Malenadu Mitra
ರಾಜ್ಯ ಶಿವಮೊಗ್ಗ

ಎನ್.ಡಿ.ಸುಂದರೇಶ್ ಆದರ್ಶಗಳು ರೈತ ಸಂಘಕ್ಕೆ ಜೀವಾಳವಾಗಬೇಕು: ಬಡಗಲಪುರ ನಾಗೇಂದ್ರ

ಶಿವಮೊಗ್ಗ, ಡಿ.21: ಚುನಾವಣೆಯಲಿ ಗೆದ್ದು, ನಮ್ಮನ್ನಾಳುವ ನಾಯಕರು ಯಾರು ರೈತರಲ್ಲ, ಅವರಿಗೆ ರೈತರ ಸಮಸ್ಸೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ  ಎಂದು  ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ರಾಜ್ಯ ಮಟ್ಟದ ಮಹಿಳಾ ಪ್ರತಿನಿಧಿಗಳ ಸಮಾವೇಶ ಹಾಗೂ ಎನ್.ಡಿ ಸುಂದರೇಶ್ ಅವರ ೩೦ ನೇ ವರ್ಷದ ನೆನಪಿನ ದಿನಾಚರಣೆ ಕಾರ್ಯಕ್ರಮ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಚುನಾವಣೆಯಲ್ಲಿ ಗೆದ್ದು, ನಮ್ಮನ್ನಾಳುವ ನಾಯಕರು ಯಾರು ರೈತರಲ್ಲ, ಅವರಿಗೆ ರೈತರ ಸಮಸ್ಸೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಆದ್ದರಿಂದ ರೈತರ ಅಳು ದನಿಯನ್ನು ಆಲಿಸಲು ರೈತರೇ ಸಮಾಜವನ್ನು ಆಳುವ ನಾಯಕರಾಗಬೇಕು, ಅದರಲ್ಲಿಯೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಶೋಷಣೆಯನ್ನು ತಪ್ಪಿಸಲು ಮಹಿಳೆಯರು ಮುಂದೆ ಬಂದು ರೈತ ಸಂಘಟನೆಯನ್ನು ಬಲ ಪಡಿಸಿದರೆ ಅವರಿಂದಲೇ ಈ ಸಮಾಜಕ್ಕೆ ಹಾಗೂ ರೈತರಿಗಿರುವ ತೊಡಕನ್ನು ನಿವಾರಿಸಬಹುದು ಎಂದರು.

ರೈತ ಶಾಲು ಧರಿಸಿಕೊಂಡು ನಮ್ಮ ನಡುವೆಯೇ ನಕಲಿ ರೈತ ನಾಯಕರು ಇದ್ದಾರೆ, ಅವರನ್ನು ಖಂಡಿತ ಹತ್ತಿರ ಸೇರಿಸಿಕೊಳ್ಳಬೇಡಿ, ಅವರು ತಮ್ಮ ಲಾಭಕ್ಕಾಗಿ ರಾಜಕೀಯ ವ್ಯಕ್ತಿಗಳ ಜೊತೆಗೆ ಸೇರಿಕೊಂಡು ನಮ್ಮ ಭೂಮಿಯನ್ನೇ ಕಸಿದು, ಅಲ್ಲಿಯೇ ಕಾರ್ಖಾನೆ ನಿರ್ಮಿಸಿ, ಅಲ್ಲಿಯೇ ನಮ್ಮ ಮಕ್ಕಳಿಗೆ ಕಸ ಗುಡಿಸುವ ಕೆಲಸ ಕೊಡಿಸುತ್ತಾರೆ ಎಂದು ತಿಳಿಸಿದರು.
ಹೃದಯದಿಂದ ರೈತ ಸಂಘಟನೆ ಕಟ್ಟಿ ಸಮಾಜದ ಎಲ್ಲಾ ವರ್ಗದವರನ್ನು ಒಗ್ಗೂಡಿಸಿ, ಜನಪರ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿತ್ವ, ತಾಯಿ ಮನಸ್ಸಿನ ನಾಯಕರಿದ್ದರೆ ಅವರೇ ಎಂದ ಅವರು, ಶಿವಮೊಗ್ಗ ಹೋರಾಟದ ನೆಲ. ಅಂತಹ ನೆಲದಿಂದ ಬಂದ ಧೀಮಂತ ನಾಯಕ ಎನ್.ಡಿ ಸುಂದರೇಶ್ ಅವರು ರಾಜ್ಯದ ಪ್ರತಿ ಮೂಲೆಯಲ್ಲಿಯೂ ರೈತ ಸಂಘಟನೆಯನ್ನು ವಿಸ್ತರಿಸಿ, ನಿಷ್ಟೆಯಿಂದ ಕೃಷಿ ಕಾಯಕದಲ್ಲಿ ತೊಡಗಿರುವರ ಪರ ಧನಿಯಾಗಿ ನಿಂತು, ರೈತರಿಗೆ ಎಲ್ಲಾ ರೀತಿಯಿಂದಲು ನ್ಯಾಯ ದೊರಕಿಸಿಕೊಡಲು ಶ್ರಮಿಸಿದವರು ಎಂದರು.

ಮಹಿಳೆಯರು ಗಂಡಸರಿಗಿಂದಲೂ ಶ್ರಮ ಜೀವಿಗಳು, ಮಹಿಳೆಯರು ಪ್ರತಿ ಹಳ್ಳಿ, ಪ್ರತಿ ಜಿಲ್ಲೆಗಳಿಂದ ಒಗ್ಗೂಡಿ ರೈತ ಸಂಘನೆಗಳಲ್ಲಿ ತೊಡಗಿಸಿ ಕೊಂಡರೆ, ಈಗಿರುವ ರೈತ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು ಎಂದರು.
ಮಹಿಳೆಯರು ಹಾಗೂ ಯುವಕರು ನಾಯಕ ಎನ್ ಡಿ. ಸುಂದರೇಶ್ ಅವರ ವ್ಯಕ್ತಿತ್ವ ಹಾಗೂ ಅವರ ಆದರ್ಶ, ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ರೈತ ಸಂಘಟನೆಯನ್ನು ಇನ್ನಷ್ಟು ಬಲ ಪಡಿಸಲು ಸಹಕರಿಸಬೇಕು ಎಂದು ತಿಳಿಸಿದರು.

ರಾಜ್ಯ ಮಹಿಳಾ ಕಾರ್ಯದರ್ಶಿ ಮಂಜುಳಾ ಎಸ್.ಅಕ್ಕಿ ಮಾತನಾಡಿ, ನಮ್ಮನ್ನಾಳುವ ಸರ್ಕಾರಗಳು ಮಹಿಳೆಯರಿಗೆ ಯಾವ ಸೌಲಭ್ಯ ಒದಗಿಸಿಕೊಟ್ಟಿವೆ. ನಾವು ಶಾಲೆಯನ್ನು ಕೊಡಿ ಎಂದು ಮನವಿ ಮಾಡಿದರೆ ಗಂಡಸರಿಗೆ ಕುಡಿಯಲು ಸಾರಾಯಿ ಅಂಗಡಿಗಳನ್ನು ಕೊಡುತ್ತಿವೆ. ಇದರಿಂದ ಚಿಕ್ಕ ಮಕ್ಕಳ ಮೇಲೂ ಅತ್ಯಾಚಾರ, ಅನಾಚಾರಗಳು ನಡೆಯುತ್ತಿವೆ ಎಂದು ದೂರಿದರು.

ಹಸಿರು ಶಾಲು ಕೇವಲ ಬಟ್ಟೆ ಅಲ್ಲ, ಅದಕ್ಕೆ ಅದರದ್ದೇ ಆದ ಗೌರವ, ಬೆಲೆ ಇದೆ. ಆದ್ದರಿಂದ ಮಹಿಳೆಯರು ಜಾಗೃತರಾಗಬೇಕು ಎಂದರೆ ರೈತ ಸಂಘಟನೆ ಮೂಲಕ ಹೋರಾಟಕ್ಕೆ ಇಳಿದು ಸರ್ಕಾರಿ ಕಚೇರಿಗಳ ಕದ ತಟ್ಟಿ, ನಮಗೆ ದೊರೆಯಬೇಕಾದ ನ್ಯಾಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಮಂಡ್ಯ, ಮೈಸೂರು, ದಾವಣಗೆರೆ, ಬೀದರ್, ಚಿಕ್ಕಬಳ್ಳಾಪುರ, ತುಮಕೂರು, ಹಾವೇರಿ, ಕೋಲಾರ, ರಾಮನಗರ ಸೇರಿದಂತೆ ಎಲ್ಲಾ ಜಿಲ್ಲೆಗಳಿಂದ ರೈತರು, ಹಾಗೂ ರೈತ ಮುಖಂಡರು ಆಗಮಿಸಿದ್ದರು.
ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ, ಮಹಿಳಾ ವಿಭಾಗ ರಾಜ್ಯಾಧ್ಯಕ್ಷೆ ನಾಗರತ್ನಮ್ಮ ವಿ.ಪಾಟೀಲ್, ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ರಾಜ್ಯ ಉಪಾಧ್ಯಕ್ಷ ಎನ್. ಶಿವಾನಂದ ಕುಗ್ವೆ, ಜಿಲ್ಲಾ ಸಂಯೋಜಕ ಎನ್. ಡಿ ವಸಂತ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪೂಚಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನೂಲೆನೂರು ಶಂಕ್ರಪ್ಪ ಮತ್ತಿತರರು ಹಾಜರಿದ್ದರು.

Ad Widget

Related posts

ಉತ್ತಮ ಕೆಲಸಕ್ಕೆ ಮಾಧ್ಯಮಗಳಿಂದ ಸಹಕಾರ: ಲಕ್ಷ್ಮೀಪ್ರಸಾದ್
ಪ್ರೆಸ್ ಟ್ರಸ್ಟ್,ಪತ್ರಕರ್ತರ ಸಂಘದ ಚಹಾಕೂಟದಲ್ಲಿ ನಿರ್ಗಮಿತ ಎಸ್ಪಿ ಅಭಿಮತ

Malenadu Mirror Desk

ರೈತರಿಗೆ ಒಂದಿಂಚು ಭೂಮಿ ನೀಡುವ ಕಾರ್‍ಯಕ್ರಮ ನೀಡದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು :ಕಾಗೋಡು ತಿಮ್ಮಪ್ಪ

Malenadu Mirror Desk

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸೀಟು ಹೆಚ್ಚಿಸಲು ಪ್ರಯತ್ನ: ಡಾ.ಸೆಲ್ವಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.