Malenadu Mitra
ರಾಜ್ಯ ಶಿವಮೊಗ್ಗ

ಸಿಗಂದೂರಲ್ಲಿ ನವರಾತ್ರಿ ಉತ್ಸವ ಆರಂಭ ಶಿವಗಿರಿಯ ಸತ್ಯಾನಂದ ತೀರ್ಥರಿಂದ ಉತ್ಸವಕ್ಕೆ ಚಾಲನೆ

ತುಮರಿ,ಸೆ.೨೬: ನಾಡಿನ ಪ್ರಖ್ಯಾತ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ  ಸಿಗಂದೂರಿನಲ್ಲಿ ನವರಾತ್ರಿ ಉತ್ಸವಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಕೇರಳದ ಶಿವಗಿರಿ ಮಠದ ಶ್ರೀಸತ್ಯಾನಂದತೀರ್ಥ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು, ನವರಾತ್ರಿ ಉತ್ಸವ ಯಶಸ್ವಿಯಾಗಿ ನಡೆಯಲಿ. ಶ್ರೀಕ್ಷೇತ್ರದ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾಕಾರ್ಯಗಳು ನಿರಂತರವಾಗಿರಲಿ. ತಾಯಿ ಚೌಡೇಶ್ವರಿ ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ ಎಂದು ಹಾರೈಸಿದರು.

ಸಮಾಜದ ಎಲ್ಲಾ ಅನಿಷ್ಠಗಳ ನಿವಾರಣೆಗೆ ನಾರಾಯಣ ಗುರುಗಳ ತತ್ವದಲ್ಲಿ ಉತ್ತರವಿದೆ. ಅವರ ತತ್ವಾದರ್ಶನಗಳನ್ನು ಪಾಲನೆ ಮಾಡಬೇಕು.ಸಿಗಂದೂರು ದೇವಾಲಯದಲ್ಲಿ ಗುರುಗಳ ಆರಾಧನೆ ಮತ್ತು ಚಿಂತನೆಗಳ ಕುರಿತ ಕಾರ್ಯಕ್ರಮಗಳು ಆಗುತ್ತಿರುವುದು ಸಂತೋಷದ ಸಂಗತಿ. ಗುರುಗಳ ತತ್ವಗಳು, ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಕೈಗಾರಿಕಾ ಕ್ರಾಂತಿಗಳ ಬಗ್ಗೆ ಅಧ್ಯಯನ ಮಾಡುವ ಅಗತ್ಯವಿದೆ. ಇಂದಿನ ಯುವ ಜನತೆಯಲ್ಲಿ ಅರಿವಿನ ಬೆಳಕು ಹೊತ್ತಿಸುವ ಕಾರ್ಯ ಆಗಬೇಕು. ಗುರುಗಳ ಬಗ್ಗೆ ಢಾಂಬಿಕವಾಗಿ ಆಚರಣೆ ಮತ್ತು ಭಾಷಣ ಮಾಡದೆ ಅಧ್ಯಯನ ಮಾಡಿ ಸತ್ಯದರ್ಶನ ಮಾಡಿಸಬೇಕು ಎಂದು ಸತ್ಯಾನಂದ ತೀರ್ಥರು ಹೇಳಿದರು.

ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು, ನವರಾತ್ರಿ ಉತ್ಸವ ನಾಡಿಗೆ ಒಳಿತು ಮಾಡಬೇಕು. ನಮ್ಮೊಳಗಿನ ಅಂಧಕಾರ ಕಳೆದು ಜ್ಞಾನದ ಬೆಳಕು ಮೂಡಬೇಕು. ಈ ಕಾರಣಕ್ಕಾಗಿ ನಾಡಿನ ಖ್ಯಾತ ಸ್ವಾಮೀಜಿಗಳು ಗುರುಗಳು ಮತ್ತು ದಾರ್ಶನಿಕರನ್ನು ಶ್ರೀಕ್ಷೇತ್ರಕ್ಕೆ ಆಹ್ವಾನಿಸಿ ಅವರಿಂದ ಆಶೀರ್ವಚನ ಕೊಡಿಸಲಾಗುತ್ತಿದೆ. ಸ್ಥಳೀಯ ಭಕ್ತರು ದೇವಾಲಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಭಾಗಿಯಾಗಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ದೇವಸ್ಥಾನದ ವ್ಯವಸ್ಥಾಪಕ ಪ್ರಕಾಶ್ ಭಂಡಾರಿ ಹಾಗೂ ಅರ್ಚಕ ವೃಂದ ಮಂಗಳ ವಾದ್ಯದೊಂದಿಗೆ ಧರ್ಮದರ್ಶಿಗಳ ಮನೆಗೆ ತೆರಳಿ ಸಂಪ್ರದಾಯದಂತೆ ಫಲತಾಂಬೂಲ ನೀಡಿ  ನವರಾತ್ರಿ ಉತ್ಸವಕ್ಕೆ ಅನುಮತಿ ಕೋರಿದರು ಮತ್ತು ತಾವುಗಳು  ನವರಾತ್ರಿಯ ಪುಣ್ಯ ಕಾಲದಲ್ಲಿ ಶ್ರೀಕ್ಷೇತ್ರದಲ್ಲಿ ನಡೆಯುವ ಎಲ್ಲಾ ರೀತಿಯ ಪೂಜೆ , ಹೋಮ – ಹವನ ಇತರೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಪ್ರದಾಯದಂತೆ ತಾವುಗಳು ಮುಂದೆ ನಿಂತು ನಡೆಸಿ ಕೊಡಬೇಕೆಂದು ವಿನಂತಿಸಿದರು.

ಬಳಿಕ ಆನುವಂಶಿಕ  ಧರ್ಮದರ್ಶಿಗಳಾದ ಡಾ.ಎಸ್.ರಾಮಪ್ಪನವರು ಸಕುಟುಂಬ ಸಮೇತರಾಗಿ ಮಂಗಳ ವಾಧ್ಯಗಳ ಘೋಷಗಳೊಂದಿಗೆ ದೇವಾಲಕ್ಕೆ ತೆರಳಿ ನಿರ್ವಿಘ್ನವಾಗಿ ನವರಾತ್ರಿ ಉತ್ಸವ ನಡೆಯವಂತೆ ಅನುಗ್ರಹ ನೀಡಬೇಕೆಂದು ದೇವಿಯಲ್ಲಿ ಪ್ರಾರ್ಥಿಸಿದರು. ಸತ್ಯಾನಂದ ತೀರ್ಥರನ್ನು ಪೂರ್ಣ ಕುಂಭ ಕಳಶ, ಚಂಡೆ ಮಂಗಳ ವಾಧ್ಯದೊಂದಿಗೆ ಬರಮಾಡಿಕೊಳ್ಳಲಾಯಿತು. ದೇವಾಲಯ ಪುಷ್ಪಾಲಂಕಾರ ಮತ್ತು ವಿದ್ಯುದೀಪದ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಭಕ್ತ ಸಮೂಹ ದೇವಿಯ ಅಲಂಕಾರವನ್ನು ಕಣ್ತುಂಬಿಕೊಂಡರು. ನವರಾತ್ರಿಯಲ್ಲಿ ಪ್ರತಿದಿನವೂ ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Ad Widget

Related posts

ಸಾರ್ವಜನಿಕ ಸೇವೆಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ : ಎಡಿಜಿಪಿ , ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನಿರ್ಗಮನ ಪಥಸಂಚಲನ

Malenadu Mirror Desk

ಬಿಜೆಪಿ ಎಂದರೆ ಕ್ರಿಯಾಶೀಲತೆ ಎಂದ ಗೃಹ ಸಚಿವ ಆರಗಜ್ಞಾನೇಂದ್ರ

Malenadu Mirror Desk

ಶಿಕ್ಷಕರ ಸಾಹಿತ್ಯ ಪರಿಷತ್‌ನಿಂದ ಅರ್ಥಪೂರ್ಣ ಮಹಿಳಾದಿನಾಚರಣೆ, ಸಾಧಕಿಯರಿಗೆ ಗೌರವ ಸಮರ್ಪಣೆ

Malenadu Mirror Desk

1 comment

ಶಿ.ಮ.ಹರೀಶ್ , ಶಿವಮೊಗ್ಗ. September 26, 2022 at 2:55 pm

ನಾಡು ಕಂಡ ಅತ್ಯಂತ ಧೈರ್ಯಶಾಲಿ ನಾಯಕ. ಸಮಾಜದ ಹಿತಕ್ಕಾಗಿ ಎಂತಹ ಸವಾಲುಗಳನ್ನು ಎದುರಿಸಬಲ್ಲಂತಹ ವ್ಯಕ್ತಿತ್ವ. ಶ್ರೀರಾಮ ಕ್ಷೇತ್ರ ದೇವರಗುಡ್ಡ ಮಠದ ಟ್ರಸ್ಟಿಗಳಾಗಿದ್ದಂತವರು. ಸನ್ಮಾನ್ಯರ ಜನಸೇವೆ ತಿರಸ್ಮರಣೀಯ. ಈ ಪವಿತ್ರ ಆತ್ಮಕ್ಕೆ ನಮ್ಮ ಅಭಿವಂದನೆಗಳು.

Reply

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.