ಶಿರಸಿ: ವಿದ್ಯಾರ್ಥಿಗಳು ನಾರಾಯಣ ಗುರುಗಳ ತತ್ವ ಸಿದ್ಧಾಂತದಡಿಯಲ್ಲಿ ಮಾನವೀಯತೆ ಕಟ್ಟಿಕೊಡುವ ಶಿಕ್ಷಣ ಪಡೆಯುವ ಅಗತ್ಯವಿದೆ ಎಂದು ಸೋಲೂರು ರೇಣುಕಾಪೀಠ ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಶಿರಸಿಯ ಸುಪ್ರಿಯಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಬೆಂಗಳೂರು ಅಡಿಯಲ್ಲಿ ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಿಂದ ಸಹಕಾರ ಪಡೆದು ಸಾಧನೆ ಮಾಡಿದವರು ಎಂದಿಗೂ ಸಮಾಜವನ್ನು ಮರೆಯಬಾರದು. ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವ ಮೂಲಕ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು. ನಾವು ಮೊತ್ತೊಬ್ಬರಿಗೆ ಅಸ್ತ್ರವಾಗದೆ ವಿವೇಕಾಪೂರ್ಣ, ಸಂಸ್ಕಾರದ ಬದುಕು ಕಟ್ಟಿಕೊಳ್ಳಬೇಕು ಎಂದರು.
ತಾಲೂಕು ಈಡಿಗ ನಾಮದಾರಿ ಬಿಲ್ಲವ ಸಂಘದ ಅಧ್ಯಕ್ಷ ಭೀಮಣ್ಣ ಟಿ.ನಾಯ್ಕ ಉದ್ಘಾಟಿಸಿ ಮಾತನಾಡಿ, ಈಡಿಗ ಸಮಾಜಕ್ಕೆ ಜೆ.ಪಿ.ನಾರಾಯಣಸ್ವಾಮಿ ಅವರು ಕೊಡುಗೆ ಸ್ಮರಣೀಯ. ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜ ಕಟ್ಟಬೇಕಿದೆ. ವಿದ್ಯಾರ್ಥಿಗಳು ಆ ದಿಸೆಯಲ್ಲಿ ಪರಿಪೂರ್ಣ ಶಿಕ್ಷಣ ಪಡೆದು ಉದ್ಯೋಗ ಪಡೆಯುವ ಮೂಲಕ ಸಮಾಜದ ಏಳಿಗೆಗೆ ನೆರವಾಗಬೇಕು ಎಂದರು.
ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಉಪಾಧ್ಯಕ್ಷ ಡಾ.ಲಕ್ಷ್ಮೀನರಸಯ್ಯ ಪ್ರಾಸ್ತಾವಿಕ ಮಾತನಾಡಿ, ಈಡಿಗ ಸಮಾಜವನ್ನು ಕಟ್ಟಿ ಬೆಳೆಸುವ ಉದ್ದೇಶ ಹಲವು ಕಾರ್ಯಕ್ರಮಗಳನ್ನು ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಹೊಂದಿದೆ. ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಉದ್ಯೋಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಆರ್.ಎಲ್.ಜಾಲಪ್ಪ ಅಕಾಡೆಮಿ, ಜೆ.ಪಿ ನಾರಾಯಣಸ್ವಾಮಿ ಪ್ರತಿಷ್ಠಾನ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಈ ವರ್ಷ 2591 ವಿದ್ಯಾರ್ಥಿಗಳಿಗೆ ಒಟ್ಟು ರೂ. 2.27 ಕೋಟಿಯನ್ನು ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ಸೋಲೂರು ಜಾಲಪ್ಪ ಅಕಾಡೆಮಿ ಅಧ್ಯಕ್ಷ ಎಚ್.ಎಲ್.ಶಿವಾನಂದ ಮಾತನಾಡಿ, ಯುವಜನತೆಗೆ ಇಂದು ಪದವಿಗಳ ಜತೆಗೆ ಕೌಶಲ್ಯ ತರಬೇತಿಗಳು ಅಗತ್ಯವಾಗಿವೆ ಎಂದ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣ, ತರಬೇತಿ, ಉದ್ಯೋಗ, ಸ್ವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು.
ಸಾಹಿತಿ ಲಕ್ಷ್ಮಣ್ ಕೊಡಸೆ, ಮಂಗಳೂರು ಎಸಿಪಿ ಎಸ್.ಮಹೇಶಕುಮಾರ್, ಪೂರ್ಣೇಶ್, ಕುಸುಮಾ ಅಜಯ್, ಆರ್.ಟಿ.ನಾಯ್ಕ್, ಸಿ.ಎಫ್ ನಾಯ್ಕ್, ಸತೀಶ್ ನಾಯ್ಕ್, ಸುನೀಲ್ ನಾಯ್ಕ್, ಸತೀಶ್ ಹಾವೇರಿ, ಆನಂದ ಪೂಜಾರಿ ಧಾರವಾಡ, ಸುಧಾಕರ್ ನಾಯ್ಕ್, ಗಣಪತಿ ನಾಯ್ಕ್, ಎಸ್.ಬಿ.ನಾಯ್ಕ್, ನಾಗರಾಜ್ ನಾಯ್ಕ್, ಸಿ.ಡಿ.ನಾಯ್ಕ್, ಮನೋಜ್ ನಾಯ್ಕ್, ನೀಲೇಶ್ ಸಮನೀ ಸೊರಬ ಮತ್ತಿತರರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಸಿ.ಎನ್.ನಾಯ್ಕ್, ಉಪನ್ಯಾಸಕ ಉಮೇಶ್ ನಾಯ್ಕ್ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ದೀಕ್ಷಾ ರಾಜು ನಾಯ್ಕ್, ಚಿರಾಗ್, ದೀಕ್ಷಾ ಪಾಂಡುರಂಗ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್ ವಿತರಿಸಲಾಯಿತು.
ಸ್ವಾತಿನಾಯ್ಕ್ ಪ್ರಾರ್ಥಿಸಿ, ಜಿಲ್ಲಾ ಮುಖ್ಯ ಸಂಚಾಲಕ ಡಾ.ನಾಗೇಶ ಎಚ್.ನಾಯ್ಕ ಕಾಗಾಲ ಸ್ವಾಗತಿಸಿ, ಶ್ರೀನಿವಾಸ್ ನಾಯ್ಕ್ ವಂದಿಸಿ, ಡಾ.ಸತೀಶ್ ನಾಯ್ಕ್ ಹಾಗೂ ಸುರೇಶ್ ನಾಯ್ಕ್ ನಿರೂಪಿಸಿದರು.