ಸಿಗಂದೂರು,ಅ.೫: ಯುವಜನರು ಧರ್ಮ ಮಾರ್ಗದಲ್ಲಿ ನಡೆದರೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಅವರಿಗೆ ಸರಿಯಾದ ಸಂಸ್ಕಾರ ಧಾರ್ಮಿಕ ಕ್ಷೇತ್ರ ಮತ್ತು ಪರಿಸರದಿಂದ ಸಿಗಬೇಕು. ಉತ್ತಮ ಶಿಕ್ಷಣ ಮತ್ತು ನೈತಿಕ ಮಾರ್ಗದ ಶಿಕ್ಷಣದತ್ತ ಯುವ ಜನತೆ ಒಲವು ಹೊಂದಿರಬೇಕು. ಈ ದಿಸೆಯಲ್ಲಿ ಹಿರಿಯರು ಚಿಂತನೆ ಮಾಡಬೇಕೆಂದು ನಾಗಾಲ್ಯಾಂಡ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿರುವ ಎನ್.ಚಂದ್ರಶೇಖರ್ ಹೇಳಿದರು.
ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ವಿಜಯದಶಮಿಯಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಅವರು ಮಾತನಾಡಿದರು.
ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಪೀಠಾಧಿಪತಿ ಶ್ರೀ ಯೋಗೇಂದ್ರಗುರುಗಳು ಮಾತನಾಡಿ, ಸಿಗಂದೂರು ಕ್ಷೇತ್ರದ ಧರ್ಮದರ್ಶಿಗಳಾದ ರಾಮಪ್ಪನವರು ರಾಜಕೀಯ ಕ್ಷೇತ್ರ ತೊರೆದು ಸಿಗಂದೂರಿಗೆ ಬಂದು ಧಾರ್ಮಿಕ ಕ್ಷೇತ್ರದ ನಿರ್ಮಾಣ ಮಾಡಿ ಬೆಳೆಸಿ ಅಗಾಧ ಭಕ್ತವೃಂದ ಶ್ರೀ ಕ್ಷೇತ್ರಕ್ಕೆ ಬರುವಂತೆ ಮಾಡಿದ್ದಾರೆ. ಈ ಹಾದಿಯಲ್ಲಿ ಅವರು ಪಟ್ಟ ಶ್ರಮ ಅಪಾರವಾದದ್ದು. ರಾಮಪ್ಪನವರು ನಮ್ಮೆಲ್ಲರ ಆಸ್ತಿ ಅವರಿಗೆ ಸಂಕಷ್ಟ ಬಂದಾಗ ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಸ್ಥಳೀಯ ಹಾಗೂ ಸಾಮಾನ್ಯ ಜನರಿಗೆ ತಲುಪಬೇಕಿರುವ ಉತ್ತಮ ಕೆಲಸಗಳು ಮತ್ತಷ್ಟು ಆಗಬೇಕಿದೆ ಎಂದು ಹೇಳಿದರು.
ಸಿದ್ದಾಪುರ ತಾಲೂಕು ತರಳಿ ಮಠದ ಧರ್ಮದರ್ಶಿ ಎನ್.ಡಿ.ನಾಯ್ಕ್ ಮಾತನಾಡಿ, ನಾವು ಹಿಂದುಳಿದ ವರ್ಗದವರು ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದಿದ್ದು ಈಗ ಧಾರ್ಮಿಕ ಕ್ಷೇತ್ರದಲ್ಲಿ ಮುಂದುವರಿಯುಬೇಕಾಗಿದೆ ಹಾಗೂ ಸಿಗಂದೂರಿನ ಕ್ಷೇತ್ರದ ಜೊತೆ ಸದಾ ಇರುವುದಾಗಿ ಹೇಳಿದರು.
ಶ್ರೀಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರು ಮಾತನಾಡಿ, ನವರಾತ್ರಿ ಉತ್ಸವ ವಿಜಯದಶಮಿಯಂದು ಸಮಾಪನಗೊಂಡಿದ್ದು, ಹತ್ತು ದಿನಗಳ ಕಾಲ ಕ್ಷೇತ್ರದಲ್ಲಿ ನಡೆದ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗುರುಗಳ ಆಶೀರ್ವಚನಗಳಿಂದಾಗಿ ಭಕ್ತವೃಂದಕ್ಕೆ ಸಂತೋಷವಾಗಿದೆ ಎಂದು ಹೇಳಿದರು. ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್, ಸ್ಥಳೀಯ ಮುಖಂಡರಾದ ಹುರುಳಿ ಹೂವಣ್ಣ, ಕೆ.ಜಿ.ಪ್ರಶಾಂತ್,
ಸಂಶೋಧಕ ಮಧುಗಣಪತಿರಾವ್ ಮಡೆನೂರು , ವಕೀಲರಾದ ದಿವಾಕರ್, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.
ಸಿಗಂದೂರು ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಸ್ಥಳೀಯ ಹಾಗೂ ಸಾಮಾನ್ಯ ಜನರಿಗೆ ತಲುಪಬೇಕಿರುವ ಉತ್ತಮ ಕೆಲಸಗಳು ಮತ್ತಷ್ಟು ಆಗಬೇಕಿದೆ ಎಂದು ಹೇಳಿದರು.
ಸಿದ್ದಾಪುರ ತಾಲೂಕು ತರಳಿ ಮಠದ ಧರ್ಮದರ್ಶಿ ಎನ್.ಡಿ.ನಾಯ್ಕ್ ಮಾತನಾಡಿ, ನಾವು ಹಿಂದುಳಿದ ವರ್ಗದವರು ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದಿದ್ದು ಈಗ ಧಾರ್ಮಿಕ ಕ್ಷೇತ್ರದಲ್ಲಿ ಮುಂದುವರಿಯುಬೇಕಾಗಿದೆ
–ಶ್ರೀ ಯೋಗೇಂದ್ರ ಗುರೂಜಿ, ಕಾರ್ತಿಕೇಯ ಕ್ಷೇತ್ರ, ಸಾರಗನಜಡ್ಡು