Malenadu Mitra
ರಾಜ್ಯ ಶಿವಮೊಗ್ಗ

ನಗರದಲ್ಲಿ ಮಾಜಿ ಶಾಸಕ ಕೆಬಿಪಿ ಜನ್ಮದಿನ ಆಚರಣೆ

ಶಿವಮೊಗ್ಗ ನಗರದ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿ ಅದ್ಧೂರಿಯಾಗಿ ಆಚರಿಸಿದರು.
ಗುರುವಾರ ಬೆಳಿಗ್ಗೆಯಿಂದಲೆ ಅವರ ನೂರಾರು ಅಭಿಮಾನಿಗಳು ಒಟ್ಟಾಗಿ ಬೆಳಿಗ್ಗೆ ಗೋಪಾಳದ ರಾಯರ ಮಠ ಮತ್ತು ಕೃಷ್ಣ ಮಠದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದರು.
ಅವರ ಮನೆಯಲ್ಲಿ ದಕ್ಷಿಣ ಮತ್ತು ಉತ್ತರ ಬ್ಲಾಕ್ ಕಾಂಗ್ರೆಸ್‌ನ ಕಾರ್ಯಕರ್ತರು ಕೇಕ್ ಕಟ್ ಮಾಡುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಟೈಲರ್‍ಸ್ ಅಸೋಸಿಯೇಷನ್‌ನಿಂದ ಅಭಿನಂದನಾ ಕಾರ್ಯಕ್ರಮ, ಸಂತ ಥಾಮಸ್ ಕ್ರೀಡಾಂಗಣದಲ್ಲಿ ರಕ್ತದಾನ ಶಿಬಿರ ಮತ್ತು ಕೆಬಿಪಿ ಕಪ್ ಟೂರ್ನಮೆಂಟ್‌ನ್ನು ವಿನೋಬನಗರ ಕೆಬಿಪಿ ಯುವಕರ ಬಳಗ ಆಯೋಜಿಸಿತ್ತು. ವಿಪ್ರ ಸಮಾಜದ ವತಿಯಿಂದ ಕೆಬಿಪಿ ಹುಟ್ಟು ಹಬ್ಬದ ಅಂಗವಾಗಿ ಮಹಾವೀರ ಗೋ ಶಾಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಆಟೋ ಕಾಂಪ್ಲೆಕ್ಸ್ ವರ್ಕರ್‍ಸ್ ವತಿಯಿಂದ ಹಾಗೂ ಕೋಟೆ ಮಾರಿಕಾಂಬ ದೇವಾಲಯ ಸಮಿತಿಯಿಂದ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಮಾಜಿ ಶಾಸಕರಿಗೆ ಅಭಿನಂದಿಸಲಾಯಿತು. ಶಾರದಾ ದೇವಿ ಅಂಧರ ವಿಕಾಸ ಶಾಲೆಯಲ್ಲಿ ನೇತ್ರದಾನ ಶಿಬಿರ ಹಾಗೂ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲಾಯಿತು.

Ad Widget

Related posts

ಮೀಸಲು ಹೆಚ್ಚಳಕ್ಕೆ ರೇಣುಕಾನಂದ ಸ್ವಾಮೀಜಿ ಮನವಿ

Malenadu Mirror Desk

ಕಲೆಯ ಮೂಲಕ ಮಕ್ಕಳಲ್ಲಿ ಉತ್ತಮ ಪ್ರವೃತ್ತಿ: ಎಂ.ಎಲ್.ವೈಶಾಲಿ

Malenadu Mirror Desk

ಸಾಗರ ಕ್ಷೇತ್ರದಲ್ಲಿ ಹಾಲಪ್ಪರ ಭರದ ಪ್ರಚಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.