ಶಿವಮೊಗ್ಗ,ಆ.೪: ಹೊಸನಗರ ತಾಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ನಿವೇಶನ ಮಂಜೂರು ಮಾಡಬೇಕೆಂದು ಸಂಘದ ಪ್ರಮುಖರು ಶಾಸಕ ಹರತಾಳು ಹಾಲಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ನೂರು ವರ್ಷಗಳ ಇತಿಹಾಸ ಇರುವ ರಾಜ್ಯ ಸಂಘದ ಹೊಸನಗರ ತಾಲೂಕು ಘಟಕಕ್ಕೆ ಕಳೆದ ೪೦ ವರ್ಷಗಳಿಂದ ಸಕ್ರಿಯವಾಗಿದೆ. ಸಂಘಕ್ಕೆ ಸಭೆ ಸಮಾರಂಭ ನಡೆಸಲು ಯಾವುದೇ ಜಾಗ ಇರುವುದಿಲ್ಲ ಆದ್ದರಿಂದ ಕಳೂರು ಗ್ರಾಮದಲ್ಲಿ ಗೊತ್ತು ಮಾಡಿರುವ ಒಂದು ಎಕರೆ ಜಾಗವನ್ನು ಸಂಘಕ್ಕೆ ನೀಡಬೇಕು. ಈ ನಿವೇಶನದಲ್ಲಿ ಸಂಘ ನಿರ್ಮಿಸುವ ಮೂಲ ಸೌಕರ್ಯವನ್ನು ಸರಕಾರ ಯಾವುದೇ ತುರ್ತು ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಸಂಬಂಧಪಟ್ಟವರಿಗೆ ಅರ್ಜಿ ಕಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಗಿರೀಶ್ ಕೆ.ಎನ್, ದೇವರಾಜ್, ಸತೀಶ್ ಬಾವಿಕಟ್ಟೆ, ಸುಧೀಂದ್ರ ಪೂಜಾರಿ ಪ್ರಮುಖರಾದ ಎಂ.ಎನ್.ಸುಧಾಕರ್ ಮತ್ತಿತರರು ಹಾಜರಿದ್ದರು.
previous post