Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಮಲೆನಾಡಿನ ಅಡಕೆ ಮತ್ತು ಭೂಮಿ ಸಮಸ್ಯೆ ಕುರಿತು ಕೇಂದ್ರ ಸಚಿವರಿಗೆ ಮನವಿ, ಜಿಲ್ಲೆಯ ರೈತರ ಆತಂಕ ದೂರ ಮಾಡುವ ಭರವಸೆ

ಚುನಾವಣೆ ವರ್ಷದಲ್ಲಿಯೇ ಮಲೆನಾಡಿನಲ್ಲಿ ಅಡಕೆ ಬೆಳೆಗೆ ಎಲೆಚುಕ್ಕಿ ರೋಗ ಹಾಗೂ ಶರಾವತಿ ಸಂತ್ರಸ್ತರ ಭೂಮಿ ಡಿನೋಟಿಫಿಕೇಷನ್ ಪ್ರಕರಣಗಳು ಸಂಚಲನ ಮೂಡಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬುಧವಾರ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ
ಮಂಗಳವಾರ ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದ ಸಂಸದರು ಮತ್ತು ಸಚಿವರು, ಬುಧವಾರ ದಿಲ್ಲಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮತ್ತು ಅರಣ್ಯ ಮತ್ತು ಪರಿಸರ ಮಂತ್ರಾಲಯದ ಸಚಿವ ಭೂಪೇಂದ್ರಯಾದವ್ ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಅಡಿಕೆ ಬೆಳೆಯುವ ರಾಜ್ಯವಾಗಿದ್ದು, ಒಟ್ಟು ಪ್ರದೇಶದ ೬೮% ಮತ್ತು ದೇಶದ ಒಟ್ಟು ಅಡಿಕೆ ಉತ್ಪಾದನೆಯ ೮೦% ಕೊಡುಗೆ ನೀಡುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಅಡಿಕೆಯನ್ನು ೫.೦೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ೦೫ ದಶಲಕ್ಷಕ್ಕೂ ಹೆಚ್ಚು ಜನರು ಅಡಿಕೆ ಕೃಷಿಯ ಮೇಲೆ ಅವಲಂಬಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ೧.೦೨ ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಡಿಕೆ ಬೆಳೆಯಲು ಬಳಸಲಾಗುತ್ತಿದ್ದು, ಜಿಲ್ಲೆಯ ಆರ್ಥಿಕತೆಯ ೬೦% ಅಡಿಕೆ ಉತ್ಪಾದನೆ ಇದ್ದು, ದೊಡ್ಡ ಪ್ರಮಾಣದ ತೆರಿಗೆ ಮತ್ತು ಸೆಸ್ ನೀಡುತ್ತಿದ್ದಾರೆ ಎಂಬ ಅಂಶವನ್ನು ಕೃಷಿ ಸಚಿವರ ಗಮನಕ್ಕೆ ತರಲಾಯಿತು.
ಮನವಿ ಪಡೆದ ಸಚಿವರು, ಅಡಕೆ ರೋಗಕ್ಕೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ತಜ್ಞರ ಸಮಿತಿಯನ್ನುರಚನೆ ಮಾಡಿ ಆದೇಶ ಹೊರಡಿಸಿದ್ದಾರೆ.
ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಆರಗ ಜ್ಞಾನೇಂದ್ರ, ಶಾಸಕ ಹರತಾಳು ಹಾಲಪ್ಪ ಮೊದಲಾದವರಿದ್ದರು.
ಅರಣ್ಯ ಸಚಿವರು ಭೇಟಿ:
ಇದೇ ನಿಯೋಗ ಮಲೆನಾಡಿನ ಮತ್ತೊಂದು ಸಮಸ್ಯೆಯಾದ ಶರಾವತಿ ಸಂತ್ರಸ್ತರ ಭೂಮಿಯ ಡಿನೋಟಿಫೀಕೇಷನ್ ಪ್ರಕರಣ ರದ್ದಾಗಿರುವುದು. ಇದಕ್ಕಿರುವ ಕಾನೂನು ತೊಡಕುಗಳ ಬಗ್ಗೆ ಸಚಿವ ಭೂಪೇಂದ್ರ ಯಾದವ್ ಬಳಿ ಚರ್ಚೆ ನಡೆಸಿದೆ. ಸಚಿವರು ಈ ಬಗ್ಗೆ ಸೂಕ್ತ ಗಮನ ಹರಿಸುವ ಭರವಸೆ ನೀಡಿದರೆಂದು ಹೇಳಲಾಗಿದೆ.

Ad Widget

Related posts

ಶಿವಯೋಗಮಂದಿರದ ರೇವಣಸಿದ್ದ ಸ್ವಾಮೀಜಿ ಲಿಂಗೈಕ್ಯ

Malenadu Mirror Desk

ಹಕ್ಕುಪತ್ರಕ್ಕಾಗಿ ಅರಣ್ಯವಾಸಿಗಳ ಅರಣ್ಯರೋದನ

Malenadu Mirror Desk

ಅಡಕೆ ನುಂಗಿ ಮಗು ಸಾವು: ಹೆತ್ತವರ ಆಕ್ರಂದನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.