ಪ್ರಸ್ತುತ ದಿನಮಾನದಲ್ಲಿ ರಾಜಕಾರಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಕೂಡಾ ಮೌಲ್ಯಗಳಿಗೆ ಮಹತ್ವ ನೀಡುತ್ತಿಲ್ಲ. ಅಧಿಕಾರ ಹಾಗು ಜನಪ್ರಿಯತೆಗಾಗಿ ಧರ್ಮಮಾರ್ಗ ಬದಲಾಯಿಸಿದ್ದ ಕಾರಣ ಸಮಾಜದಲ್ಲಿ ಅಶಾಂತಿ ತಲೆದೋರಿದೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ಜಿಲ್ಲೆ ಸಾಗರದ ಈಡಿಗರ ಸಭಾಭವನದಲ್ಲಿ ಶನಿವಾರ ರಾಮಕ್ಷೇತ್ರ ಸೇವಾ ಸಮಿತಿ ಸಾಗರ ,ಆರ್ಯ ಈಡಿಗ ಸಂಘ ಹಾಗು ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ನೆರವೇರಿದ ಸೀತಾರಾಮ ಕಲ್ಯಾಣ , ಸಾಮೂಹಿಕ ಸತ್ಯನಾರಾಯಣ ಪೂಜೆ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಇಂದಿನ ಪೀಳಿಗೆ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗಲು ಹಿರಿಯರ ಹೋರಾಟ ಹಾಗು ತ್ಯಾಗದ ಕಾರಣವಾಗಿದೆ. ಅವರೆಲ್ಲಾ ಅವರವರ ಕಾಯಕದಲ್ಲಿ ಶ್ರದ್ಧೆ ,ಧರ್ಮ ನೆಲೆಯಲ್ಲಿದ್ದ ಕಾರಣ ಎಲ್ಲರಿಗೂ ಉತ್ತಮ ನ ಪಲಿತಾಂಶ ದೊರಕಲು ಸಾಧ್ಯವಾಯಿತು. ಭಗವದ್ಗೀತೆಯು ಸನ್ಮಾರ್ಗದಿಂದ ಜೀವನ ಸಾಗಿಸಲು ಬೇಕಾದ ಎಲ್ಲಾ ಮಾರ್ಗಗಳನ್ನ ತೋರಿಸುತ್ತದೆ.ಹಾಗಾಗಿ ಎಲ್ಲರೂ ಅವರವರ ಕ್ಷೇತ್ರದಲ್ಲಿ ಧರ್ಮ ಮಾರ್ಗದಲ್ಲಿ ಸಾಗಬೇಕು ಎಂದು ಶ್ರೀಗಳು ಹೇಳಿದರು.
ಉತ್ತಮ ಜೀವನ ಶಿಕ್ಷಣ ಅವಶ್ಯಕ. ಶಿಕ್ಷಣ ದೊರೆತ ಅರಿವಿದ ಮನಷ್ಯ ಉತ್ತಮ ಜೀವನ ಕಟ್ಡಿಕೊಳ್ಳುತ್ತಾ ಸಮಾಜವನ್ನ ಸಂಘಟಿಸಿ ಎಲ್ಲರ ಬೆಳವಣಿಗೆಗೆ ಮುಂದಾಗಬೇಕು.ಆಗ ಮಾತ್ರ ಸಮಾಜದಲ್ಲಿನ ತರತಮಬೇಧವನ್ನ ಕಳೆಯಲು ಸಾಧ್ಯವಾಗುತ್ತದೆ. ಎಲ್ಲರ ಕೈಗಳು ಕೊಡುವ ಕೈಗಳಾಗಲಿ. ಸೀತಾರಾಮರು ಜಗತ್ತಿಗೆ ಉತ್ತಮ ಆದರ್ಶಗಳನ್ನ ಬಿಟ್ಡು ಹೋಗಿದ್ದಾರೆ. ಪತಿಯಿಂದ ದೂರವಾದ ಸತಿ ಪತಿ ರಾಮನ ಧ್ಯಾನದಲ್ಲೇ ಪರಪುರಷನಿಂದ ರಕ್ಷಿತಳಾದಳು. ಅದೇ ರೀತಿಯಲ್ಲಿ ಶ್ರೀರಾಮನೂ ಕೂಡ ತನ್ನ ಪತಿಧರ್ಮವನ್ನ ಪಾಲಿಸಿದ ಮರ್ಯಾದಾ ಪುರುಷೋತ್ತಮನಾಗಿ ಆತನ ಆದರ್ಶಗಳಿಂದ ಕಲ್ಯಾಣ ರಾಜ್ಯವಾಗಿ ರಾಮರಾಜ್ಯ ನಿರ್ಮಾಣವಾಗಿ ಸರ್ವಜನರೂ ಸುಖಿಗಳಾಗಿದ್ದರು. ಅದೇ ರೀತಿಯಲ್ಲಿ ಎಲ್ಲರೂ ಸನ್ಮಾರ್ಗದಿಂದ ನಡೆದರೆ ಇಂದೂ ಕೂಡ ರಾಮರಾಜ್ಯವಾಗುತ್ತದೆ ಎಂಬ ಮಹತ್ವವನ್ನ ಸಾರಲು ಲೋಕಕಲ್ಯಾಣಕ್ಕಾಗಿ ಶ್ರೀ ಕ್ಷೇತ್ರ ದಿಂದ ಸೀತಾರಾಮಾಕಲ್ಯಾಣವನ್ನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಅದೇ ರೀತಿಯಲ್ಲಿ ಸಾಗರದ ಸದ್ಬಕ್ತರು ಈ ಕಾರ್ಯಕ್ರಮ ಆಯೋಜಿಸಿ ,ಅತೀವ ಸಂತಸವುನ್ನುಂಟು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಹರತಾಳು ಹಾಲಪ್ಪ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ, ಡಾ. ರಾಜನಂದಿನಿ ಕಾಗೋಡು, ಮಂಜಪ್ಪ ಮರಸ, ಪಾಂಡುರಂಗಪ್ಪ, ವೀರಭದ್ರ ಸೂರುಗುಪ್ಪೆ, ಕರುಣಾಕರ, ಷಣ್ಮುಖ ಸೂರನಗದ್ದೆ, ತಾರಾಮೂರ್ತಿ, ಚಂದ್ರಪ್ಪ, ಸರ್ವಮಂಗಳಾ ನಾಗರಾಜ್, ಸಮಿತಿಯ ಅಧ್ಯಕ್ಷ ಗಿರೀಶ್ ಕೋವಿ, ಪರಶುರಾಮಪ್ಪ ಮತ್ತಿತರರಿದ್ದರು.
ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ಹಾಗೂ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳು ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮಗಳು ಆಗಮ ಪ್ರವೀಣ ಲಕ್ಷ್ಮೀಪತಿ ಗೋಪಾಲಾಚಾರ್ಯ ಅವರ ಪೌರೋಹಿತ್ಯದಲ್ಲಿ ನೆರವೇರಿತು.
ಎಲ್ಲರೂ ಸನ್ಮಾರ್ಗದಿಂದ ನಡೆದರೆ ಇಂದೂ ಕೂಡ ರಾಮರಾಜ್ಯವಾಗುತ್ತದೆ ಎಂಬ ಮಹತ್ವವನ್ನ ಸಾರಲು ಲೋಕಕಲ್ಯಾಣಕ್ಕಾಗಿ ಶ್ರೀ ಕ್ಷೇತ್ರ ದಿಂದ ಸೀತಾರಾಮಾಕಲ್ಯಾಣವನ್ನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ