ಉಂಬ್ಳೆಬೈಲ್ ಸಮೀಪದ ತೋಟದ ಕೆರೆ ಸಮೀಪ ಶುಕ್ರವಾರ ಸಂಜೆ ಸಂಭವಿಸಿದ ಬಸ್ ಅಪಘಾತದಲ್ಲಿ ನಲವತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಶಿವಮೊಗ್ಗ ಕಡೆಯಿಂದ ಹೋಗುತಿದ್ದ ಕೆಕೆಬಿ ಬಸ್ ಮತ್ತು ಶಿವಮೊಗ್ಗಕ್ಕೆ ಬರುತ್ತಿದ್ದ ಸರಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಘಟನೆಯಲ್ಲಿ ಖಾಸಗಿ ಬಸ್ ಚಾಲಕ ಶೃಂಗೇರಿ ತಾಲೂಕು ಕುಂಚೇಬೈಲಿನ ಶ್ರೀಧರ್ ಭಟ್ಟ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸರಕಾರಿ ಬಸ್ ಚಾಲಕ ಮಲ್ಲೇಶ್ ಅವರಿಗೂ ಗಾಯಗಳಾಗಿವೆ. ಎರಡೂ ಬಸ್‌ಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರುಗಳು ಪ್ರಯಾಣಿಸುತ್ತಿದ್ದರು. ಹಲವರಿಗೆ ಮೂಗು, ಹಣೆಗೆ ಪೆಟ್ಟು ಬಿದ್ದಿದೆ. ಎರಡೂ ಬಸ್‌ಗಳ ಪ್ರಯಾಣಿಕರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದಿದ್ದರಿಂದ ಆಸ್ಪತ್ರೆಯ ತುರ್ತುಚಿಕಿತ್ಸಾ ವಾರ್ಡಿನಲ್ಲಿ ಜನಜಂಗುಳಿಯಾಗಿತ್ತು.ಅಧೀಕ್ಷಕರಾದ ಡಾ.ಶ್ರೀಧರ್ ವಾರ್ಡಿನಲ್ಲಿ ಹಾಜರಿದ್ದರು, ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದರು. ಸಿಮ್ಸ್ ಆಡಳಿತಾಧಿಕಾರಿ ಕೆ.ಹೆಚ್.ಶಿವಕುಮಾರ್ ಕೂಡಾ ಹಾಜರಿದ್ದರು.
next post