇಳಿದರು. 

ಸಸಭೆಯಲ್ಲಿ ನೆರೆದಿದ್ದ ಬಿಜೆಪಿ ಪ್ರಮುಖರು

Ad Widget

Related posts

ಮನೆಗೆ ಬರುವರೆಂದು ಕಾದ ಹೆತ್ತವರಿಗೆ ಬಂದದ್ದು ಮಕ್ಕಳ ಮರಣ ವಾರ್ತೆ

Malenadu Mirror Desk

ಸಮಾಜವಾದಿ ಚಳವಳಿ ಯಶಸ್ಸಿನಲ್ಲಿ ಮಾಧ್ಯಮ ಪಾತ್ರ ದೊಡ್ಡದು

Malenadu Mirror Desk

ಶಿವಮೊಗ್ಗ ಎಫ್.ಎಂ.-90.8 ಸಮುದಾಯ ರೇಡಿಯೋ ಕೇಂದ್ರ ಆರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.