Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಹಿಂದೂ ಧರ್ಮದಲ್ಲಿ ಸಾಮಾಜಿಕ ಪರಿವರ್ತನೆ ಆಗತ್ಯ: ಜಡೆ ಮಹಾಂತ ಸ್ವಾಮೀಜಿ

ಹಿಂದೂ ಧರ್ಮವು ಜಡತ್ವ ಗುಣ ಹೊಂದಿದ್ದು. ಹಿಂದೂ ಧರ್ಮವು ಉಳಿಯ ಬೇಕಾದರೆ ಕಾಲಕಾಲಕ್ಕೆ ಬದಲಾಗುವ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡುವ ಅಗತ್ಯವಿದ್ದು ಇದನ್ನು ಸಮಾಜದ ದಾರ್ಶನಿಕರು ಆದ್ಯತೆಯಾಗಿ ಗಮನಿಸಬೇಕು ಎಂದು ಸೊರಬ ಮುರುಘಾ ಮಠದ ಜಡೆ ಸಂಸ್ಥಾನದ ಮಹಾಂತ ಶ್ರೀಗಳು ಹೇಳಿದರು.

ಸಾಗರ ತಾಲೂಕಿನ ಶರಾವತಿ ಕಣಿವೆಯ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ೫ನೇ ದಿನದ ನವರಾತ್ರಿ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಅವರು ಅಶೀರ್ವಚನ ನೀಡಿದರು.

ಇಚ್ಛಾಶಕ್ತಿ, ಶಿವ ಶಕ್ತಿ ಹಾಗೂ ದೇವಿ ಶಕ್ತಿ ಒಂದಾದರೇ ಮಾತ್ರ ನವರಾತ್ರಿಯ ಸಂಪೂರ್ಣ ಪರಿಪೂರ್ಣತೆ ಸಾಧಿಸಲು ಸಾಧ್ಯವಿದ್ದು ಧಾರ್ಮಿಕ ಸಾಧನೆಗೆ ಇಂತಹ ದೈವ ಶಕ್ತಿಗಳ ದರ್ಶನ ಅವಶ್ಯವಿದೆ ಎಂದು ಅವರು ತಿಳಿಸಿದರು.

ಸಿಗಂದೂರು ಧರ್ಮದರ್ಶಿ ಡಾ.ಎಸ್. ರಾಮಪ್ಪ ಅವರು ಮಾತನಾಡಿ ಶಿಸ್ತು ಬದ್ಧ ಜೀವನದಿಂದ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ಲಭಿಸುತ್ತದೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶೇಷ ಪೂಜಾ ಕೈಂಕರ್ಯಗಳು ಹೋಮ ಹವನಗಳಲ್ಲಿ ಭಾಗವಹಿಸಿದ ಧರ್ಮಾಧಿಕಾರಿಗಳು ಹಾಗೂ ಕುಟುಂಬದ ಸದಸ್ಯರು ಶ್ರೀಗಳಿಗೆ ಅದ್ದೂರಿ ಸ್ವಾಗತದ ಮೂಲಕ ಬರಮಾಡಿಕೊಂಡರು. ರಾತ್ರಿ ಸಿಗಂದೂರು ಚೌಡೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ “ಮಾಯಾಪುರಿ ಮಹಾತ್ಮೆ” ಯಕ್ಷಗಾನ ಪ್ರದರ್ಶನವನ್ನು ಭಕ್ತರು ಕಣ್ತುಂಬಿಕೊಂಡರು. ಕರೂರು ಹೋಬಳಿಯ ವಿವಿಧ ಭಾಗಗಳಿಂದ ಹಲವು ಭಕ್ತರು ದೇವಿಯ ದರ್ಶನ ಪಡೆದರು.

Ad Widget

Related posts

“ಹಸೆ ಚಿತ್ತಾರ”ಕ್ಕೆ ರಾಜ್ಯೋತ್ಸವದ ಗೌರವ : ಕಲಾವಿದ ಸಿರಿವಂತೆ ಚಂದ್ರಶೇಖರ್ ಗೆ ಪ್ರಶಸ್ತಿ ಘೋಷಣೆ.

Malenadu Mirror Desk

ಮಾನವನಾಗುವುದು ಎಂದರೆ…

Malenadu Mirror Desk

ರಾಷ್ಟ್ರಭಕ್ತರ ಬಳಗದ ಈಶ್ವರಪ್ಪ ಬಂಧನಕ್ಕೆ ಎಸ್ ಡಿಪಿಐ ಆಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.