ಸಿಗಂದೂರು: ಸೆ.೨೮: ನವರಾತ್ರಿಯು ಮಾನವನಲ್ಲಿ ಹೊಸತನವನ್ನು ತಂದು ಮತ್ಸರವನ್ನು ಅಳಿಸುತ್ತದೆ. ನವರಾತ್ರಿಯ ಮೂರು ದಿನಗಳು ತುಂಬಾ ಮುಖ್ಯವಾಗಿದ್ದು. ಕೊನೆಯ ಮೂರು ದಿನಗಳಲ್ಲಿ ದೇವಿಯನ್ನು ಪೂಜಿಸಿದರೂ ಶ್ರೀ ದೇವಿಯು ಸಂತುಷ್ಟಳಾಗುತ್ತಾಳೆ. ಅಷ್ಟಮಿಯ ದಿನ ಪೂಜೆ ಮಾಡಿದರೂ ಸಾಕು ಎಂದು ಶಾಸ್ತ್ರದಲ್ಲಿದೆ. ಈ ದಿನಗಳಲ್ಲಿ ಪುಸ್ತಕವನ್ನು ಜೋಡಿಸಿಟ್ಟು ಪೂಜೆ ಮಾಡಿ, ಪ್ರಸಾದವನ್ನು ಪಡೆದು, ಪುಸ್ತಕ ಪಠಣ ಮಾಡಿದರೆ ಶಾರದೆಯ ಅನುಗ್ರಹವುಂಟಾಗುತ್ತದೆ ಎಂಬುದು ನಮ್ಮ ನಂಬಿಕೆ ಎಂದು ಸಾಗರ ತಾಲೂಕು ತಾಳಗುಪ್ಪದ ಪ್ರಣವ ಪೀಠದ ವಿದ್ವಾನ್ ಶ್ರೀ ಸಿದ್ದವೀರ ಮಹಾಸ್ವಾಮಿಗಳು ಹೇಳಿದರು
ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ತೃತೀಯ ದಿನದ ಶರವನ್ನವರಾತ್ರಿ ಉತ್ಸವದಲ್ಲಿ ವಿಶೇಷ ಆಶೀರ್ವಚನ ನೀಡಿದರು.
ಧರ್ಮದರ್ಶಿ ಡಾ ಎಸ್ ರಾಮಪ್ಪ ಅವರು ಮಾತನಾಡಿ ನವರಾತ್ರಿಯಲ್ಲಿ ಇವತ್ತಿಗೆ ಮೂರನೇ ದಿನದ ಸೇವೆ ಸಲ್ಲಿಸುತ್ತಿರುವ ಭಕ್ತರಿಗೆ ಹಾಗೂ ಸಮಸ್ತ ನಾಡಿಗೆ ಜನರಿಗೆ ದೇವಿ ಉತ್ತಮ ಆರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸಿ ಆಶಯ ನುಡಿ ಹೇಳಿದರು.
ಧರ್ಮಾಧಿಕಾರಿಗಳ ಸೇವೆಗೆ ಪ್ರಶಂಸೆ:
ಕಳೆದ ಹಲವು ದಶಕಗಳಿಂದ ನಿರಂತರವಾಗಿ ಚೌಡೇಶ್ವರಿ ಸೇವೆಗೆಯ ಜೊತೆಯಲ್ಲಿ ಹಲವಾರು ಸಾಮಾಜಿಕ ಕಾರ್ಯದಲ್ಲಿ ಛಾಪು ಮೂಡಿಸಿದ ಧರ್ಮಾಧಿಕಾರಿಗಳ ಕಾರ್ಯಕ್ಕೆ ಶಾಘ್ಲನೆ ವ್ಯಕ್ತಪಡಿಸಿದರು.
ರಾತ್ರಿ ಶನೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನೆಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್, ವ್ಯವಸ್ಥಾಪಕ ಪ್ರಕಾಶ, ದೇವಸ್ಥಾನದ ಸಿಬ್ಬಂದಿಗಳು ಇದ್ದರು.