ತುಮರಿ,ಸೆ.೧೦: ಶಿಕ್ಷಣದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂಬುದು ನಾರಾಯಣ ಗುರುಗಳ ಚಿಂತನೆಯಾಗಿದೆ ಆದ್ದರಿಂದ ಅಜ್ಞಾನ ದೂರಗೊಳಿಸಿ ಸಾಮಾಜಿಕ ಅರಿವು ಮೂಡಿಸುವ ಅಗತ್ಯವಿದೆ. ಸಂಘಟನೆಯಿಂದ ಬಲಯುತರಾಗಿ ಎಂಬ ಆಶಯದಂತೆ ಗ್ರಾಮೀಣ ಜನರು ಸಂಘಟಿತರಾಗಬೇಕು ಎಂದು ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ ಎಸ್ ರಾಮಪ್ಪ ಅವರು ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳ ೧೬೮ ಜನ್ಮದಿನದ ಅಂಗವಾಗಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವತಿಯಿಂದ ಶನಿವಾರ ಬ್ಯಾಕೋಡಿನಲ್ಲಿ ಸರ್ಕಾರಿ ಶಾಲೆಗಳಿಗೆ ಸುಣ್ಣ ಬಣ್ಣ ಲೇಪನ ಕಾರ್ಯಕ್ರಮಕ್ಕೆ ಚಾಲನೆ ಚಾಲನೆ ನೀಡಿ ಅವರು ಮಾತನಾಡಿದರು.
ನಾರಾಯಣ ಗುರು ವಿಚಾರ ವೇದಿಕೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಬ್ಯಾಕೋಡಿನಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನದವರೆಗೆ ಶನಿವಾರ ಬೃಹತ್ ಬೈಕ್ ಜಾಥಾ ನಡೆಯಿತು. ಬೃಹತ್ ಬೈಕ್ ಜಾಥಾ ಬ್ಯಾಕೋಡಿನಿಂದ ಹೊರಟು ಹಾರಿಗೆ ವೃತ್ತದಲ್ಲಿ ವಿಶೇಷ ಅಲಂಕಾರದೊಂದಿಗೆ
ಮಾವಿನಕೈ, ಬೇರಾಳದಲ್ಲಿ ಗುರುಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ಮಹಿಳಾ ಸಂಘಟನೆಗಳ ಪ್ರಮುಖರು ತುಮರಿ ಸರ್ಕಾರಿ ಫ್ರೌಢ ಹಾಗೂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ತುಮರಿ ವೃತ್ತದಲ್ಲಿ ಹಳದಿ ಧ್ವಜ ಹಿಡಿದು ಸ್ವಾಗತಿಸಿದರು.
ಗ್ರಂಥಾಲಯಕ್ಕೆ ಪುಸ್ತಕ:
ತುಮರಿ ಗ್ರಂಥಾಲಯಕ್ಕೆ ಸ್ವರ್ಧಾತ್ಮಕ ಪುಸ್ತಕಗಳನ್ನು ಸಿಗಂದೂರು ಕಾರ್ಯದರ್ಶಿ ರವಿಕುಮಾರ್ ಹೆಚ್‌ಆರ್ ಅವರು ದೇವಸ್ಥಾನದವತಿಯಿಂದ ಹಸ್ತಾಂತರ ಮಾಡಿದರು. ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಮಹಾಕಾಳಿ ಮಹಾ ಸಂಸ್ಥಾನದ ಸದ್ದರ್ಮ ಅರುಣಾನಂದ ಶ್ರೀಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ನಾರಾಯಣ ಗುರು ವಿಚಾರ ವೇದಿಕೆ ಕರೂರು ಬಾರಂಗಿ ಘಟಕದ ವತಿಯಿಂದ ನಿವೃತ್ತ ಯೋಧ ರತ್ನಾಕರ್ ಹಾಗೂ ಎಂ ಬಿ ಚಂದ್ರಪ್ಪ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಚಂದ್ರಪ್ಪ ಅಳೂರು. ಮೂಕಪ್ಪ ಬ್ಯಾಕೋಡು ಅವರನ್ನು ಗೌರವಿಸಲಾಯಿತು.
ಗ್ರಾಮ ಪಂಚಾಯ್ತಿ ಸದಸ್ಯರು ಶಾಲಾಭಿವೃದ್ಧಿ ಸಮಿತಿ ಸದಸ್ಯರು. ವಿವಿಧ ಸಂಘಟನೆಗಳ ಮುಖಂಡರು. ಶಾಲಾ ವಿದ್ಯಾರ್ಥಿಗಳು ಕರೂರು ಬಾರಂಗಿ ಹೋಬಳಿ ನಾಗರೀಕರು ಹಾಗೂ ನಾರಾಯಣ ಗುರು ವಿಚಾರ ವೇದಿಕೆ ಪ್ರಮುಖರು ಇದ್ದರು. ಕುದರೂರು ಪಂಚಾಯಿತಿ ಅಧ್ಯಕ್ಷ ಬೊಬ್ಬಿಗೆ ನಾಗರಾಜ್, ಪ್ರಮುಖರಾದ ಜಿ.ಟಿ ಸತ್ಯನಾರಾಯಣ್, ಜಾಕಿ ಗಣೇಶ್ . ಸುಧಾಕರ್ ಸಸಿಗೊಳ್ಳಿ, ರವಿಅಳೂರು, ಓಂಕಾರ್ ಕಾನುಗೋಡು, ತಿಮ್ಮಪ್ಪ ಕಮಗಾರು, ರವಿಹುಉರಳಿ, , ಎಸ್‌ಎಸ್ ಬೋಗ್ ಪಂಚಾಯಿತಿ ಸದಸ್ಯ ವಿಜಯ ಆಡಗಳಲೆ, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ ಸಿಗಂದೂರು, ತುಮರಿ ಗ್ರಾಮಪಂಚಾಯಿತಿ ಸದಸ್ಯೆ ಶ್ರೀದೇವಿ ರಾಮಚಂದ್ರ ಮತ್ತಿತರರು ಹಾಜರಿದ್ದರು