Malenadu Mitra
ರಾಜ್ಯ

ನಗರ,ಹೊಸನಗರದಲ್ಲಿ ಪ್ರಣವಾನಂದ ಶ್ರೀಗಳ ಪಾದಯಾತ್ರೆ ಅದ್ದೂರಿ ಸ್ವಾಗತ

ನಗರ,ಜ.೧೫: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಮಂಗಳೂರಿನಿಂದ ಬೆಂಗಳೂರಿನ ವರೆಗೆ ನಡೆಯುತ್ತಿರುವ ಪಾದಯಾತ್ರೆಯು ಭಾನುವಾರ ಹೊಸನಗರ ತಾಲೂಕು ಮಾಸ್ತಿಕಟ್ಟೆಯಿಂದ ನಗರಕ್ಕೆ ಪ್ರವೇಶ ಮಾಡಿತು.
ಒಂಬತ್ತನೇ ದಿನದ ಈ ಪಾದಯಾತ್ರೆಯು ಮಾಸ್ತಿಕಟ್ಟೆ ಯಿಂದ ಪ್ರಾರಂಭಿಸಿ ನಿಲ್ಸ್‌ಗಲ್ ಗ್ರಾಮದಲ್ಲಿ ಮಧ್ಯಾಹ್ನದ ಜಾಗೃತಿ ಸಭೆ ಯೊಂದಿಗೆ ಪ್ರಸಾದ ಸ್ವೀಕರಿಸಿ ಸಂಜೆ ಬಿದನೂರು ನಗರಕ್ಕೆ ಪ್ರವೇಶಿಸಿತು. ಅಲ್ಲಿನ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜಾಗೃತಿ ಸಭೆ ನಡೆಸಲಾಯಿತು.
ನಗರಕ್ಕೆ ಪ್ರವೇಶ ಮಾಡುತಿದ್ದಂತೆ ಪ್ರಣವಾನಂದ ಶ್ರೀಗಳನ್ನು ಸ್ವಾಗತಿಸಿ ಗೌರವಿಸಲಾಯಿತು. ಲಯನ್ ಹೆಚ್. ವಾಸಪ್ಪ ಮಾಸ್ತಿಕಟ್ಟೆ, ಮುರಳೀಧರ ಜಿ ಈ, ದೇವಣ್ಣಗುಡ್ಡೆಕೊಪ್ಪ, ಗೋಪಾಲ್ , ದೇವಮ್ಮ, ಏರಗಿ ಉಮೇಶ್, ಮುಡುಬರಾಘವೇಂದ್ರ, ಶಿವು ಹೊದ್ಲ , ಸತೀಶ್ ಬೇಗುವಳ್ಳಿ, ಶ್ರೀಧರ್ ಗುಡ್ಡೆ ಕೊಪ್ಪ, ಲೋಕೇಶ್ ಮಸಗಲ್ಲಿ, ನಗರ ನಿತಿನ್ ,ನಾಗರಾಜ್ , ಶುಭಾಶ್ ನಗರ, ಕಿರಣ್, ರುದ್ರ ನಾಯ್ಕ್ ಹಿಲ್ಕುಂಜಿ ಮತ್ತಿತರರ ಮುಖಂಡರು, ಮಹಿಳೆಯರು ಪಾಲ್ಗೊಂಡಿದ್ದರು.


ಸಂಜೆ ವೇಳೆಗೆ ನಗರದಿಂದ ಜಯನಗರ ಮೂಲಕ ಹೊಸನಗರಕ್ಕೆ ಪಾದಯಾತ್ರೆಯು ತಲುಪಿತು. ಹೊಸನಗರ ಪಟ್ಟಣ ಪ್ರವೇಶಕ್ಕೂ ಮುನ್ನ ಕಲ್ಲಳ್ಳದಿಂದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಈ ಸಂದರ್ಭ ನಡೆದ ಜನ ಜಾಗೃತಿ ಸಭೆಯಲ್ಲಿ ಶ್ರೀಗಳು ಪಾದಯಾತ್ರೆ ಉದ್ದೇಶ ಮತ್ತು ಈಡಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆ ಮತ್ತು ಮಾಡಬೇಕಿರುವ ಹೋರಾಟದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭ ಪ್ರಮುಖರಾದ ಬಿ.ಪಿ.ರಾಮಚಂದ್ರ, ಸುಮತಿ ಪೂಜಾರ್, ವೆಂಕಟೇಶ್ ನಾಯ್ಕ್, ಲೇಖನಮೂರ್ತಿ, ಸುನೀಲ್,ಗುರುರಾಜ್ ಮತ್ತಿತರರು ಭಾಗವಹಿಸಿದ್ದರು.

Ad Widget

Related posts

ಬ್ಯಾಕೋಡು ಶಾಲೆ ಚಂದಗಾಣಿಸಿದ ಕನ್ನಡ ಮನಸುಗಳು

Malenadu Mirror Desk

ಕುವೆಂಪು ವಿವಿಬೋಧಕೇತರ ನೌಕರರಿಗೆ ವೇತನ ನಿಗದೀಕರಣ

Malenadu Mirror Desk

ಲಕ್ಷ ಲಕ್ಷ ಕಂಠಗಳ ಕನ್ನಡ ಗೀತಗಾಯನಕ್ಕೆ ಧ್ವನಿಗೂಡಿಸಿದ ಕುವೆಂಪು ವಿವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.