ಶಿವಮೊಗ್ಗ,ಜ.೨೫: ಸರ್ಕಾರ ಈಡಿಗರನ್ನ ನಿರ್ಲಕ್ಷಿಸುತ್ತಿದ್ದು, ಬಿಎಸ್ ಯಡಿಯೂರಪ್ಪ ವಚನ ಭ್ರಷ್ಟರಾಗಿದ್ದಾರೆ. ಬೊಮ್ಮಾಯಿ ಸಹ ಬೇಡಿಕೆ ಈಡೇರಿಸಲಿಲ್ಲ.ಹಾಗಾಗಿ ಈಡಿಗ ಸಮುದಾಯದ ಬೇಡಿಕೆಗೆ ಒತ್ತಾಯಿಸಿ ಮಂಗಳೂರಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಕೈಗೊಂಡಿದ್ದೇನೆ ಎಂದು ನಾರಾಯಣಗುರು ಶಕ್ತಿಪೀಠದ ಸ್ವಾಮೀಜಿ ಪ್ರಣಾವಾನಂದ ಶ್ರೀಗಳು ತಿಳಿಸಿದರು
ಮಾಧ್ಯಮಗಳಿಗೆ ಮಾತನಾಡಿ, ನಿಗಮ ಮಂಡಳಿ ರಚನೆ ಸಿಗಂದೂರು ಚೌಡೇಶ್ವರಿಯ ದೇವಸ್ಥಾನದಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಬೇಕು. ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈಗ ೩೮೦ ಕಿ.ಮಿ. ಕ್ರಮಿಸಿ ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದರು.
ಈಡಿಗರ ಬಿಲ್ಲವರ ಸ್ವಾಬಿಮಾನದ ಕರೆಯಾಗಿದೆ. ಬಂಗಾರಪ್ಪ ಬಿಜೆಪಿಗೆ ಬಂದ ನಂತರ ಬಿಎಸ್‌ವೈಗೆ ಶಕ್ತಿ ಬಂದಿದೆ. ಹಾಗಾಗಿ ಬಂಗಾರಪ್ಪನವರ ಹೆಸರು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದರು.
ನನ್ನ ಆರೋಗ್ಯಕ್ಕೆ ತೊಂದರೆ ಇದೆ. ಆರೋಗದಲ್ಲಿ ಏರುಪೇರಾದರೆ ರಾಜ್ಯ ಸರ್ಕಾರವೇ ಜವಾಬ್ದಾರಿ, ಎರಡು ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ದಾವಣಗೆರೆಯಿಂದ ಉಪವಾಸದ ಮೂಲಕವೇ ಪಾದಯಾತ್ರೆ ನಡೆಯಲಿದೆ ಎಂದು ಪ್ರಣವಾನಂದ ಶ್ರೀ ಹೇಳಿದರು.
ಈ ಸಂದರ್ಭ ಈಡಿಗ ಸಮಾಜದ ಪ್ರಮುಖರಾದ ಕಲಗೋಡು ರತ್ನಾಕರ, ಆರ್. ಶ್ರೀಧರ್, ಎಸ್.ಸಿ. ರಾಮಚಂದ್ರ, ಜಿ.ಡಿ. ಮಂಜುನಾಥ್, ಹೊನ್ನಪ್ಪ ,
ಕಾಗೋಡು ರಾಮಪ್ಪ
ಮತ್ತಿತರರು ಉಪಸ್ಥಿತರಿದ್ದರು.