ಸಾಗರ,-ಜೋಗ ನಡುವಿನ ಆಲಳ್ಳಿ ಕ್ರಾಸ್ ಬಳಿ ಸೋಮವಾರ ಸಂಜೆ ಸಂಭವಿಸಿ ಭೀಕರ ರಸ್ತೆ ಅಪಘಾತದಲ್ಲಿ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ
ಮಾರುತಿ ಇಕೊ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿದೆ. ಸತ್ತವರು ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದವರೆನ್ನಲಾಗಿದೆ.
ಮೃತ ಒಬ್ಬ ವ್ಯಕ್ತಿಯನ್ನು ಚನ್ನಗಿರಿಯ ಶಾಭಾಜ್(23) ಎಂದು ಗುರುತಿಸಲಾಗಿದೆ. ಕಾರಿನಲ್ಲಿ (14),ತಬಸ್ಸುಮ್(23),
ಶಿಫಾ(27),ಖಮರುನ್ನಿಸಾ(45),ಜಬ್ರುನ್(55),ಮಹಮ್ಮದ್ ಉಸ್ಮಾನ್(25)
ಸೇರಿ 6 ಮಂದಿ ಪ್ರಯಾಣಿಸುತ್ತದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ,ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು,ಜೋಗ ಜಲಪಾತ ವೀಕ್ಷಿಸಿ ವಾಪಸ್ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿದ್ದಾರೆ.