Malenadu Mitra
ರಾಜ್ಯ ಶಿವಮೊಗ್ಗ

ಕಾಂಗ್ರೆಸ್‌ಗೆ ಭಾರತ್ ಜೋಡೋ ಅಭಿಯಾನ ನಡೆಸುವ ನೈತಿಕತೆ ಇಲ್ಲ

ಭಾರತ್ ಜೋಡೋ ಎನ್ನುವ ಪದ ಬಳಸುವ ಯೋಗ್ಯತೆ ಕಾಂಗ್ರೆಸ್‌ನವರಿಗೆ ಇಲ್ಲ. ನೆಹರು ಸಂತತಿ ಎಂದರೆ ಜಿನ್ನಾ ಸಂತತಿ ಇದ್ದಂಗೆ ಎಂದು ಮಾಜಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದರು. ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ತುಂಡು ಮಾಡಿದ್ದ ಜನ ಇವತ್ತು ಭಾರತ್ ಜೋಡೋ ಎಂಬ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ರಾಷ್ಟ್ರಭಕ್ತಿಯ ಬಗ್ಗೆ ಈಗಿನ ಕಾಂಗ್ರೆಸ್ ಮಂದಿಗೆ ಸರಿಯಾದ ಕಲ್ಪನೆ ಇಲ್ಲ, ಹಿಂದಿನ ಕಾಂಗ್ರೆಸ್‌ಗೂ ಈಗಿನ ಕಾಂಗ್ರೆಸ್‌ಗೂ ವ್ಯತ್ಯಾಸವಿದೆ ಎಂದರು.
ದೇಶವನ್ನು ತುಂಡು ಮಾಡಿದ ಜವಾಹರ್ ಲಾಲ್ ನೆಹರು ಅವರು, ಪಾಕಿಸ್ತಾನ, ಹಿಂದುಸ್ತಾನ, ಬಾಂಗ್ಲಾದೇಶ ಎಂದು ಚೂರುಚೂರು ಮಾಡಿದ್ದಾರೆ. ನೆಹರು ವಂಶಸ್ಥರಾದ ರಾಹುಲ್ ಗಾಂಧಿ ಭಾರತ ಜೋಡೋ ಎಂಬ ವಿಚಾರದಲ್ಲಿ ಪಾದಯಾತ್ರೆ ಮಾಡುತ್ತಾರಂತೆ. ದೇಶವನ್ನು ತುಂಡು ತುಂಡು ಮಾಡಿದವರು ರಾಷ್ಟ್ರಭಕ್ತರೋ, ದೇಶದ್ರೋಹಿಗಳೋ ಎಂದು ದೇಶದ ಜನ ತೀರ್ಮಾನ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷವನ್ನು ದೇಶದ ಜನರು ಮೂಲೆಗುಂಪು ಮಾಡಿರುವ ಸಂದರ್ಭದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಈ ಪ್ರಯತ್ನ ಮಾಡುತ್ತಿದ್ದಾರೆ. ಇಂಥವರು ಭಾರತ್ ಜೋಡೋ ಎಂದು ಹೊರಟಿರುವುದು ನಿಜಕ್ಕೂ ದುಃಖದ ಸಂಗತಿ.
ರಾಜ್ಯದ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೆ ಧ್ವಜದ ಬಣ್ಣ ಗೊತ್ತಿಲ್ಲ. ಕೆಂಪು ಬಿಳಿ ಹಸಿರು ಎಂದು ಹೇಳುವ ಪರಿಸ್ಥಿತಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರದ್ದು. ಹಾಗಾಗಿ ಧ್ವಜದ ಬಣ್ಣ ಕೇಸರಿ ಬದಲು ಕೆಂಪು ಎಂದು ಹೇಳಿದ ಸಿದ್ದರಾಮಯ್ಯನವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.

ಆಗಿನ ಸಿಎಂ ಸಿದ್ದರಾಮಯ್ಯ ಅವರ ಭ್ರಷ್ಟಾಚಾರ ಮುಚ್ಚಿಡಲು ಲೋಕಾಯುಕ್ತ ಸಂಸ್ಥೆ ಇದ್ದರೂ ಎಸಿಬಿ ಜಾರಿ ಮಾಡಿದ್ದರು. ಕೋರ್ಟ್ ಎಸಿಬಿ ರದ್ದುಮಾಡಿ ಲೋಕಾಯುಕ್ತ ಲೋಕಾಯುಕ್ತ ಶಕ್ತಿ ನೀಡುವಂತೆ ಕೋರ್ಟ್ ಹೇಳಿದ್ದು, ನಮ್ಮ ಸರ್ಕಾರ ಸ್ವಾಗತ ಮಾಡುತ್ತದೆ
-ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರು ಹಾಗೂ ಶಾಸಕರು

Ad Widget

Related posts

ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿದ ಮಂಜುನಾಥ್‌ಗೌಡ, ಬಿಜೆಪಿ ಅವಧಿಯಲ್ಲಿ ಕಳೆದುಕೊಂಡದ್ದನ್ನು ಕಾಂಗ್ರೆಸ್ ಸರಕಾರದಲ್ಲಿ ಪಡೆದುಕೊಂಡ ಹಠವಾದಿ

Malenadu Mirror Desk

ಹಿಂದುಳಿದ ವರ್ಗಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಒದಗಿಸಬೇಕು: ಜಯಪ್ರಕಾಶ್ ಹೆಗ್ಡೆ

Malenadu Mirror Desk

ಸಂಪುಟದಿಂದ ಕೈ ಬಿಡುವ ಎಚ್ಚರಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.