Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಈಡಿಗ ಅಭಿವೃದ್ಧಿ ನಿಗಮ ರಚನೆಗೆ ಸಿಎಂ ಒಪ್ಪಿಗೆ
ಬಜೆಟ್ ಅಧಿವೇಶನದಲ್ಲಿ ಅನುದಾನ ಮೀಸಲಿಡುವ ಭರವಸೆ

ಶಿವಮೊಗ್ಗ,ಜ.೫: ಬಹುದಿನಗಳ ಬೇಡಿಕೆಯಾಗಿರುವ ಈಡಿಗ ಅಭಿವೃದ್ಧಿ ಮಂಡಳಿ ರಚನೆಗೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದು,ಕೂಡಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಿ ಮುಂಬರುವ ಬಜೆಟ್ ಅಧಿವೇಶನದಲ್ಲಿ ಅನುದಾನವನ್ನೂ ಮೀಸಲಿಡಲಾಗುವುದು ಎಂದು ಘೋಷಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಗುರುವಾರ ಈಡಿಗರ ಸಮುದಾಯದ ನಿಯೋಗದೊಂದಿಗೆ ಮಾತುಕತೆ ನಡೆಸಿದ ಅವರು, ಈ ಭರವಸೆ ನೀಡಿದರು. ಸಮುದಾಯದ ಬೇಡಿಕೆಗೆ ಅನುಗುಣವಾಗಿ ನಾರಾಯಣಗುರು ಅಭಿವೃದ್ಧಿಕೋಶ ರಚಿಸಲಾಗಿತ್ತು. ಆದರೆ ಈಗ ದೊಡ್ಡ ಸಮುದಾಯವಾದ ಈಡಿಗರು ನಿಗಮಕ್ಕೆ ಮನವಿ ಮಾಡಿದ್ದಾರೆ. ಆದ್ದರಿಂದ ಈಡಿಗ ಅಭಿವೃದ್ಧಿ ನಿಗಮ ರಚನೆ ಮಾಡಿ ಸೂಕ್ತ ಅನುದಾನವನ್ನೂ ನೀಡಲಾಗುವುದು. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯ ಬಗ್ಗೆಯೂ ಸರಕಾರ ಗಂಭೀರವಾಗಿದ್ದು, ಕೇಂದ್ರ ಸರಕಾರದ ಮಟ್ಟದಲ್ಲಿ ವ್ಯವಹರಿಸುತ್ತೇವೆ. ಇದಕ್ಕಾಗಿ ಒಬ್ಬ ಐಎಎಸ್ ಅಧಿಕಾರಿ ನೇಮಕ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್‌ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್ ನಿಗಮ ಮಂಡಳಿ ಅಭಿವೃದ್ಧಿ ಅಗತ್ಯತೆಯ ಬಗ್ಗೆ ವಿವರನೀಡಿದರು. ಶಾಸಕ ಹರತಾಳು ಹಾಲಪ್ಪ ಅವರು ಸಮನ್ವಯತೆಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದ ನಿಯೋಗದಲ್ಲಿ ಈಡಿಗ ಸಮುದಾದ ಸ್ವಾಮೀಜಿಗಳಾದ ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಎಸ್.ಎನ್.ಜಿ.ವಿ.ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷರು ಪದಾಧಿಕಾರಿಗಳು, ಈಡಿಗ ಸಂಘದ ಪದಾಧಿಕಾರಿಗಳು. ಶಿವಮೊಗ್ಗ ಜಿಲ್ಲೆಯ ಮುಖಂಡರಾದ ತಂಟಿ ಕಾಳನಾಯ್ಕ, ವಕೀಲ ಕುಬಟಳ್ಳಿ ರಾಮಚಂದ್ರ ಮತ್ತಿತರರು ಭಾಗವಹಿಸಿದ್ದರು.ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್,ಉಡುಪಿ ಶಾಸಕ ರಘುಪತಿಭಟ್, ಮಾಜಿ ಶಾಸಕ ಜೀವರಾಜ್ ಮತ್ತಿತರರಿದ್ದರು.

ಮುಖ್ಯಮಂತ್ರಿಗಳು ಈಡಿಗ ಅಭಿವೃದ್ಧಿ ನಿಗಮ ಘೋಷಣೆ ಮಾಡಿರುವುದು ಸಂತೋಷವಾಗಿದೆ. ಬಹುಕಾಲದ ಬೇಡಿಕೆ ಈಗ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಕೋರಲಾಗಿದೆ.ಸಮುದಾಯದ ಇನ್ನಷ್ಟು ಬೇಡಿಕೆಗಳನ್ನು ಸರಕಾರ ಈಡೆರಿಸುವ ಭರವಸೆ ಇದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಸವರಾಜ್ ಬೊಮ್ಮಾಯಿ ಅವರನ್ನು ಕೃತಜ್ಞತೆ ಸಲ್ಲಿಸುವೆ.

ಹರತಾಳು ಹಾಲಪ್ಪ, ಶಾಸಕರು, ಸಾಗರ

Ad Widget

Related posts

ಅಪಘಾತ : ಕಟ್ಟೆಹಕ್ಲು ಹೆಡ್ ಮಾಸ್ಟರ್ ವೆಂಕಟೇಶ್ ಸಾವು

Malenadu Mirror Desk

ಶಿವಮೊಗ್ಗದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸ್ಥಳಪರಿಶೀಲನೆ, ಕೇಂದ್ರ ಸರಕಾರದಿಂದ 20 ಕೋಟಿ ಅನುದಾನನ ಬಿಡುಗಡೆ ಭರವಸೆ: ಸಂಸದ ಬಿ.ವೈ.ರಾಘವೇಂದ್ರ

Malenadu Mirror Desk

ಎಂಎಲ್‌ಸಿ ಸ್ಥಾನಕ್ಕೆ ಶೀಘ್ರ ರಾಜೀನಾಮೆ ನೀಡುವೆ
ಈಶ್ವರಪ್ಪ ಮತ್ತವರ ಮಗನ ವಿರುದ್ಧ ಚುನಾವಣೆಗೆ ಸ್ಪರ್ಧಿಸುವೆ ಎಂದ ಆಯನೂರು ಮಂಜುನಾಥ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.