Malenadu Mitra
ರಾಜ್ಯ ಶಿವಮೊಗ್ಗ

ಮುಂದುವರಿದ ಮಳೆ, ಘಟ್ಟದ ಸಾಲಿನಲ್ಲಿ ಜಲಪಾತಗಳ ಚತ್ತಾರೆ ತುಂಬಿದ ಪುರದಾಳು ಡ್ಯಾಂ

ಮಲೆನಾಡಿನಲ್ಲಿ ಮಳೆ ಅಬ್ಬರ ಕಡಿಮೆಯಾಗಿಲ್ಲ ಜಿಲ್ಲೆಯ ಎಲ್ಲಾ ನದಿಗಳು ಮೈದುಂಬಿ ಹರಿಯುತಿದ್ದು, ಹಳ್ಳಕೊಳ್ಳಗಳು ತುಂಬಿಹರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗಗಳ ಘಟ್ಟಗಳ ಸಾಲಿನಲಿ ಉದ್ಭವಿಸಿರುವ ಚಿಕ್ಕ ಚಿಕ್ಕ ಫಾಲ್ಸ್‌ಗಳು ನೋಡುಗರ ಕಣ್ಮನ ತಣಿಸಿವೆ.
ಅಗುಂಬೆ ಘಾಟಿ ಮತ್ತು ಹೊಸನಗರ ತಾಲೂಕು ಹುಲಿಕಲ್ ಮತ್ತು ಕಾರ್ಗಲ್ ಹೋಗುವ ಮಾರ್ಗದಲಿ ರಸ್ತೆ ಉದ್ದಕ್ಕೂ ಇಂತಹ ಫಾಲ್ಸ್‌ಗಳನ್ನು ನೋಡಬಹುದಾಗಿದೆ.
ಭಾನುವಾರ ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಲಿಂಗನಮಕ್ಕಿ ಅಣೆಕಟ್ಟೆಗೆ ೧೭೯೪.೨೦ ಅಡಿ ನೀರು ಬಂದಿದೆ. ೧೯೧೯ ಅಡಿ ಜಲಾಶಯದ ಗರಿಷ್ಠ ಮಟ್ಟವಾಗಿದೆ. ೬೮೦೨೮ ಕ್ಯೂಸೆಕ್ ನೀರಿನ ಒಳಹರಿವಿದೆ. ಕಳೆದ ವರ್ಷ ಇದೇ ಹೊತ್ತಿಗೆ ಡ್ಯಾಮಿಗೆ ೧೭೯೦ ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಜಲಾಶಯ ತುಂಬಿದ್ದು, ನದಿಗೆ ನೀರು ಬಿಡಲಾಗಿದೆ. ಭಾನುವಾರ ೧೮೨.೩ ಅಡಿ ನೀರು ತುಂಬಿದ್ದು, ಜಲಾಶಯದ ಗರಿಷ್ಠ ಮಟ್ಟ ೧೮೬ ಅಡಿಯಾಗಿದೆ. ೫೨೭೩೦ ಕ್ಯೂಸೆಕ್ ಹೊರ ಹರಿವಿದೆ. ತುಂಗಾ ಜಲಾಶಯದ ನೀರಿನ ಮಟ್ಟ ಭಾನುವಾಋ ಬೆಳಗ್ಗೆ ೫೮೭.೪೨ ಮೀಟರ್‌ನಷ್ಟಿತ್ತು. ಜಲಾಶಯದಿಂದ ೫೧೯೩೯ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ತುಂಬಿದ ಪುರದಾಳು ಡ್ಯಾಂ:

ಶಿವಮೊಗ್ಗ ತಾಲೂಕು ಪುರದಾಳು ಬಾರೇಹಳ್ಳ ಡ್ಯಾಂ ಭಾನುವಾರ ಕೋಡಿ ಬಿದ್ದಿದೆ. ಶಿವಮೊಗ್ಗಕ್ಕೆ ಅತೀ ಸಮೀಪವಿರುವ ಪುರದಾಳು ಡ್ಯಾಂ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಸುಂದರ ಪರಿಸರ ಹೊಂದಿರುವ ಈ ಸ್ಥಳದಲ್ಲಿ ಶಿವಮೊಗ್ಗ ನಗರದಿಂದ ಹೆಚ್ಚಾಗಿ ಪ್ರವಾಸಿಗರು ಬರುತ್ತಾರೆ. ಈಗ ಡ್ಯಾಂ ಕೋಡಿ ಬಿದ್ದಿರುವ ದೃಶ್ಯ ನಯನ ಮನೋಹರವಾಗಿದೆ. ಪ್ರವಾಸಿಗಳು ಸುಂದರ ತಾಣವನ್ನು ನೋಡಿ ಕಣ್ತುಂಬಿಕೊಳ್ಳಬೇಕು. ಆದರೆ ಸಿಟಿಯಿಂದ ಬರುವ ಹುಡುಗರು ಅಲ್ಲಿನ ವಾತಾವರಣವನ್ನು ಕಲುಷಿತಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಮದ್ಯಪಾನ ಮಾಡುವ ಹಲವರು ಡ್ಯಾಂ ಸುತ್ತಲ ಪರಿಸರದಲ್ಲಿ ಬಾಟಲಿ ಹಾಗೂ ಪ್ಲಾಸ್ಟಿಕ್‌ಗಳನ್ನು ಬಿಸಾಕುತ್ತಿರುವುದು ಪರಿಸರವನ್ನು ಹಾಳುಮಾಡುವುದನ್ನು ನಿಲ್ಲಿಸಿದರೆ, ಜಿಲ್ಲಾ ಕೇಂದ್ರಕ್ಕೆ ಅತೀ ಸಮೀಪದಲ್ಲಿ ವೀಕೆಂಡ್‌ನಲ್ಲಿ ಒಂದು ತಾಣದ ಭೇಟಿಗೆ ಅವಕಾಶವಾಗುತ್ತದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ಹರಿಸಬೇಕು.

Ad Widget

Related posts

ನಾಪತ್ತೆಯಾಗಿದ್ದ ಗಿರಿರಾಜ್ ಸಿಕ್ಕಿದ್ದು ಹೇಗೆ ಗೊತ್ತಾ ?

Malenadu Mirror Desk

ಹರ್ಷ ಕೊಲೆ ಹಿಂದೆ ಷಡ್ಯಂತ್ರ, ಹರ್ಷನಿಗೆ ವಿಡಿಯೋ ಕಾಲ್ ಮಾಡಿ ಕರೆದಿದ್ದ ಹುಡುಗಿಯರು ಯಾರು?, ಹಲವು ಆಯಾಮಗಳಲ್ಲಿ ಪೊಲೀಸರಿಂದ ತನಿಖೆ

Malenadu Mirror Desk

ಮುಂದುವರಿದ ಕೊರೊನ ಅಟ್ಟಹಾಸ : 15 ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.