ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆ ಹಕ್ಲು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಲ್ಲಿನ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವೆಂಕಟೇಶ್ ಸಾವಿಗೀಡಾಗಿದ್ದಾರೆ.
ವೆಂಕಟೇಶ್ ಬೈಕ್ನಲ್ಲಿ ಬರುತ್ತಿದ್ದಾಗ, ಟರ್ನಿಂಗ್ನಲ್ಲಿ ಒಮಿನಿಗೆ ಗುದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್ರವರು ಸಾವನ್ನಪ್ಪಿದ್ದಾರೆ.
ಶಾಲೆಯ ಕೆಲಸದ ಸಲುವಾಗಿಯೇ ವೆಂಕಟೇಶ್ ಎಲ್ಲಿಗೊ ಹೊರಟ್ಟಿದ್ದರು ಎನ್ನಲಾಗುತ್ತಿದ್ದು, ಟರ್ನಿಂಗ್ ಸ್ಪೀಡ್ ಆಗಿದ್ದ ಒಮಿನಿಗೆ ಬೈಕ್ ಡಿಕ್ಕಿಯಾಗಿದೆ.
ಮೂಲತಃ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದವರಾದ ವೆಂಕಟೇಶ್ ಈ ವರ್ಷ ಪ್ರಮೋಶನ್ ಪಡೆದು ಹೆಡ್ಮಾಸ್ಟರ್ ಆಗಿ ಕಟ್ಲೆ ಹಕ್ಲು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.
ಸುತ್ತಮುತ್ತ ಉತ್ತಮ ಮೇಷ್ಟ್ರು ಎಂದು ಹೆಸರು ಮಾಡಿದ್ದ ಅವರ ನಿಧನಕ್ಕೆ ಸ್ತಳೀಯರು ಕಂಬನಿ ಮಿಡಿದಿದ್ದಾರೆ.