ನಗರ,ಜ.೧೫: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಮಂಗಳೂರಿನಿಂದ ಬೆಂಗಳೂರಿನ ವರೆಗೆ ನಡೆಯುತ್ತಿರುವ ಪಾದಯಾತ್ರೆಯು ಭಾನುವಾರ ಹೊಸನಗರ ತಾಲೂಕು ಮಾಸ್ತಿಕಟ್ಟೆಯಿಂದ ನಗರಕ್ಕೆ ಪ್ರವೇಶ ಮಾಡಿತು.
ಒಂಬತ್ತನೇ ದಿನದ ಈ ಪಾದಯಾತ್ರೆಯು ಮಾಸ್ತಿಕಟ್ಟೆ ಯಿಂದ ಪ್ರಾರಂಭಿಸಿ ನಿಲ್ಸ್‌ಗಲ್ ಗ್ರಾಮದಲ್ಲಿ ಮಧ್ಯಾಹ್ನದ ಜಾಗೃತಿ ಸಭೆ ಯೊಂದಿಗೆ ಪ್ರಸಾದ ಸ್ವೀಕರಿಸಿ ಸಂಜೆ ಬಿದನೂರು ನಗರಕ್ಕೆ ಪ್ರವೇಶಿಸಿತು. ಅಲ್ಲಿನ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜಾಗೃತಿ ಸಭೆ ನಡೆಸಲಾಯಿತು.
ನಗರಕ್ಕೆ ಪ್ರವೇಶ ಮಾಡುತಿದ್ದಂತೆ ಪ್ರಣವಾನಂದ ಶ್ರೀಗಳನ್ನು ಸ್ವಾಗತಿಸಿ ಗೌರವಿಸಲಾಯಿತು. ಲಯನ್ ಹೆಚ್. ವಾಸಪ್ಪ ಮಾಸ್ತಿಕಟ್ಟೆ, ಮುರಳೀಧರ ಜಿ ಈ, ದೇವಣ್ಣಗುಡ್ಡೆಕೊಪ್ಪ, ಗೋಪಾಲ್ , ದೇವಮ್ಮ, ಏರಗಿ ಉಮೇಶ್, ಮುಡುಬರಾಘವೇಂದ್ರ, ಶಿವು ಹೊದ್ಲ , ಸತೀಶ್ ಬೇಗುವಳ್ಳಿ, ಶ್ರೀಧರ್ ಗುಡ್ಡೆ ಕೊಪ್ಪ, ಲೋಕೇಶ್ ಮಸಗಲ್ಲಿ, ನಗರ ನಿತಿನ್ ,ನಾಗರಾಜ್ , ಶುಭಾಶ್ ನಗರ, ಕಿರಣ್, ರುದ್ರ ನಾಯ್ಕ್ ಹಿಲ್ಕುಂಜಿ ಮತ್ತಿತರರ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.