ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೨೧-೨೨ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡುವ ಮೂಲಕ ಪುರಸ್ಕರಿಸಲಾಯಿತು.
ಸಮಾಜ ಸೇವಕರಾದ ಸುರೇಶ್ ಬಾಳೆಗುಂಡಿ, ಗ್ರಾಮಪಂಚಾಯತ್ ಸದಸ್ಯರಾದ ಮಂಜುನಾಥ ಕಾನಲೆ, ಶಿವಮೂರ್ತಿ ಮಂಡಗಳಲೆ, ಎಸ್ ಡಿ ಎಂ ಸಿ ಮತ್ತು ಶಾಲಾ ಸಿಬ್ಬಂದಿ ಸೇರಿ ಒಟ್ಟು ೨೯೦೦೦ ರೂ.ಗಳನ್ನು ಸಂಗ್ರಹ ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಈ ಬಾರಿಯ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಕುಮಾರಿ ರಕ್ಷಿತಾಳನ್ನು ಸನ್ಮಾನಿಸಲಾಯಿತು. ಜೊತೆಗೆ ಈ ವರ್ಷ ೮ ನೇ ತರಗತಿ ವಿದ್ಯಾರ್ಥಿಗಳಿಗೆ ಹೂವುಗಳನ್ನು ನೀಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಮಲಾ ನಾಗರಾಜ್ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮಾಕರ್ , ಉಪಾಧ್ಯಕ್ಷೆ ಶ್ರೀಮತಿ ಸುಮತಾ, ಸದಸ್ಯರುಗಳಾದ ರಾಮಪ್ಪ, ಧರ್ಮಪ್ಪ, ಮಖ್ಯಶಿಕ್ಷಕಿ ಡಾ. ಅನ್ನಪೂರ್ಣ, ಎಸ್ ಡಿ ಎಂ ಸಿ ಸದಸ್ಯರು,ಶಿಕ್ಷಕರು,ಪೋಷಕರು ಹಾಜರಿದ್ದರು.