ತುಮರಿ,ಸೆ.23: ಕರೂರು ಹೋಬಳಿಯ ಬ್ರಹ್ಮಶ್ರೀ ನಾರಾಯಣಗುರು ಈಡಿಗ ಮಹಿಳಾ ಸಂಘದ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಶುಕ್ರವಾರ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನವರಾತ್ರಿ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಉತ್ಸವ ನಡೆಯಲಿದ್ದು, ಈ ಸಂದರ್ಭ ಮಹಿಳಾ ಸಂಘದ ಸದಸ್ಯೆಯರು ಸ್ಥಳೀಯರೊಡಗೂಡಿ ದೇವಸ್ಥಾನದ ಆವರಣದ ಸುತ್ತಮುತ್ತ ಸ್ವಚ್ಛತಾ ಕಾರ್ಯ ನೆರವೇರಿಸಿದರು.
ಈ ಸಂದರ್ಭ ಭಕ್ತರು ಮತ್ತು ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಲಾಯಿತು,. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪಕ ಪ್ರಕಾಶ್ ಭಂಡಾರಿ, ವೀರೇಶ್ ಮೊದಲಾದ ಸಿಬ್ಬಂದಿಗಳು, ಮಹಿಳಾ ಸಂಘದ ಅಧ್ಯಕ್ಷೆ ಸಂಧ್ಯಾ ಸಿಗಂದೂರು, ಕಾರ್ಯದರ್ಶಿ ಪದ್ಮಾವತಿ, ಸದಸ್ಯರಾದ ಲಕ್ಷ್ಮಿದೇವರಾಜ್, ಸುಮಿತ್ರಾ, ನಾಗರತ್ನಮ್ಮ , ವಿಮಲಾ ,ಹಾಗು ನೇತ್ರಾವತಿ, ಸುಮಿತ್ರಾ, ಹಾಲಮ್ಮ ಮತ್ತಿತರರು ಹಾಜರಿದ್ದರು.