ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಹೊಸಬಾಳೆಯವರಾದ ಡಾ.ಹೆಚ್.ಎಸ್.ಮೋಹನ್ ಅವರು ಈ ಬಾರಿಯ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ವಿಜ್ಞಾನ ಬರಗಾರರು ಹಾಗೂ ಖ್ಯಾತ ನೇತ್ರ ತಜ್ಞರಾದ ಮೋಹನ್ ಅವರು ಪ್ರಸ್ತುತ ಸಾಗರದಲ್ಲಿ ನೆಲೆಸಿದ್ದು,ವೈದ್ಯಕೀಯ ಕ್ಷೇತ್ರದಲ್ಲಿಅವರು ಮಾಡಿರುವ ಸಾಧನೆಗೆ ಮನ್ನಣೆ ನೀಡಿರುವ ರಾಜ್ಯ ಸರಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ಈ ಬಾರಿ ೬೭ ಮಂದಿ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಡಾ. ಮಂಜುನಾಥ್ ಅವರಿಗೂ ಈ ಪ್ರಶಸ್ತಿ ಘೋಷಿಸಲಾಗಿದೆ.
ಡಾ.ಮೋಹನ್ ಅವರು ಕನ್ನಡದಲ್ಲಿ ೧೭ ಮತ್ತು ಇಂಗ್ಲೀಷಿನಲ್ಲಿ ಒಂದು ಕೃತಿ ರಚಿಸಿದ್ದಾರೆ. ರಾಜ್ಯ ಹಾಗೂ ದೇಶದ ವಿವಿಧ ಪತ್ರಿಕೆಗಳಲ್ಲಿ ಅವರ ವಿಜ್ಞಾನ ಬರಹಗಳು ಪ್ರಕಟವಾಗಿವೆ. ಮಣಿಪಾಲ್ ಮತ್ತು ಮೈಸೂರಿನಲ್ಲಿ ವೈದ್ಯಕೀ ಶಿಕ್ಷಣ ಪಡೆದಿರುವ ಮೋಹನ್ ಅವರು, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.