Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಜ್ಞಾನ, ವಿಜ್ಞಾನ, ಕೈಗಾರಿಕಾ ಹೊಸ ಸಮಾಜ ಕಟ್ಟಿದವರು ನಾರಾಯಣಗುರು: ಡಾ.ಮೋಹನ್ ಚಂದ್ರಗುತ್ತಿ

ಸೊರಬ: ಅಸ್ಪೃಶ್ಯತೆ, ಅಸಮಾನತೆ ತಾಂಡವವಾಡುವ ಕೇರಳ ರಾಜ್ಯದಲ್ಲಿ ಜ್ಞಾನ, ವಿಜ್ಞಾನ, ಕೈಗಾರಿಕಾ ಹೊಸ ಸಮಾಜ ಕಟ್ಟಿದವರು ನಾರಾಯಣಗುರುವಾಗಿದ್ದಾರೆ ಎಂದು ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ತಾಲೂಕು ಆರ್ಯ ಈಡಿಗರ(ದೀವರ) ಸಂಘ, ಎಸ್‌ಎನ್‌ಜಿವಿ, ಬಿಎಸ್‌ಎನ್‌ಡಿಪಿ ತಾಲೂಕು ಘಟಕಗಳು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಪ್ರತಿಷ್ಠಾನ, ಮಹಿಳಾ ಈಡಿಗರ ಸಂಘ, ಈಡಿಗರ ನೌಕರರ ಸಂಘ ಸೊರಬ ವತಿಯಿಂದ ಶನಿವಾರ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೮ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಕೇರಳದಲ್ಲಿ ಮೇಲ್ವರ್ಗದವರ ಶೋ ಷಣೆಗಳಿಗೆ ಒಳಗಾದ ಅಸಹಾಯಕ ಸಮುದಾಯಗಳನ್ನು ಕಟ್ಟುವ ಕಾರ್ಯವನ್ನು ನಾರಾಯಣಗುರು ಮಾಡಿದ್ದರು. ಧಾರ್ಮಿಕ ಶೋಷಣೆಯನ್ನು ಬಲವಾಗಿ ಖಂಡಿಸುವ ಜತೆಗೆ ನೂತನ ಪರಿಕಲ್ಪನೆಯಲ್ಲಿ ಶಿವ ದೇವಸ್ಥಾನ ಕಟ್ಟಿ ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆಯುವ ಜತೆಗೆ ಅವರು ತೆರೆದ ೬೦ ದೇವಸ್ಥಾನಗಳಲ್ಲಿ ಎಲ್ಲಾ ಜಾತಿಯವರ ಪ್ರವೇಶಕ್ಕೆ ಅವಕಾಶ ನೀಡಿ ಧಾರ್ಮಿಕ ಸುಧಾರಣೆ ಮಾಡಿದ್ದರು. ಕೇರಳ ನಾಡಿನಲ್ಲಿ ಶ್ರೀ ನಾರಾಯಣಗುರು ಧರ್ಮ ಪರಿಪಾಲನ ಯೋಗಂ ಸ್ಥಾಪಿಸಿ ಶಿಕ್ಷಣ, ಉದ್ಯೋಗ, ಸಂಘಟನೆಗೆ ಒತ್ತು ನೀಡಲಾಗಿತ್ತು ಎಂದ ಅವರು ಆಧುನಿಕರಣ ಹಾಗೂ ಜಾಗತಿಕರಣ ಮನುಷ್ಯರನ್ನು ಗುಲಾಮರನ್ನಾಗಿಸಿಕೊಳ್ಳುತ್ತಿದ್ದು, ಸಮುದಾಯಗಳು ತಮ್ಮೊಳಗಿನ ಅನನ್ಯತೆಯನ್ನು ಉಳಿಸಿಕೊಂಡು ಹೋಗುವ ಅಗತ್ಯವಿದೆ ಎಂದರು.

ತಾಲೂಕು ಆರ್ಯ ಈಡಿಗರ(ದೀವರ) ಸಂಘದ ಅಧ್ಯಕ್ಷ ಕೆ.ಅಜ್ಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳಿತಕ್ಕೆ ಒಳಗಾದವರ ಪರವಾಗಿ ನಿಂತು ಹೋರಾಡಿ ಸಾಮಾಜಿಕ ನ್ಯಾಯ ಒದಗಿಸಿದವರು ನಾರಾಯಣ ಗುರುವಾಗಿದ್ದಾರೆ. ಎಸ್.ಬಂಗಾರಪ್ಪ ಅವರಿಗೆ ಎಲ್ಲಾ ಜಾತಿ ಸಮುದಾಯದವರು ಶಕ್ತಿ ನೀಡಿದ್ದರು. ಅವರು ಕೂಡ ನಾಡಿಗೆ ಮಹತ್ವದ ಯೋಜನೆಗಳ ಮೂಲಕ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಎಲ್ಲರನ್ನೂ ಒಳಗೊಂಡು ಮುನ್ನಡೆಯಬೇಕು

ಶಾಸಕ ಕುಮಾರ್ ಬಂಗಾರಪ್ಪ ಉದ್ಘಾಟಿಸಿ, ನಾರಾಯಣಗುರುಗಳು ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಶೋಷಿತರಿಗೆ ಧ್ವನಿಯಾಗಿದ್ದರು. ಹಿಂದಿನ ಕಾಲಕ್ಕೂ ಈಗಲೂ ಪರಿಸ್ಥಿತಿ ಬದಲಾಗಿದೆ. ಅಂದು ನಾವು ಅನುಭವಿಸಿದ ಗಾಯಗಳು ಈಗ ಸಾಧಿಸಲು ಪ್ರೇರಣೆ ನೀಡಬೇಕು. ಯಾವುದೇ ಒಂದು ಜಾತಿಯಿಂದ ಸಮಾಜ ಕಟ್ಟಲಾಗದು. ಇಂದು ಒಂದು ಬಲಾಡ್ಯ ಸಮುದಾಯ ಎಲ್ಲರನ್ನೂ ಒಳಗೊಂಡು ಮುನ್ನಡೆಯಬೇಕು. ಸೊರಬದಲ್ಲಿ ಇಂದಿಗೂ ಈಡಿಗ ಸಮುದಾಯ ಕಷ್ಟದಲ್ಲಿದೆ. ಸಂಘಟನೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ತಾಲೂಕಿನಲ್ಲಿ ಯೂನಿವರ್ಸಿಟಿ, ಮೆಡಿಕಲ್ ಕಾಲೇಜು ಆರಂಭಿಸುವ ಉದ್ದೇಶವಿದೆ ಎಂದು ಹೇಳಿದರು

ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ಬ್ರಹ್ಮಶ್ರೀ ನಾರಾಯಣಗುರು ಸೇವಾ ಪ್ರತಿಷ್ಠಾನ ಅಧ್ಯಕ್ಷ ಜಗದೀಶ್ ಕುಳವಳ್ಳಿ, ಎಸ್‌ಎನ್‌ಜಿವಿ ಅಧ್ಯಕ್ಷ ಶಿವಕುಮಾರ್, ಬಿಎಸ್‌ಎನ್‌ಡಿಪಿ ಅಧ್ಯಕ್ಷ ನಾಗೇಶ್, ತಾಲೂಕು ಆರ್ಯ ಈಡಿಗರ(ದೀವರ) ಸಂಘದ ಮಾಜಿ ಅಧ್ಯಕ್ಷ, ನಿರ್ದೇಶಕ ಹನುಮಂತಪ್ಪ ಯಲಸಿ, ಉಪಾಧ್ಯಕ್ಷ ಕೆ.ಮಂಜುನಾಥ್, ಖಜಾಂಚಿ ಮಹಾದೇವಪ್ಪ, ನಿರ್ದೇಶಕರಾದ ಜೆ.ಶಿವಾನಂದಪ್ಪ, ಎಚ್.ಗಣಪತಿ, ಗುರುಮೂರ್ತಿ ಓಟೂರು, ಪರಶುರಾಮ್ ಹಿರೇಶಕುನ, ನಾಗರಾಜ್ ಚಿಕ್ಕಸವಿ, ಬಿ.ಲಿಂಗಪ್ಪ, ವೈ.ಜಿ.ಪುಟ್ಟಸ್ವಾಮಿ, ರಾಜು ಮಳಲಗದ್ದೆ, ಸಣ್ಣಬೈಲು ಪರಶುರಾಮಪ್ಪ, ಪಾಣಿ ಡಾಕಪ್ಪ, ಕೆ.ನಾಗರಾಜ್, ಭರತ್ ತಾಳಗುಪ್ಪ, ಎಂ.ಡಿ.ಉಮೇಶ್, ಬಿ.ನಿಂಗಪ್ಪ, ಜಗದೀಶ್, ಸಣ್ಣಬೈಲು ರಾಮಪ್ಪ, ಪುರಸಭೆ ಸದಸ್ಯರಾದ ಪ್ರೇಮಾ, ಆಫ್ರಿನ್, ಅನ್ಸರ್ ಅಹ್ಮದ್, ಪ್ರಭು ಸೇರಿದಂತೆ ಇತರರಿದ್ದರು.

ಕವನ ಪ್ರಾರ್ಥಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಶೇಖರ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಎನ್.ಎಚ್.ಲಿಂಗೇಶ್ ನಿರೂಪಿಸಿ, ಉಪಾಧ್ಯಕ್ಷ ಜಿ.ಡಿ.ನಾಯ್ಕ್ ವಂದಿಸಿದರು. ಪಟ್ಟಣದ ರಂಗನಾಥ ದೇವಸ್ಥಾನದಿಂದ ಜನಪದ ಕಲಾಮೇಳಗಳೊಂದಿಗೆ ನಾರಾಯಣಗುರು ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಧಾರ್ಮಿಕ ಶೋಷಣೆಯನ್ನು ಬಲವಾಗಿ ಖಂಡಿಸುವ ಜತೆಗೆ ನೂತ ಪರಿಕಲ್ಪನೆಯಲ್ಲಿ ಶಿವ ದೇವಸ್ಥಾನ ಕಟ್ಟಿ ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆಯುವ ಜತೆಗೆ ಅವರು ತೆರೆದ ೬೦ ದೇವಸ್ಥಾನಗಳಲ್ಲಿ ಎಲ್ಲಾ ಜಾತಿಯವರ ಪ್ರವೇಶಕ್ಕೆ ಅವಕಾಶ ನೀಡಿ ಧಾರ್ಮಿಕ ಸುಧಾರಣೆ ಮಾಡಿದ್ದರು

-ಡಾ.ಮೋಹನ್ ಚಂದ್ರಗುತ್ತಿ

Ad Widget

Related posts

ಬಿಜೆಪಿ ಗೆದ್ದಿದ್ದು ಎಷ್ಟು ಗೊತ್ತಾ ?

Malenadu Mirror Desk

ಜನಪರ ಕೆಲಸ, ಜೀವಪರ ವ್ಯಕ್ತಿತ್ವ ನನ್ನನ್ನು ಗೆಲ್ಲಿಸಲಿದೆ
ಬಲಾಢ್ಯರ ಹಣಕ್ಕೆ ನನ್ನ ಒಳ್ಳೆತನವೇ ಸವಾಲು : ಶಾರದಾಪೂರ್ಯನಾಯ್ಕ್

Malenadu Mirror Desk

ಮನೆಗೆ ಬರುವರೆಂದು ಕಾದ ಹೆತ್ತವರಿಗೆ ಬಂದದ್ದು ಮಕ್ಕಳ ಮರಣ ವಾರ್ತೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.