ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೋಳೆಬಾಗಿಲು ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಿನ್ನೀರಿಗೆ ಜಾರಿದ ಗಜಾನನ ಬಸ್ಸು, ತಪ್ಪಿದ ಬಾರಿ ಅನಾಹುತ.
ಸಾಗರದಿಂದ ಸಿಗಂದೂರು ಮಾರ್ಗವಾಗಿ ಕಟ್ಟಿನಕಾರಿಗೆ ಸಂಚರಿಸುವ ಗಜಾನನ ಬಸ್ಸು ಲಾಂಚ್ ಪ್ಲಾಟ್‌ಪಾರಂ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಹಿನ್ನೀರಿಗೆ ಇಳಿದಿದ್ದು, ದೈವವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಲಾಂಚ್ ದಡಕ್ಕೆ ಬರುವ ಮುಂಚಿತವಾಗಿ ಬಸ್ಸನ್ನು, ಪ್ಲಾಟ್ ಪಾರಂ ನಲ್ಲಿ ತಿರುಗಿಸಿ ನಿಲ್ಲಿಸುವ ಸಂದರ್ಭದಲ್ಲಿ ಇಕ್ಕಟ್ಟು ಮತ್ತು ಇಳಿಜಾರಿನ ಕಾರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ನದಿಗೆ ಇಳಿಯಿತು.
ಸಾಗರದಿಂದ ಸಿಗಂದೂರು ದೇವಾಲಯ ಮತ್ತು ಸ್ಥಳೀಯ ಸುಮಾರು 60 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಅಲ್ಲೆ ಇದ್ದ ಸೇತುವೆ ಕಾಮಗಾರಿಯ ಇಟಾಚಿಯ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಲಾಗಿದೆ. ಈಗಾಗಲೆ ಪ್ಲಾಟ್ ಪಾರಂ ನ ಅವ್ಯವಸ್ಥೆಯ ಬಗ್ಗೆ ಸಂಬಂದಿಸಿದ ಗುತ್ತಿಗೆದಾರರಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲವೆಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.