Malenadu Mitra
ರಾಜ್ಯ ಶಿವಮೊಗ್ಗ

ಹೋರಿ ಹಬ್ಬದಲ್ಲಿ ಹೋರಿ ತಿವಿದು ಇಬ್ಬರು ಸಾವು

ಶಿವಮೊಗ್ಗ,ಜ.೧೬: ಸಂಕ್ರಾಂತಿ ಹಬ್ಬದ ಹೋರಿ ಬೆದರಿಸುವ ಸ್ಪರ್ಧೆ ಸಂದರ್ಭ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಜೀವಕಳೆದುಕೊಂಡಿದ್ದಾರೆ.
ಶಿವಮೊಗ್ಗ ತಾಲೂಕು ಕೊನಗವಳ್ಳಿಯಲ್ಲಿಹೋರಿ ತಿವಿದ ಕಾರಣ ಶಿವಮೊಗ್ಗ ಆಲ್ಕೊಳದ ಲೋಕೇಶ್(೩೪) ಮೃತಪಟ್ಟಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆ ನೋಡುತ್ತಿದ್ದ ನಿಂತಿದ್ದ ಲೋಕೇಶ್‌ಗೆ ಹೋರಿ ತಿವಿದ ಕಾರಣ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಅಸುನೀಗಿದ.
ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕು ಮಳೂರು ಗ್ರಾಮದಲ್ಲಿ ನಡೆದ ಹೋರಿಹಬ್ಬದಲ್ಲಿ ರಂಗನಾಥ್(೨೪) ಹೋರಿ ತಿವಿತದಿಂದಾಗಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

Ad Widget

Related posts

ರೌಡಿ ಹಂದಿ ಅಣ್ಣಿ ಕೊಲೆ ,ಶಿವಮೊಗ್ಗ ವಿನೋಬನಗರ ಪೊಲೀಸ್ ಚೌಕಿಯಲ್ಲಿ ಹಾಡ ಹಗಲೇ ಬೆಚ್ಚಿ ಬೀಳಿಸಿದ ದುಷ್ಕರ್ಮಿಗಳ ಕೃತ್ಯ

Malenadu Mirror Desk

ಸೊರಬದಲ್ಲಿ ಸೋದರರ ಸವಾಲಿಲ್ಲ, ಪಕ್ಷಗಳ ನಡುವೆ ಹೋರಾಟ: ಮಧು ಬಂಗಾರಪ್ಪ

Malenadu Mirror Desk

ಜಾತಿ ಸಮೀಕ್ಷೆ ಅನುಷ್ಠಾನಕ್ಕೆ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.